Thursday 9 April 2015

ಯಾಕೋ ಅಸೀಮನೆಯ ಕೊಟ್ಟಿಗೆ ಸಂಸ್ಕ್ರತಿ ನೆನಪಾಯ್ತು

ಗುತ್ತಿ, ಕೆಂಪಿ, ಕಾಡಮ್ಮ, ಕರಿಯಮ್ಮ, ಕಾಲಿ, ಪುಟ್ಟಿ,
ಅಸೀಮನೆಯ ಕೊಟ್ಟಿಗೆಯಲ್ಲಿದ್ದ ಮಲೆನಾಡು ಗಿಡ್ಡ ತಳಿಯ ದನಗಳು..
ರೂಪ ಬಣ್ಣ ಹಾಗೂ ಆಕಾರಕ್ಕೆ ತಕ್ಕಂತೆ ಅಲ್ಲಿ ದನಗಳಿಗೆ ಹೆಸರು ಇಡಲಾಗ್ತಿತ್ತು..
ಗುತ್ತಿಯ ಅಮ್ಮನನ್ನು ಗೌರಿಹಳ್ಳದಲ್ಲಿ ಮೇಯುತ್ತಿದ್ದಾಗ ಕುರ್ಕ ಹೊತ್ತಿತಂತೆ..
ಕೆಂಪಿಗೆ ನೆಲ್ಲಿ ಉಬ್ಬಲ್ಲಿ ರಣ ಹೊಡೀತು ಅಂತ ಅಜ್ಜಯ್ಯ ಹೇಳ್ತಿದ್ರು..
ಕಾಡಮ್ಮ ಈಚಲು ಗುಡ್ಡದಲ್ಲಿ ತಪ್ಪಿಸಿಕೊಂಡಿತ್ತು; 2 ತಿಂಗಳಾದ ಮೇಲೆ ವಾಪಾಸು ಬಂತು..
ಕರಿಯಮ್ಮ ತೋಟದ ಕಪ್ಪಿಗೆ ಬಿದ್ದು ಕಾಲು ಮುರಿದುಕೊಂಡಿತ್ತು; ಸಾಯುವ ತನಕ ಕುಂಟುತ್ತಲೇ ಓಡಾಡುತ್ತಿತ್ತು ಪಾಪ..
ಸೊಪ್ಪಿನ ದರಗು ಸದ್ದು ಮಾಡುತ್ತಾ ಕೊಟ್ಟಿಗೆಯಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಮಕ್ಕಳು ಕಾಲಿ ಹಾಗೂ ಪುಟ್ಟಿ..
***
ಯಾಕೋ ಅಸೀಮನೆಯ ಕೊಟ್ಟಿಗೆ ಸಂಸ್ಕ್ರತಿ ನೆನಪಾಯ್ತು.. ಬಾಲ್ಯದ ಕೆಲವು ಘಟನೆಗಳು "ಮರೆತೇನೆಂದರೂ ಮರೆಯಲಿ ಹ್ಯಾಂಗ"
-ವಿಶ್ವಾಸ್ ಭಾರದ್ವಾಜ್

No comments:

Post a Comment