Thursday 9 April 2015

Fine ಅಹಂಕಾರ ಇರಲೇ ಬೇಕು..

ನಮ್ಮೆಲ್ಲರಲ್ಲಿ ಒಂದು ವಿಕೃತ ಅಹಂಕಾರ ವಿನಾಕಾರಣ ಮನೆ ಮಾಡಿರುತ್ತದೆ..
Fine ಅಹಂಕಾರ ಇರಲೇ ಬೇಕು.. ಯಾಕಂದ್ರೆ ನಾವು ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ.. ಜಗತ್ತಿನ ಎಲ್ಲಾ ಆಳುವ ದೊರೆಗಳಿಗೆ ಮೊದಲ ಸಮರ್ಥ ಪ್ರತಿಪಕ್ಷ ನಾವೇ.. ನಮ್ಮಷ್ಟು ಖಂಡ ತುಂಡವಾಗಿ ಟೀಕಿಸುವ ನೈತಿಕತೆ ಅದ್ಯಾರಿಗಿದೆ..
ನಾವು ದೊಡ್ಡ ಮನುಷ್ಯರು, ಮಹಾಜ್ಞಾನಿಗಳು, ವಿದ್ವಾಂಸರು, ನಾವು ಜಗತ್ತಿಗೆ ಆಚಾರ ಹೇಳುವ ಬುದ್ದಿಜೀವಿಗಳು...
ನಮ್ಮ ಕಿರೀಟದ ಪ್ರಕಾಶದಡಿಯಲ್ಲೇ ಪ್ರಪಂಚ ಬೆಳಕು ಕಾಣುತ್ತದೆ..
ನಮ್ಮ ಕೋಳಿ ಮಾತ್ರವೇ ಕೂಗಿ ಪ್ರಪಂಚವನ್ನು ಎಬ್ಬಿಸುತ್ತದೆ..
ನಮ್ಮದು ಪ್ರಖಾಂಡ ಪಾಂಡಿತ್ಯವೇ ಬಿಡಿ..
64 ವಿದ್ಯೆ ಅನ್ನೋದಿದೆಯಲ್ಲ ಅದು ಅರೆದು ಕುಡಿದಷ್ಟೇ ಸಲೀಸು, 65ನೆಯದು ಯಾಕಿಲ್ಲ ಅಂತ ಒಮ್ಮೊಮ್ಮೆ ಯೋಚಿಸುವುದಿದೆ..
ನಮ್ಮ ಜ್ಞಾನದ ನರ, ವಿವೇಕದ ಹಲ್ಲು, ಸಾತ್ವಿಕ ಅಹಂ ಹುಟ್ಟಿನಂದಲೇ ಅಡರಿಕೊಂಡಿರುವ ಗುಣ.. ಸ್ವಾಭಿಮಾನ, ಆತ್ಮಗೌರವ, ಇವೆಲ್ಲಾ ನಾವೇ ಸೃಷ್ಟಿಸಿಕೊಂಡ ಖುಷಿಕೊಡುವ ವ್ಯಾಧಿ..
Yeah of course ಇವು ಕೇವಲ ನಮಗೆ ಮಾತ್ರವೇ ಇದೆ..
ನಾವು ಅತೀತರು.. ನಾವು ವಿಶ್ವಮಾನ್ಯರು.. ನಾವು ಸರ್ವಶ್ರೇಷ್ಟರು..
ನಮ್ಮ ಒಣ ಅಹಂಕಾರದ ಮೂಲವ್ಯಾಧಿಯಿಂದಾಗಿ ನಾವು ದುಡಿಯುವ ಸಂಸ್ಥೆಗಳಿಗೆ ಕುಷ್ಟ ರೋಗ ಬಡಿಯುತ್ತದೆ; ಬಡಿಯಲಿ..
ನಾವೇ ಕಟ್ಟಿದ್ದ ಉತ್ಸಾಹಶಾಲಿ ಸಂಘಟನೆಗಳು ಸೊರಗಿ ಕೊರಗಿ ನರಳುವ ಕ್ಷಯರೋಗಿಯಂತೆ, ಬತ್ತುವ ನೀರಿನ ಒರತೆಯಂತೆ, ಒಣಗುವ ಗರಿಕೆ ಹುಲ್ಲಿನಂತೆ, ಹೂಬಿಡದೆ ಸಾಯುವ ತುಂಬೇ ಗಿಡದಂತಾಗುತ್ತದೆ; ಆಗಲಿ..
ನಮ್ಮ ಎಣೆ ಮೀರಿದ ತಿಕ್ಕಲುತನಗಳಿಗೆ ಒಂದು ಆರೋಗ್ಯವಂತ ವಾತಾವರಣ ಕಲುಷಿತಗೊಂಡು ಗಟಾರದಲ್ಲಿ ಹರಿವ ವೃಷಭಾವತಿ ನದಿಯಾಗುತ್ತದೆ; ಹಾಳಾಗ್ ಹೋಗ್ಲಿ ಬಿಡ್ರೀ!
ನಮ್ಮ ಅಹಂಕಾರ ಮಾತ್ರ ಸರ್ವಕಾಲಕ್ಕೂ ಶಾಶ್ವತ ಅಜರಾಮರ
ವಾಹ್! ಜೈ ಹೋ...!
-ವಿಶ್ವಾಸ್ ಭಾರದ್ವಾಜ್
(ಅರ್ಥ ಆಗೋರಿಗೆ ಸಮರ್ಪಕವಾಗಿ ಅರ್ಥ ಆದ್ರೆ ಮುಂದ್ರೆ ಒಂದಿಡೀ ವ್ಯವಸ್ಥೆ ಪರಿಶುದ್ಧವಾಗಿಬಿಡುತ್ತೆ.. ಆದ್ರೆ ಅರ್ಥ ಆಗೋದಕ್ಕೂ ಅಹಂಕಾರ ಅಡ್ಡ ಬರದಿದ್ದರೇ ಸಾಕು)

No comments:

Post a Comment