Friday, 10 April 2015

THE SIMPLE WAY OF HYPING THE ISSUE IN ELECTRONIC MEDIA:


===============================
(ಕಾಲ್ಪನಿಕ ಸಂದರ್ಭ: ಗುದ್ಲೀ ಗೋಪಾಲಿ, ಬಸ್ ಸ್ಟಾಂಡ್ ರಾಘು ಅನ್ನೋದು ಇಬ್ಬರು ರಾಜಕೀಯ ನೇತಾರರ ಹೆಸರು.. ಒಂದೇ ಪಕ್ಷವಾದ್ರೂ ಇಬ್ಬರ ಮಧ್ಯೆ ಬಹಿರಂಗ ಕಲಹವಾಗಿತ್ತು.. ಈ ಹಿಂದೆ ತಾರಕಕ್ಕೇರಿದ್ದ ಮುನಿಸು ಬದಲಾದ ರಾಜಕೀಯ ಪರಿಸ್ಥಿತಿಯ ಕಾರಣ ಸಂಧಾನವೇರ್ಪಟ್ಟಿದೆ..ಇಬ್ಬರಲ್ಲೊಬ್ಬರು ಉಪಚುನಾವಣೆಗೆ ನಿಂತು ಸ್ಫರ್ಧಿಸುತ್ತಿದ್ದಾರೆ, ಹಾಗಾಗಿ ಅನಿವಾರ್ಯವಾಗಿ ಈಗ ಆ ಇಬ್ಬರೂ ಗಳಸ್ಯ ಕಂಠಸ್ಯ ಗೆಳೆಯರು)
===============================
ಬೆಳ್ಳಂಬೆಳಿಗ್ಗೆ...
ಹಿಂದೆ ಹಲವು ಕಾಲದಿಂದ ಶರಂಪರ ಕಿತ್ತಾಡ್ಕೋತಿದ್ದ ಬಸ್ ಸ್ಟಾಂಡ್ ರಾಘು ಎಂಡ್ ಗುದ್ಲೀ ಗೋಪಾಲಿ ಕಾಂಪ್ರೋಮೈಸ್ ಆದ್ರಂತೆ...
ಹಾಕ್ರಪ್ಪ ಹಾಕ್ರಪ್ಪ ಬ್ರೇಕಿಂಗ್ ನ್ಯೂಸ್..
------------------------
ಫಸ್ಟ್ ನ್ಯೂಸ್ನ ಫಸ್ಟ್ ಹೆಡ್ಲೈನ್:
"ಶಿವಮೊಗ್ಗದಲ್ಲಿ ಮುಗಿದ ರಣಭೀಕರ ಗ್ಯಾಂಗ್ವಾರು - ಬಸ್ ಸ್ಟಾಂಡ್ ರಾಘು, ಗುದ್ಲೀ ಗೋಪಾಲಿ ದೋಸ್ತಿ ಜೋರು - ಒಂದೇ ಅಡ್ಡದಲ್ಲಿ ಕೂತು ಜಿಗ್ರಿಗಳು ದರ್ಬಾರು"
------------------------
ರಿಪೋರ್ಟರ್ ಕಳಿಸಿ ಬೈಟ್ ತಗೊಳಿ..ನೆಕ್ಸ್ಟ್ ಬುಲೇಟಿನ್ಗೆ ಫೋನೋ ಬರಕ್ಕೆ ಹೇಳಿ..
ಬಸ್ ಸ್ಟಾಂಡ್ ರಾಘು ಸಿಕ್ತಿಲ್ವಾ..? ಯಾಕ್ರೀ ಅಲ್ಲಿ ಆ ಚಾನಲ್ಗೆ ಫೋನೋ ಕೊಟ್ಟಿದ್ದಾರಲ್ರೀ..? ಅದೆಲ್ಲಾ ಗೊತ್ತಿಲ್ಲ ಓಬಿ ಕಳಿಸಿ ಲೈವ್ ಬರೋಕೆ ಹೇಳಿ..! ಗುದ್ಲೀ ಗೋಪಾಲಿ ಲೊಕೇಷನ್ ಎಲ್ರೀ..?
-----------------------
ಸ್ಪೆಷಲ್ ಸೆಗ್ಮೆಂಟ್ ರೆಡಿ ಮಾಡಿ ಪ್ರೋಮೋ ಕೊಡಿ..
"ಬಸ್ ಸ್ಟಾಂಡ್ -ಗುದ್ಲೀ ದೋಸ್ತೀ"
=====
ಶಿವಮೊಗ್ಗದಲ್ಲಿ ಕಂಡ ಕಂಡಲ್ಲಿ ಲಟಿಗೆ ಮುರೀತಿದ್ದ ಗುದ್ಲೀ ಗೋಪ ಹಾಗೂ ಬಸ್ ಸ್ಟಾಂಡ್ ರಾಘು ಕೊನೆಗೂ ಕಾಂಪ್ರೊಮೈಸ್ ಆಗಿದ್ದಾರೆ..ಈ ಮೂಲಕ ಎರಡೂ ಬಣಗಳ ನಡುವೆ ಹಲವು ಕಾಲದಿಂದ ನಡೆಯುತ್ತಿದ್ದ ಗ್ಯಾಂಗ್ ವಾರ್ ನಿಂತಂಗೆ ಆಗಿದೆ...ಇದು ಈ ಹೊತ್ತಿನ ವಿಶೇಷ " ಬಸ್ ಸ್ಟಾಂಡ್ -ಗುದ್ಲೀ ದೋಸ್ತೀ"
---------------------------
ಇತ್ತೀಚೆಗೆ ದೊಡ್ಡವ್ರ ಖಾಸಗಿ ಅಡ್ಡೆಯಲ್ಲಿ ನಡೆದ ಸಿಟ್ಟಿಂಗ್ನಲ್ಲಿ ಇಬ್ರಿಗೂ ರಾಜೀ ಮಾಡಿಸಲಾಗಿದೆಯಂತೆ.. ಹೀಗಂತ ಮೂಲಗಳು ತಿಳಿಸಿವೆ..
-----
ಇನ್ನು ಕಾಂಪ್ರೊಮೈಸ್ ಆದ ಖುಷಿಯಲ್ಲಿರುವ ಗುದ್ಲೀ ಗೋಪಾಲಿ, ಶಿಕಾರಿಪುರದ ಬಸ್ ಸ್ಟಾಂಡ್ ರಾಘ್ಯಾನ ಅಡ್ಡಾದಲ್ಲಿ ಕೂತು ಭರ್ಜರಿ ಪರಾಕು ಹೇಳ್ತಾ ಇದ್ದಾನಂತೆ...
-----
ಬಸ್ ಸ್ಟಾಂಡ್ ರಾಘು ಕೂಡಾ ತಾನೇನು ಕಮ್ಮಿ ಇಲ್ಲ ಅಂತ, ಗುದ್ಲೀ ಗೋಪಾಲಿ ಹಟ್ಟಿಯಲ್ಲಿ ಬಾಡೂಟ ಮಾಡಿ ಹೋದನಂತೆ..
-----
ಬಸ್ ಸ್ಟಾಂಡ್ -ಗುದ್ಲೀ ಜಿಗ್ರೀ ದೋಸ್ತಿಗೆ ಅಸಲು ಕಾರಣಗಳೇನು ಅಂತ ನೋಡೋಣ ಒಂದು ಸಣ್ಣ ಬ್ರೇಕ್ನ ನಂತ್ರ
-----------------------------
ಪ್ಯಾನಲ್ ಡಿಸ್ಕಷನ್ಗೆ ಪ್ಲಾನ್ ಮಾಡ್ರೀ..ಗೆಸ್ಟ್ ಲೈನ್ ಅಪ್ ಮಾಡ್ರಿ..ಹೈಪ್ ಮಾಡ್ಕೊಳಿ ಇಷ್ಯೂನ..ಇಲ್ಲಾಂದ್ರೆ ಆ ಚಾನೆಲ್ ನವ್ರು ಎತ್ಕೋತಾರೆ..
ಗುದ್ಲೀ ಗೋಪಾಲಿ ಕಡೆಯವರು, ಬಸ್ ಸ್ಟಾಂಡ್ ರಾಘು ಕಡೆಯವ್ರನ್ನ ಸ್ಟೂಡಿಯೋಗೆ ಕರೆಸ್ರೀ..
------------------------------
ಇವತ್ತಿಡೀ ಇಷ್ಯೂನ ಎಳೆದ್ರೂ ನಾಳೆಗೆ ಫಾಲೋ ಅಪ್ ಇರಲೀ..ಈ ವೀಕ್ ಕಂಪ್ಲೀಟ್ ಇಷ್ಯೂನ ಫಾಲೋ ಮಾಡಿ...
======================================
(ಈಗ ಗೊತ್ತಾಯ್ತಾ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹೈಪ್ ಮಾಡ್ಕೊಳ್ಳೋದ್ ಅಂದ್ರೆ ಹೇಗೆ ಅಂತ)
-ವಿಶ್ವಾಸ್ ಭಾರದ್ವಾಜ್

No comments:

Post a Comment