Thursday 9 April 2015

ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ

ಆ ಮುದ್ದಾದ ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ. ಅದಕ್ಕೆ ಬ್ಲಡ್‌ ಕ್ಯಾನ್ಸರ್
ಅದು ಅವನ ಆಪ್ತ ಮಿತ್ರನ ಮಗು. ತುಂಬು ವೇದನೆ ತುಂಬಿಕೊಂಡು ಕ್ಯಾನ್ಸರ್ ಆಸ್ಪತ್ರೆಗೆ ಹೋಗಿದ್ದ ಅವನು.. ಆ ಮಗುವಿನ ದೇಹದಲ್ಲಿ ಸತ್ತ ಬಿಳಿಯ ರಕ್ತ ಕಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿತ್ತು.
ಡಾಕ್ಟರ್ ಈಗ ಕೌಂಟ್ 50 ಸಾವಿರ ದಾಟಿದೆ ಅಂದರು. ಅವನಲ್ಲಿ ಆ ಬೇಸರದ ವೇಳೆಯಲ್ಲಿ ಸಹ ಅದು ಹೇಗೆ ಅಷ್ಟು ನಿಖರವಾಗಿ ವೈಟ್ ಪ್ಲೇಟ್ ಲೆಟ್ಸ್ ಕೌಂಟ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳುವ ಬಯಕೆ ಆಯ್ತು. ಕೇಳಿಯೂ ಬಿಟ್ಟ.
ಮಗುವಿನ ದೇಹದ ಮೇಲೆ ಅಳವಡಿಸಿರುವ ಸ್ಕ್ಯಾನಿಂಗ್ ಮಿಷನ್ ರಕ್ತದಲ್ಲಿ ಬೆಳೆವಣಿಗೆಯಾಗುತ್ತಿರುವ ಬಿಳಿಯ ರಕ್ತಕಣಗಳ ಮೇಲೆ ಲೇಸರ್ ಹಾಯಿಸಿ ಲೆಕ್ಕ ತೆಗೆದುಕೊಳ್ಳುತ್ತದೆ ಅಂದರು ಡಾಕ್ಟರ್.
ಅಬ್ಬಾ! ಎಂತಹ ಟೆಕ್ನಾಲಜಿ.. ಜೈ ಹೋ ವಿಜ್ಞಾನ್ ಎಂಡ್ ತಂತ್ರಜ್ಞಾನ್ ಅಂದುಕೊಂಡನಾತ ಮನಸಿನಲ್ಲೇ.
ಕೆಲವು ಕ್ಷಣಗಳ ಬಳಿಕ ಅದೇ ಡಾಕ್ಟರ್ ಸ್ವಗತದಲ್ಲಿ ಗೊಣಗಿದರು. ಹೀಗೆ ಕೌಂಟ್ ಹೆಚ್ಚುತ್ತಾ ಇದ್ರೆ ಮಗು ಹೆಚ್ಚು ದಿನ ಬದುಕೋಲ್ಲ. ಪ್ಲೇಟ್ಸ್ ಲೆಟ್ಸ್ 1 ಲಕ್ಷ ದಾಟಿದ್ರೆ ಆನಂತರ ಭಗವಂತನೂ ಬದುಕಿಸೋಕಾಗಲ್ಲ..
ಗಾಬರಿಯಿಂದ ಹಿಂತಿರುಗಿ ಡಾಕ್ಟರ್ ನ್ನು ನೋಡಿದ ಅವನ ಬಾಯಿಂದ ಉದ್ಗಾರ ಹೊರಬಂದಿತ್ತು. ಬ್ಲಡಿ ಸೈನ್ಸ್ ಎಂಡ್ ಟೆಕ್ನಾಲಜಿ ಇದು ಸಾವಿನ ಸೂಚನೆ ನೀಡತ್ತೆ.

No comments:

Post a Comment