Monday 15 June 2015

ಈಗ!! ಬಕೆಟ್ ಹಿಡಿಯೋದನ್ನು ಪ್ರಾಕ್ಟೀಸ್ ಮಾಡ್ಕಳಣಾ ಅಂತಿದ್ದೀನಿ..

ಈಗ!! ಬಕೆಟ್ ಹಿಡಿಯೋದನ್ನು ಪ್ರಾಕ್ಟೀಸ್ ಮಾಡ್ಕಳಣಾ ಅಂತಿದ್ದೀನಿ..
ನೀನು ಇಂದ್ರ ನೀನು ಚಂದ್ರ ನೀನೇ ಸುರ್ ಸುಂದ್ರ ಅಂತ ಯರ್ರಾಬಿರ್ರಿ ಹೊಗೊಳೋದು.. ಅವನು ನೋಡೋದಕ್ಕೆ ಕರಿ ಹೆಗ್ಗಣದ ಥರ ಇರ್ಲೀ ಬೇಕಿದ್ರೆ..
***
ಆಮೇಲೆ!! ನೀನ್ ಬಿಡಪ್ಪ ಬ್ರಹಸ್ಪತಿ, ಸಕಲ ವಿದ್ಯಾಪಾರಂಗತ, ಸಕಲಕಲಾವಲ್ಲಭ,, ನಿನ್ನ ಬುದ್ದಿ ಇದ್ಯಲ್ಲ ಅದು ಹಿಂದೆ ಪುರಾಣಗಳಲ್ಲಿ ಸರಸ್ವತಿ ಮಾತೆಗೆ ಮಾತ್ರ ಇತ್ತು ನೋಡು ಅನ್ನೋದು.. ಆ ಪುಣ್ಯಾತ್ಮನ ತಲೆ, ಎದೆ ಒತ್ತಟ್ಟಿಗಿರ್ಲಿ, ಇಡೀ ದೇಹವನ್ನು ಅಂಗುಲ ಅಂಗುಲ ಸೀಳಿದ್ರೂ ಎರಡಕ್ಷರ ಹುಟ್ಟೋದಿಲ್ಲ ಅನ್ನೋದು ಫ್ಯಾಕ್ಟ್..
***
ಇನ್ನೊಂದ್ ಇದೆ ನೋಡು!! ನೀನು ವೀರಾಧಿ ವೀರ, ಶೂರ, ರಣಧೀರ.. ನಿನ್ನ ಖತ್ತಿ, ಈಟಿ,
ಪರಶು ಶ್ಯಾನೆ ಶಾರ್ಪು.. ನೀನು ಘರ್ಜನೆ ಮಾಡಿದೆ ಅಂತಿಟ್ಕೋ ಹುಲಿ, ಸಿಂಹ, ಕರಡಿ, ಚಿರತೆಗಳೆಲ್ಲಾ ಕಾಡಿನ ಗವಿ ಒಳಗೆ ಹೊಕ್ಕಂಡ್ ಕದ್ದಡಗ್ತಾವೆ ಅನ್ನೋದು.. ಆ ಬಡ್ಡಿಮಗ ಒಂದೊಂದ್ ಸಲ ಒಳಚಡ್ಡಿಯಲ್ಲಿ ಒಂದಾ ಮಾಡ್ಕೋತಾನೆ ಅನ್ನೋದು ಗೊತ್ತಿದ್ದವ್ರಿಗೇ ಗೊತ್ತು ಅಂತಿಟ್ಕೋ..!!
***
ಇವೆಲ್ಲಾ ಡಿಫೆರೆಂಟ್ ಡಿಫರೆಂಟ್ ಬಕೀಟ್ ಗಳು.. ಕೆಲವರದ್ದು ಗೋಲ್ಡನ್ ಬಕೀಟ್, ಕೆಲವರದ್ದು ಸಿಲ್ವರ್ರು, ಇನ್ನೂ ಕೆಲವರದ್ದು ಡೈಮಂಡು, ಪ್ಲಾಟಿನಮ್ಮು..
ಬಾಯಿಗೆ ಮಣ್ಣಾಕಾ ಯಾಕ್ ಕೇಳ್ತೀರಾ..!! ನಮ್ಮ ಮೀಡಿಯಾದಲ್ಲೂ ಅವೇ ವರೈಟಿ ವರೈಟಿ ಬಕೀಟ್ ಗಳು.. ಅವನ್ನು ಯಾವ ಮಟೀರಿಯಲ್ಲು ಅಂತ ಗುರುತಿಸೋದೆ ಕಷ್ಟ..

No comments:

Post a Comment