Thursday 9 April 2015

ಪುಟ್ಕತೆ:

ಬದುಕಿನ ಸವಾಲುಗಳಿಗೆ ಹೆದರಿ ಓಡಿ ಬಂದ ದಾರಿಯ ಕಡೆಗೆ ಹಿಂತಿರುಗಿ ನೋಡಿದ್ದವನಿಗೆ ಕಂಡಿದ್ದು ದಣಿವು, ಆಯಾಸ, ಬಾಯಾರಿಕೆ ಹಾಗೂ ಒಂದು ಸಣ್ಣ ನಿರ್ಲಿಪ್ತಿ ಮಾತ್ರ..
ಬದುಕನ್ನು ನೋಡುವ ದಾಟಿ ಬದಲಾಯಿಸಿಕೊಳ್ಳಬೇಕು, ಇಲ್ಲವೇ ಹೀಗೆ ಬದುಕಿನ ಸವಾಲುಗಳಿಂದ ನಿರಂತರ ಪರಾರಿಯಾಗುತ್ತಲೇ ಇರಬೇಕು ಅನ್ನಿಸಿದ್ದು ಆ ಹಂತದಲ್ಲೇ..
ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು ಅನ್ನುವ ಬದಲು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ಅನ್ನಿಸಿದ್ದು ಮಾಮೂಲಿಯಂತೆ ಅವನಲ್ಲೂ ಆಗಿದ್ದ ವಾಸ್ತವ..
ಭವಿಷ್ಯದಲ್ಲಿ ಅವನಿಗಾಗಿ ಕಾಯುತ್ತಾ ಕುಳಿತಿದೆ ಹೊಟ್ಟೆ ಬಾಕ ಪೆಡಂಭೂತ;
ಆದರೆ ಜೀವನ ಪ್ರೀತಿ ಚಿಗುರಿದರೆ ಮಾತ್ರ ಕಾಣಿಸುತ್ತದೆ ಆ ಪೆಡಂಭೂತದ ಮಗ್ಗುಲಲ್ಲೇ ನಿರಮ್ಮಳವಾಗಿ ನಸುನಗೆಯ ಬೀರುತ್ತಾ ಕುಳಿತ ಸ್ನಿಗ್ದ ಸೌಂದರ್ಯವತಿ ಅಭಿಸಾರಿಕೆ..

No comments:

Post a Comment