Friday 10 April 2015

ಸಾಧ್ಯವಾದ್ರೆ ಒಮ್ಮೆ ಆ ಪುಸ್ತಕವನ್ನು ಓದಿ...

ಬಹಳ ವರ್ಷಗಳಿಂದ ಕಾಡುತ್ತಿದ್ದ ಸಾಕಷ್ಟು ಪ್ರಶ್ನೆಗಳಿದ್ದವು..
1. ಆರ್ಯರು ಪಾಶ್ಚಿಮಾತ್ಯ ದೇಶಗಳಿಂದ ಐರೋಪ್ಯ ದೇಶಗಳಿಂದ ಅಥವಾ ಏಷ್ಯಾದ ಬೇರೆ ಭಾಗದಿಂದ ವಲಸೆ ಬಂದ ಜನಾಂಗವೇ..?
2. ಆರ್ಯರು ಹಾಗೂ ದ್ರಾವಿಡರ ನಡುವೆ ಭಿನ್ನಾಭಿಪ್ರಾಯಗಳಿದ್ದವೇ..? ಆ ಎರಡೂ ಪಂಗಡಗಳ ನಡುವೆ ಮಾರಣಾಂತಿಕ ದಾಳಿಗಳಾಗಿದ್ದವೇ..?
3. ಹರಪ್ಪಾ ಮತ್ತು ಮೆಹಂಜದಾರೋಗಳ ನಾಗರೀಕತೆಯ ಮೇಲೆ ಆರ್ಯರು ದಾಳಿ ಮಾಡಿದ್ದು ಸತ್ಯವೇ..?
4. ಆರ್ಯ ಹಾಗೂ ಅನಾರ್ಯರ ನಡುವೆ ವ್ಯೆತ್ಯಾಸಗಳೇನು..?
5. ಜರ್ಮನಿಯ ಆರ್ಯತ್ವಕ್ಕೂ ಮಹಾಭಾರತದ ಆರ್ಯತ್ವಕ್ಕೂ ಮಧ್ಯದ ಸಂಬಂಧ ಎಂಥದ್ದು..?
6. ಆರ್ಯರ ಸಂಸ್ಕ್ರತಿಯಲ್ಲಿ ಈಗಿನಂತೆಯೇ ಜಾತಿ ಪದ್ದತಿ, ಅಸ್ಪೃಶ್ಯತೆಗಳಿದ್ದವೇ..?
7. ಬೌದ್ಧಿಕ ಪ್ರಗತಿಯಲ್ಲಿ ಆರ್ಯರು ಜಗತ್ತಿನ ಎಲ್ಲಾ ಜನಾಂಗಗಳಿಗಿಂತ ಸರ್ವಶ್ರೇಷ್ಟರು ಅನ್ನುವ ಮಾತು ಸತ್ಯವೇ..?
8. ಕೊನೆಯದಾಗಿ ಆರ್ಯರು ಪಶ್ಚಿಮದಿಂದ ಪೂರ್ವಕ್ಕೆ ವಲಸೆ ಬಂದ ಜನಾಂಗವೇ..ಅಥವಾ ಪೂರ್ವದಿಂದ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋದವರೇ..?
ನನ್ನ ಭಾಗಶಃ ಪ್ರಶ್ನೆಗಳಿಗೆ ಒಂದೇ ಪುಸ್ತಕ ಉತ್ತರ ಹೇಳಿತು..ಆ ಪುಸ್ತಕದಲ್ಲಿದ್ದ ಅಂಶಗಳಿಗೆ ಸೂಕ್ತ ಸಂಶೋಧನೆ, ಅಧ್ಯಯನ ಹಾಗೂ ಆಧಾರಗಳೂ ಇವೆ..
ಮ್ಯಾಕ್ಸ್ ಮುಲ್ಲರ್, ಹರ್ಬರ್ಟ್ ರಿಸ್ಲೇಯ ಥಿಯರಿಗಳೇ ಸತ್ಯವೆಂದು ನಂಬಿಕೊಂಡ ವಿಚಾರವಾದಿಗಳು ಆ ಪುಸ್ತಕವನ್ನು ಅಗತ್ಯವಾಗಿ ಹಾಗೂ ಅವಶ್ಯಕವಾಗಿ ಓದಲೇಬೇಕು...
ಪುಸ್ತಕ ಓದಿದ ಮೇಲೆ ಭಾರತೀಯತೆ, ಭರತ ವರ್ಷ ಹಾಗೂ ಪೂರ್ವದ ಪ್ರಾಚೀನ ಸಂಸ್ಕ್ರತಿ ಹಾಗೂ ನಾಗರೀಕತೆಯ ಮೇಲಿನ ಗೌರವ ನೂರು ಪಟ್ಟು ಹೆಚ್ಚಾಯಿತು..
ಅಂದ ಹಾಗೆ ಪುಸ್ತಕದ ಹೆಸರು ಶಿಲಾಕುಲ ವಲಸೆ...ಕರ್ತೃ ಕೆ.ಎನ್ ಗಣೇಶಯ್ಯ...
ಸಾಧ್ಯವಾದ್ರೆ ಒಮ್ಮೆ ಆ ಪುಸ್ತಕವನ್ನು ಓದಿ...
-ವಿಶ್ವಾಸ್ ಭಾರದ್ವಾಜ್

No comments:

Post a Comment