Monday 15 June 2015

ನನ್ನ ಫೈಂಡಿಂಗ್ಸ್..:

ನನ್ನ ಫೈಂಡಿಂಗ್ಸ್..:
ಪ್ರತಿಯೊಬ್ಬ ಪುರುಷರಲ್ಲೂ ಸ್ತ್ರೀತ್ವವಿದೆ.. ಬೇಸರ, ಹತಾಶೆ, ಆರ್ದ್ರತೆ, ಕನಿಕರ, ಪ್ರೀತಿ, ವಾತ್ಸಲ್ಯ, ಮಮಕಾರ, ಅಂತಃಕರಣಗಳು ಸ್ತ್ರೀತ್ವದ ಲಕ್ಷಣಗಳು ಒಪ್ಕೋತೀರಾ..!!?
ಇನ್ನು ಪ್ರತಿ ಸ್ತ್ರೀಯರಲ್ಲೂ ಪುರುಷತ್ವವಿದೆ.. ಗಡಸು, ಅಹಂ, ಪೊಗರು, ತಿಮಿರು, ಗಾಂಭಿರ್ಯ, ಠೀವಿ, ಅಕ್ರಮಣಶೀಲತೆ, ದಾರ್ಷ್ಟತೆ, ದಿಮಾಕು ಇವೆಲ್ಲವೂ ಪುರುಷತ್ವದ ಲಕ್ಷಣಗಳು ಅಲ್ವೇನ್ರಪ್ಪ..!!?
ಪ್ರಾಯಶಃ ಇದೇ ಅರ್ಧನಾರೀಶ್ವರ ತತ್ವ ಅನ್ಸುತ್ತೆ..!!
ನಿಮ್ಮ ಅನುಭವಕ್ಕೆ ಬಂದಿದ್ರೆ ಮಾತ್ರ ಒಪ್ಕೊಳಿ ಇಲ್ಲಾಂದ್ರೆ ಒತ್ತಾಯ ಏನಿಲ್ಲ..
ಸಾಮೂಹಿಕವಾಗಿ ನಮ್ಮ ಒಳ ಹೊರಗನ್ನು ಸೃಷ್ಟಿಸಿ ರೂಪಾಂತರಿಸಿ ನಡೆಸುತ್ತಿರುವ ಪ್ರಕೃತಿ ಮಾತೆಗೊಂದು ಜೈ ಅಂದು ಬಿಡೋಣ..

No comments:

Post a Comment