Friday 10 April 2015

ಸುಬ್ಬಣ್ಣ ಮಲೆನಾಡಿನ ಸಂಸ್ಕ್ರತಿ:

ಕೆ.ವಿ ಸುಬ್ಬಣ್ಣ ಒಬ್ಬ ವ್ಯೆಕ್ತಿಯಲ್ಲ..ಅವ್ರು ಮಲೆನಾಡಿನ ಸಂಸ್ಕ್ರತಿ..ಹೇಗೆ ಮಂಗಳೂರಿನ ಕೆನರಾ ಭಾಗಗಳಲ್ಲಿ ಶಿವರಾಮ ಕಾರಂತರು ಕೃಷಿಯಲ್ಲಿದ್ದರೋ ಅದೇ ಕಾಲ ಘಟ್ಟದಲ್ಲಿ ಕೆ.ವಿ ಸುಬ್ಬಣ್ಣ ಅನ್ನುವ ದೈತ್ಯ ಶಕ್ತಿ ಮಲೆನಾಡಿನಲ್ಲಿ ಮರೆಯಾಗಿ ನಿಂತು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು..
ನಿಗರ್ವಿ, ಸರಳ ಮನುಷ್ಯ ಸುಬ್ಬಣ್ಣರನ್ನು ನೋಡಿದ್ರೆ ಒಬ್ಬ ಮಲೆನಾಡಿನ ವೃದ್ಧ ರೈತನ್ನು ನೋಡಿದಂತಾಗುತಿತ್ತು..ಅಷ್ಟರ ಮಟ್ಟಿಗೆ ಕೆ.ವಿ.ಎಸ್ ಗರ್ವಹೀನ...
ಪ್ರಾಯಶಃ ನಾನು ಡಿಗ್ರೀ ಓದುತ್ತಿದ್ದಾಗಲೆ ಸಕ್ರಿಯ ಪತ್ರಿಕೋದ್ಯಮಕ್ಕೆ ಅಡಿಯಿಡಲು ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರೇರಣಾ ಶಕ್ತಿಯೇ ಕೆ.ವಿ ಸುಬ್ಬಣ್ಣ...
ಸುಬ್ಬಣ್ಣ ಅವರ ಮೊಮ್ಮಗ ಶಿಶಿರ ನನಗಿಂತ ವಯಸ್ಸಿನಲ್ಲಿ ದೊಡ್ಡವನು..ನಾನು ಪಿಯೂಸಿ ಓದುತ್ತಿರುವಾಗ ಆತ ಪದವಿ ಕಲಿಯುತ್ತಿದ್ದ..
ಮೊದಲ ಬಾರಿಗೆ ಸುಬ್ಬಣ್ಣರನ್ನು ನೋಡಿದ್ದ ಅನುಭವ ಇನ್ನೂ ಸ್ಮೃತಿ ಪಟಲದಲ್ಲಿ ಮಾಸದೆ ಉಳಿದುಕೊಂಡಿದೆ..ನೀನಾಸಂ (ನೀಲಕಂಟೇಶ್ವರ ನಾಟ್ಯ ಸಂಘ) ಹುಟ್ಟು ಹಾಕುವ ಹಿನ್ನೆಲೆ ಕೆ.ವಿ.ಎಸ್ರ ಅನವರತ ಪರಿಶ್ರಮ ಅಗಾಧ ಉತ್ಸಾಹ ಬಹುಶಃ ಈ ತಲೆಮಾರಿನವರಿಗೆ ಅಸಾಧ್ಯ..
ಅದೇ ಉದ್ದೇಶದಿಂದ ನನ್ನ ಅಜ್ಜ ದುಗ್ಗಾಣಿ ಶ್ರೀನಿವಾಸ್ ರಾಯರಿಗೆ ಕೆ.ವಿ ಸುಬ್ಬಣ್ಣ ಪರಿಚಿತರಿರಬೇಕು..ಅಪ್ಪ ಯಾವಾಗ್ಲೂ ಆ ವಿಷಯ ಹೇಳ್ತಿದ್ದರು..ಮೊದಲ ಬಾರಿ ಕೆ.ವಿ ಸುಬ್ಬಣ್ಣ ಅವರನ್ನು ನೋಡಿದ್ದು ನಾನು ಮೊದಲ ವರ್ಷದ ಪಿ.ಯೂ.ಸಿ ಓದುತ್ತಿದ್ದಾಗ..ಶ್ರೀನಿವಾಸ್ ರಾಯರ ಮೊಮ್ಮಗ ಅಂತಲೇ ಪರಿಚಯಿಸಿಕೊಂಡಿದ್ದೆ..ಆಗ ನಾಟಕ, ಸಾಹಿತ್ಯ ಇದ್ಯಾವುದರೆ ಪರಿಚಯವೇ ಇಲ್ಲದ ನನಗೆ ಸುಬ್ಬಣ್ಣ ಆಪ್ತ ಅಂತ ಅನ್ನಿಸುವ ಕಾರಣ ಅವರ ಪರ್ವತದೆತ್ತರದ ವ್ಯೆಕ್ತಿತ್ವ ಮಾತ್ರ..
ಸುಬ್ಬಣ್ಣನವರ ಪುಸ್ತಕದ ವೈಚಾರಿಕತೆ ಅರ್ಥವಾಗುವ ವಯಸ್ಸೂ ನನಗಿರಲಿಲ್ಲ..ಆಗ ಓದುತ್ತಿದ್ದಿದ್ದು ರವಿ ಬೆಳಗೆರೆಯ ಖಾಸ್ ಬಾತ್ ಅಥವಾ ಕಾದಂಬರಿಗಳು, ಅಪರೂಪಕ್ಕೊಮ್ಮೆ ಪ್ರತಾಪ್ ಸಿಂಹರ ಅಂಕಣಗಳು ಅಷ್ಟೇ..
ಎರಡನೇ ವರ್ಷದ ಪಿಯೂಸಿ ಓದುವಾಗ ಸುಬ್ಬಣ್ಣ ತೀರಿಕೊಂಡ್ರು ಅಂದಾಗ ಕಾಡಿದ್ದ ಅದೊಂದು ಶೂನ್ಯ ಭಾವಕ್ಕೆ ಈವರೆಗೆ ಅರ್ಥ ಸಿಕ್ಕಿರಲಿಲ್ಲ,,ಈಗ ಅನ್ನಿಸುತ್ತಿದೆ..ಅದರ ಅರ್ಥ, ಪ್ರಾಯಶಃ ಸುಬ್ಬಣ್ಣ ಇನ್ನಿಲ್ಲ ಅಂದಾಗ ಒಂದಿಡೀ ಸಂಸ್ಕ್ರತಿ ದಿಕ್ಕಟ್ಟು ನಿಂತಿತು ಅನ್ನುವ ಬೇಸರವಿರಬೇಕು..
ಕೆ.ವಿ ಸುಬ್ಬಣ್ಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿದ ವಿಚಾರವಂತರು ಅನ್ನುವ ತಿಳುವಳಿಕೆ ಬಂದಾಗ ಅವರು ನಮ್ಮೊಂದಿಗೆ ಇರಲಿಲ್ಲ..
ಇವತ್ತಿಗೂ ಸುಬ್ಬಣ್ಣರ ಶ್ರಮ ಹುಸಿ ಹೋಗಿಲ್ಲ ಅನ್ನೋದಕ್ಕೆ ಅವರ ಪುಸ್ತಕಗಳಿವೆ, ಅವರ ಚಿಂತನೆಗಳು ಹೆಗ್ಗೋಡಿನ ಬೀದಿಗಳಲ್ಲಿ ಕಾಣುತ್ತವೆ..ಎಲ್ಲದಕ್ಕಿಂತ ಮಿಗಿಲಾಗಿ ಹೆಗ್ಗೋಡಿನ ನೀನಾಸಂ ನಾಟಕ ಶಾಲೆಯಿದೆ, ನೀನಾಸಂ ಸಂಸ್ಕ್ರತಿ ಶಿಬಿರ, ನೀನಾಸಂ ತಿರುಗಾಟ ನಾಟಕಗಳು ಸುಬ್ಬಣ್ಣರ ನೆನಪುಗಳಿಗೆ ನೀರೆರೆಯುತ್ತಿವೆ..
ಸುಬ್ಬಣ್ಣನವರ ಮಗ ಅಕ್ಷರ ಇದ್ದಾರೆ, ಮೊಮ್ಮಗ ಶಿಶಿರ ಸಹ ಎನ್ಎಸ್ಡಿಯಲ್ಲಿ ಕಲಿತು ಬಂದಿದ್ದರೆ..ಆದ್ರೂ ಈಗ ಸುಬ್ಬಣ್ಣ ಇರಬೇಕಿತ್ತು ಅಂತ ಅದೆಷ್ಟು ಬಾರಿ ಅನ್ನಿಸಿದೆಯೋ...!
ಯಾಕೋ ವಿನಾಕಾರಣ ಕೆ.ವಿ ಸುಬ್ಬಣ್ಣ ನೆನಪಾಗಿಬಿಟ್ಟರು...

No comments:

Post a Comment