Friday 8 May 2015

ಈ ಬುದ್ದಿ ಜೀವಿಗಳಿಗೆ ಒಂದ್ ಸಲ ಜೈ ಕಾರ ಹಾಕ್ರಪ್ಪ..

ಟೌನ್ ಹಾಲ್ ಹತ್ರ ಭಗವದ್ಗೀತೆ ಅಭಿಯಾನದ ವಿರುದ್ಧ ಪ್ರತಿಭಟನೆ ನಡಿತಾ ಇತ್ತು..
ಹೌದ್ರೀ, ಭಗವದ್ಗೀತೆ ಸುಟ್ಟು ಹಾಕೋಣ,, ಅದ್ರಲ್ಲಿ ಏನಿದೆ ಮಣ್ಣು..? ಇಷ್ಟಕ್ಕೂ ಅದನ್ನು ಬರೆದ ಕೃಷ್ಣ - ಸವರ್ಣೀಯರ ದೇವರು.. ಮೇಲಾಗಿ ಮೋಸಗಾರ ಕಳ್ಳ.. ಪುರಾಣ ಯುಗಗಳು, ದಶಾವತಾರ, ಹಿಂದೂ ಧರ್ಮ, ದೇವರು ಎಲ್ಲವೂ ಸುಳ್ಳು..
***
ಭಗವದ್ಗೀತೆಯಲ್ಲಿ ಇವೆಲ್ಲವೂ ಉಲ್ಲೇಖಿಸಲ್ಪಟ್ಟಿವೆ; ಖಂಡಿತಾ ಅವೆಲ್ಲವೂ ಸುಳ್ಳು ಬಿಡಿ..
ಕರ್ಮಮಾರ್ಗ,
ಭಕ್ತಿಮಾರ್ಗ,
ಮುಕ್ತಿ ಮಾರ್ಗ ಇವೆಲ್ಲವೂ ಸುಳ್ಳು..

ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.. ಈ ಚತುರ್ವೇದಗಳೇ ದೊಡ್ಡ ಸುಳ್ಳಿನ ಕಂತೆ..
ಗೀತೆಯಲ್ಲಿ ಈ ಕೆಳಗಿನ ಸಂಸ್ಕಾರಗಳಿವೆ:
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
ಎಲ್ಲಾ ಬ್ರಾಹ್ಮಣರಿಗೆ ಮಾತ್ರ ಅರ್ಥ ಆಗೋ ಅಂತದ್ದು.. ನಮಗೆ ಬೇಡ..
ನಾಲ್ಕು ಯುಗಗಳಿವೆಯಂತೆ:
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
ಸವರ್ಣೀಯ ದೇವ್ರದ್ದು, ನಮಗೆ ಅದ್ರ ಬಗ್ಗೆ ಗೊತ್ತಿಲ್ಲ.. ಹಂಗಾಗಿ ಇದೂ ಸುಳ್ಳು; ನಾವ್ ನಂಬಲ್ಲ
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
ಅನ್ನೋ ನಾಲ್ಕು ಪುರುಷಾರ್ಥಗಳಿದೆಯಂತೆ; ಎಲ್ಲಾ ಕಟ್ಟು ಕಥೆ,, ಸುಳ್ಳು
ಸತ್ವ ,
ರಜ ,
ತಮ.
ಅನ್ನೋ ಮೂರು ಪ್ರಾಕೃತಿಕ ಗುಣಗಳ ಬಗ್ಗೆ ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ.. ಅದೂ ಸುಳ್ಳೇ..
ಇನ್ನು ಗೀತೆಯ ವಿಶ್ವರೂಪ ದರ್ಶನದಲ್ಲಿ ಕಪಟಿ ಕೃಷ್ಣನ ದಶಾವತಾರಗಳಿವೆ
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ
ನಮಗೆ ಪೂಜೆ ಮಾಡಕ್ಕೆ ಬಿಟ್ಟಿಲ್ಲ ಹಂಗಾಗಿ ಅವನು ದೇವರೇ ಅಲ್ಲ..
ಇದು ದಲಿತರ ರಾಜ್ಯ.. ದಲಿತರಿಗೆ ಸವಣೀರ್ಯರಿಂದ ಅನ್ಯಾಯ ಆಗಿದೆ.. ಹಾಗಾಗಿ ದಲಿತರೇ ತಮ್ಮ ದೇವರನ್ನು ಸೃಷ್ಟಿಸಿಕೊಳ್ತಾರೆ.. ಆ ದೇವರ ಪೂಜಿಸೋದೆ ಧರ್ಮ ಆಗಬೇಕು.. ಅದಕ್ಕೊಂದು ಧರ್ಮಗ್ರಂಥ ಕೂಡಾ ರಚನೆ ಆಗಬೇಕು.. ಸತ್ಯ, ಅಹಿಂಸೆ, ನ್ಯಾಯ, ನಿಜವಾದ ಧರ್ಮ ಇದೆಲ್ಲದರ ಬಗ್ಗೆ ದಲಿತರ ಪರವಾಗಿ ನಮ್ಮ ಬೃಹಸ್ಪತಿ ಬುದ್ದಿಜೀವಿಗಳು ಹೊಸ ವ್ಯಾಖ್ಯಾನ ಮಾಡ್ತಾರೆ..
ಇನ್ಮುಂದೆ ಭಗವದ್ಗೀತೆ ಬದಲಿಗೆ ಪರ್ಯಾಯವಾಗಿ ಇನ್ನೊಂದ್ಯಾವುದೋ ಧರ್ಮಗ್ರಂಥನಾ ಈ ಸೋ ಕಾಲ್ಡ್ ಬುದ್ದಿಜೀವಿಗಳು ದಲಿತರ ಕಲ್ಯಾಣಕ್ಕಾಗಿ ಮಾಡ್ತಾರಂತೆ.. ನಾವು ಅದನ್ನೇ ಪಾರಾಯಣ ಮಾಡಬೇಕಂತೆ..
***
ಇದೇ ನಿಜವಾದ ಅರ್ಥದಲ್ಲಿ ದಲಿತ ಚಳುವಳಿ.. ನಮ್ಮೂರಲ್ಲಿ ದಲಿತರಿಗೆ ಎರಡು ಹೊತ್ತು ಸರಿಯಾದ ಊಟ ಸಿಕ್ತಿಲ್ಲ.. ದಲಿತರ ಮನೆ ಮಕ್ಕಳಿಗೆ ಶಿಕ್ಷಣ ಕೊಡಕ್ಕಾಗ್ತಿಲ್ಲ.. ದಲಿತ ಕಲ್ಯಾಣ ನಿಧಿ ಅಹಿಂದ ರಾಜಕೀಯ ನಾಯಕರ ಹೊಟ್ಟೆಗೆ ಹೋಗ್ತಿದೆ.. ಅದ್ಯಾವುದು ಮುಖ್ಯ ಅಲ್ಲ ಕಣ್ರೀ..
ಭಗವದ್ಗೀತೆ ಸುಟ್ಟು ಹಾಕಬೇಕು ಆಗ ಮಾತ್ರ ದಲಿತರು ಉದ್ಧಾರ ಆಗ್ತಾರೆ..
ಈ ಬುದ್ದಿ ಜೀವಿಗಳಿಗೆ ಒಂದ್ ಸಲ ಜೈ ಕಾರ ಹಾಕ್ರಪ್ಪ..

Fine, ನೀನಂದ್ ಹಾಗೆ ಆಗ್ಲಿ ಬಿಡ್​

Fine, ನೀನು ದಕ್ಷಿಣದ ಕಡೆಗೆ ಹೋಗು..ಅಲ್ಲಿ ಕನ್ಯಾಕುಮಾರಿ ತೀರವಿದೆ.. ನಾನು ಉತ್ತರಕ್ಕೆ ಕಾಶ್ಮೀರದ ಕಣಿವೆಯ ಕಡೆಗೆ ಹೋಗ್ತೀನಿ..
ಇಬ್ಬರಿಗೂ ಒಂದು ಡೆಡ್ ಎಂಡ್ ಅಂತ ಬಂದೇ ಬರುತ್ತೆ.. ಅಲ್ಲಿ ನಿಂತು, ಕೂತು ದಣಿವಾರಿಸಿಕೊಂಡು ಯೋಚಿಸೋಣ.
ಇಬ್ಬರೂ ಅಕ್ಕಪಕ್ಕದ ನ್ಯಾಷನಲ್ ಹೈವೇನಲ್ಲಿ ಹೋಗಬಹುದಿತ್ತು.. ಆದರೆ ಇಬ್ಬರ ಮಧ್ಯೆ ಅಡ್ಡ ಬಂದ ಅಥವಾ ಅಡ್ಡ ತಂದ ಅದ್ಯಾವುದೋ ಅಹಂಕಾರವೋ ತಿಕ್ಕಲುತನವೋ ಮತ್ತಿನೆಂತದೋ ಭಾವ, ಪರಸ್ಪರ ವಿರುದ್ಧ ದಿಕ್ಕಿಗೆ ಕೊಂಡೊಯ್ತು.
ಈಗ ನೀನು ಸಾವಿರ ಮೈಲು ಅಸಂಖ್ಯಾತ ಗಾವುದ ದೂರ ಇದ್ದೀಯಾ.. ಬೇಕೆಂದಾಗ ಸಿಗುತ್ತೀಯಾ? ನಮ್ಮ ಅಹಂಕಾರ ನಮ್ಮ ಬದುಕನ್ನೇ ಕೊಂದು ಬಿಡ್ತು.. ಅಲ್ಲವಾ

ಇದೇ ತತ್ವ ಭಾವಗಳಿಗೂ ಸಂಬಂಧಪಡುತ್ತವೆ:

ಸೃಷ್ಟಿಯಲ್ಲಿ ಜೀವಕಣಗಳು ಸಹಜವಾಗಿ ವರ್ತಿಸಿದರೆ ಪ್ರೊಲಿಫಿರೇಶನ್ ಅಂದರೆ ಸಾಮಾನ್ಯ ಪ್ರಕ್ರಿಯೆ
ಅದೇ ಸೃಷ್ಟಿಯಲ್ಲಿ ಜೀವಕಣಗಳು ಅಸಹಜವಾಗಿ ಮೊಳೆತರೆ ಮೆಲಿಗ್ನಸಿ ಹಾಗಂದರೆ ವಿನಾಶ
ಇದೇ ತತ್ವ ಭಾವಗಳಿಗೂ ಸಂಬಂಧಪಡುತ್ತವೆ ಅಲ್ಲವೇ?

ಆ ಮುದ್ದಾದ ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ.

ಆ ಮುದ್ದಾದ ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ. ಅದಕ್ಕೆ ಬ್ಲಡ್‌ ಕ್ಯಾನ್ಸರ್
ಅದು ಅವನ ಆಪ್ತ ಮಿತ್ರನ ಮಗು. ತುಂಬು ವೇದನೆ ತುಂಬಿಕೊಂಡು ಕ್ಯಾನ್ಸರ್ ಆಸ್ಪತ್ರೆಗೆ ಹೋಗಿದ್ದ ಅವನು.. ಆ ಮಗುವಿನ ದೇಹದಲ್ಲಿ ಸತ್ತ ಬಿಳಿಯ ರಕ್ತ ಕಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿತ್ತು.
ಡಾಕ್ಟರ್ ಈಗ ಕೌಂಟ್ 50 ಸಾವಿರ ದಾಟಿದೆ ಅಂದರು. ಅವನಲ್ಲಿ ಆ ಬೇಸರದ ವೇಳೆಯಲ್ಲಿ ಸಹ ಅದು ಹೇಗೆ ಅಷ್ಟು ನಿಖರವಾಗಿ ವೈಟ್ ಪ್ಲೇಟ್ ಲೆಟ್ಸ್ ಕೌಂಟ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳುವ ಬಯಕೆ ಆಯ್ತು. ಕೇಳಿಯೂ ಬಿಟ್ಟ.
ಮಗುವಿನ ದೇಹದ ಮೇಲೆ ಅಳವಡಿಸಿರುವ ಸ್ಕ್ಯಾನಿಂಗ್ ಮಿಷನ್ ರಕ್ತದಲ್ಲಿ ಬೆಳೆವಣಿಗೆಯಾಗುತ್ತಿರುವ ಬಿಳಿಯ ರಕ್ತಕಣಗಳ ಮೇಲೆ ಲೇಸರ್ ಹಾಯಿಸಿ ಲೆಕ್ಕ ತೆಗೆದುಕೊಳ್ಳುತ್ತದೆ ಅಂದರು ಡಾಕ್ಟರ್.
ಅಬ್ಬಾ! ಎಂತಹ ಟೆಕ್ನಾಲಜಿ.. ಜೈ ಹೋ ವಿಜ್ಞಾನ್ ಎಂಡ್ ತಂತ್ರಜ್ಞಾನ್ ಅಂದುಕೊಂಡನಾತ ಮನಸಿನಲ್ಲೇ.
ಕೆಲವು ಕ್ಷಣಗಳ ಬಳಿಕ ಅದೇ ಡಾಕ್ಟರ್ ಸ್ವಗತದಲ್ಲಿ ಗೊಣಗಿದರು. ಹೀಗೆ ಕೌಂಟ್ ಹೆಚ್ಚುತ್ತಾ ಇದ್ರೆ ಮಗು ಹೆಚ್ಚು ದಿನ ಬದುಕೋಲ್ಲ. ಪ್ಲೇಟ್ಸ್ ಲೆಟ್ಸ್ 1 ಲಕ್ಷ ದಾಟಿದ್ರೆ ಆನಂತರ ಭಗವಂತನೂ ಬದುಕಿಸೋಕಾಗಲ್ಲ..
ಗಾಬರಿಯಿಂದ ಹಿಂತಿರುಗಿ ಡಾಕ್ಟರ್ ನ್ನು ನೋಡಿದ ಅವನ ಬಾಯಿಂದ ಉದ್ಗಾರ ಹೊರಬಂದಿತ್ತು. ಬ್ಲಡಿ ಸೈನ್ಸ್ ಎಂಡ್ ಟೆಕ್ನಾಲಜಿ ಇದು ಸಾವಿನ ಸೂಚನೆ ನೀಡತ್ತೆ.

ಅಬ್ಬಬ್ಬಾ!!!

ಬೆಂಗಳೂರಲ್ಲಿ ಕೆಲವು ಹೆವಿ ಇರಿಟೇಟಿಂಗ್ ಟ್ರಾಫಿಕ್ ಸಿಗ್ನಲ್ ಗಳಿವೆ. ಸಿಲ್ಕ್ ಬೋರ್ಡ್ ಜಂಕ್ಷನ್, ಕೋರಮಂಗಲ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್ ಅದ್ರಲ್ಲಿ ಮುಖ್ಯವಾದವು
ಇದರ ತೀವ್ರತೆಯನ್ನು ವಿವರಿಸೋದಾದ್ರೆ; ಇಲ್ಲಿ ಸಿಕ್ಕಿಕೊಳ್ಳೋ ಸಿಟಿ ಬಸ್ಸಲ್ಲಿ ಹುಡುಗ ಹುಡುಗಿ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ, ಕೊನೆಗೆ ಪ್ರಣಯವಾಗಿ, ಮದುವೆಯಲ್ಲಿ ಕೊನೆಗೊಂಡು, ಮಕ್ಕಳು ಹುಟ್ಟಿದರೂ ಇನ್ನೂ ಟ್ರಾಫಿಕ್ ಸಂಕಟಕ್ಕೆ ವಿಮೂಚನೆ ಸಿಕ್ಕಿರೋಲ್ಲ.

You are as simple as complicate

You are as simple as complicate
ನೀನು...
ಎಷ್ಟು ಸರಳವೋ ಅಷ್ಟೇ ಕ್ಲಿಷ್ಟ
ಎಷ್ಟು ಸುಲಭವೋ ಅಷ್ಟೇ ಕಷ್ಟ
ಎಷ್ಟು ಸರಾಗವೊ ಅಷ್ಟೇ ದುರ್ಗಮ
ಎಷ್ಟು ನೇರವೋ ಅಷ್ಟೇ ವಕ್ರ
ಎಷ್ಟು ನಿರಮ್ಮಳವೋ ಅಷ್ಟೇ ತಳಮಳ
ಯಾಕಂದರೆ
ನೀನು ದ್ವಂದ್ವ
ಅಗೋಚರ ವಾಸ್ತವ

ಧರ್ಮದ ವ್ಯಾಖ್ಯಾನಕ್ಕೆ ನೆತ್ತರ ಹೊಳೆ

ಧರ್ಮ ರಕ್ಷಣೆಗೆ ಯುದ್ಧ ಅನಿವಾರ್ಯ..
ಶಾಂತಿ ಸ್ಥಾಪನೆಗೆ ಸಮರವೇ ಪರಿಹಾರ..
ಶಾಂತಿ ಪ್ರತಿಷ್ಠಾಪನೆಯೇ ಧರ್ಮದ ಮೂಲಧ್ಯೇಯ
ಧರ್ಮದ ವ್ಯಾಖ್ಯಾನಕ್ಕೆ ರಣರಂಗದಲ್ಲಿ ನೆತ್ತರ ಹೊಳೆ ಹರಿಯಲೇಬೇಕು..

ಸುಳ್ಳೂ ಕೂಡಾ ಒಳ್ಳೆಯದೇ..

ವಿಪರೀತ ಸುಳ್ಳು ಹೇಳುವವನು ಒಬ್ಬ ಅಪ್ರತಿಮ ಕಥೆಗಾರ ಸಹ ಆಗಬಹುದು..
ಹೇಳುವ ತರಹೇವಾರಿ ಸುಳ್ಳುಗಳಲ್ಲಿ ಅಪರಿಮಿತಿ ಕಲ್ಪನಾ ವಿಸ್ತಾರವಿರುತ್ತೆ..
ಆ ಕಲ್ಪನೆಗಳ ಮಗ್ಗುಲಲ್ಲೆ ಸೃಷ್ಟಿಯಗುತ್ತೆ ಅದ್ಭುತ ಕಥಾ ಹಂದರ..
So ಸುಳ್ಳು ಹೇಳೋದ್ರಿಂದ ಉಪಯೋಗಗಳಿವೆ..
ಸುಳ್ಳೂ ಕೂಡಾ ಒಳ್ಳೆಯದೇ..

ನಿಯತಿ ಇಂಥವರನ್ನು ಬೇಗ ಕರೆಸಿಕೊಳ್ಳಲಿ

ಇತಿಹಾಸದ ಉದಾಹರಣೆಗಳಿದ್ದರೂ, ವರ್ತಮಾನದಲ್ಲಿ ಸಹ ಆಗಾಗ ಹುಚ್ಚುದೊರೆಗಳು ಹುಟ್ಟುತ್ತಲೇ ಇರುತ್ತಾರೆ. ಯಾರು ಹೇಳಿದ್ದು ತುಘಲಕ್ ಸತ್ತು ಹೋಗಿದ್ದಾನೆ ಅಂತ? ನಮ್ಮ ನಡುವೆಯೇ ಆಗಾಗ ತುಘಲಕ್ ಗಳು ಕಾಣಿಸಿಕೊಳ್ಳುತ್ತಾರೆ. ಕರಿ ಕಾಗೆಯನ್ನು ಬಿಳಿಯ ಪಾರಿವಾಳ ಮಾಡುವ ಹುಚ್ಚು ಆದೇಶಗಳನ್ನು ಜಾರಿಗೆ ತಂದುಬಿಡುತ್ತಾರೆ.. ಅದಕ್ಕೆ ಅಹುದುಹುದೆನ್ನುವ ನೂರಾರು ವಂಧಿಮಾಗದರು ತಿಕ್ಕಲು ಸಾಮ್ರಾಟರ ಮಗ್ಗುಲಲ್ಲೇ ಇರುತ್ತಾರೆ..
ಆಸ್ಥಾನ ನರ್ತಕಿಯರು, ವಿದೂಷಕರು, ಕಲಾವಿದರು ಮತ್ತೆ ಮತ್ತೆ ಈ ಹುಚ್ಚುದೊರೆಗೆ ಪರಾಕು ಹೇಳಿ ನೆತ್ತಿಗೆ ಪಿತ್ತ ಏರಿಸುತ್ತಾರೆ.
ಪಾಪದ ಪ್ರಜೆಗಳಿಗೆ ಆಡಲಾರದ ಅನುಭವಿಸಲಾರದ ಪಡಿಪಾಟಲು ಧರ್ಮಸಂಕಟ..
ನಿಯತಿ ಇಂಥವರನ್ನು ಬೇಗ ಕರೆಸಿಕೊಳ್ಳಲಿ ಪ್ರಜೆಗಳು ನಿಟ್ಟುಸಿರುಬಿಡುತ್ತಾರೆ..

ಮತಿಹೀನ ಮಹಾಮಹಿಮ:


ಈ ಮೂಢ, ಮುಟ್ಟಾಳ, ಮರುಳ ಮಹಾಶಯನಿಗೆ ಜ್ಞಾನದ ಗಂಧಗಾಳಿಯೇ ಇಲ್ಲ
ಆದರೂ ಸಿಂಹಾಸನವೇರಿ ಪವಡಿಸಿದ್ದಾನೆ ಕೃಪಾ ಕಟಾಕ್ಷದ ಭಿಕ್ಷೆಯ ಬಲದಲ್ಲಿ
ಇಹಕೂ-ಪರಕ್ಕೂ ಬೇಡವಾದವನಿಗೆ ಅಲ್ಲಿ ನರಕದಲಿ ಜಾಗವಿಲ್ಲ
ಇನ್ನೂ ಸತ್ತಿಲ್ಲ ಪುಣ್ಯಾತ್ಮ ಆಳ ಸಮುದ್ರ ಹೊಕ್ಕರೂ ಮುಳುಗುವುದಿಲ್ಲ

ಅಲ್ಲಿಂದಿಲ್ಲಿಗೆ ಬೆಂಕಿ ಹಚ್ಚಿ; ಮನೆಯೊಡೆದು ಮಾಳಿಗೆಯ
-ತೊಲೆ ರೀಪು ಪಕಾಸಿಗಳ ಕಿತ್ತು ಚಳಿ ಕಾಯಿಸುತ್ತಾನೆ ದುಷ್ಟ ಕೂಟ ನೇತಾರ
ಅವರಿವರ ಕಿವಿಯೂದಿ ಚಾಡಿ ಚುಚ್ಚುವ ಹಸಿವೈಶ್ಯೆಯ ಚಾಳಿಯವನ-
ಕಂಡರೆ ಭೂತ, ಪ್ರೇತ, ಪಿಶಾಚಿ, ಪೆಡಂಭೂತ, ಬ್ರಹ್ಮರಾಕ್ಷಸಗಳೂ ಮಾರು ದೂರ
ಕಡು ಚೇಷ್ಟೆಯ ಮರ್ಕಟದ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ಇವನ ಪರಮಾಧಿಕಾರ
ಒಬ್ಬ ಬ್ರಹ್ಮಚಾರಿ ಶತ ಕೋತಿಗಳ ಕೂಟಕ್ಕೆ ಸಮನಾದ ಭಂಡ
ಹಾಗಂತ ಈತ ನೈಷ್ಟಿಕ ಬ್ರಹ್ಮಚಾರಿಯಲ್ಲ; ಶುದ್ಧ ನೈತಿಕ ಸಂಸಾರಿಯೂ ಅಲ್ಲ
ಅಲ್ಲಲ್ಲಿ ಸಿಕ್ಕಲ್ಲಿ ಸಿಕ್ಕಷ್ಟು ದೋಚಿ ಉಂಡು, ಕೊನೆಗೆ ಮನೆಗೂ ನಿಷ್ಟನಲ್ಲದ ದಂಡಪಿಂಡ
ಇವನೊಬ್ಬ ಹೆಂಬೇಡಿ, ಹೇತಲಾಂಡಿ ಅವಕಾಶವಾದ ಮೂರ್ಖ
ಸಮಯ ಸಾಧಕ ಮಹಾಮಹಿಮ ಘನ ತಿಕ್ಕಲು ಪುಕ್ಕಲು ಕೊರಮ ಖದೀಮ
ಬಾಯಿ ಬಿಟ್ಟರೇ ಬಣ್ಣಗೇಡಿಯಂತಾಗುವ ಅಲ್ಪ ಪಾಮರಮತಿ
ತನ್ನನ್ನು ತಾನೇ ತೃಪ್ತಿಗೊಳಿಸಿ ಬೀಗುತ್ತಾನೆ ಮೇರು ಪಂಡಿತನಂತೆ
ಇವನ ಪಾಂಡಿತ್ಯಕ್ಕಷ್ಟು ಬೆಂಕಿ ಹಾಕ; ಮೂರರ ಮಗ್ಗಿ ಬರುತ್ತದಾ ಕೇಳಿನೋಡಿ!
ಇವನ ಹೆಸರೇಳಿದರೂ ಹಸಿ ಹುಲ್ಲಿಗೆ ಬೆಂಕಿ ಬೀಳುತ್ತದೆ; ಸ್ವಗತ
ಎಲ್ಲಾದರೂ 24 ಕ್ಯಾರೆಟ್ಟಿನ ಅಸಹ್ಯ ಅಂತಿದ್ದರೇ ಅದು ಇವನೇ ಖಂಡಿತ
ವಿನಾಕಾರಣ ಕುಹಕ ನಗೆ ಬೀರಿ ನಗೆಪಾಟಲಾಗುತ್ತಾನೆ ಟೊಣಪ
ತಾನೇ ಸೃಷ್ಟಿಸಿದ ಗಟಾರದಲ್ಲಿ ಮಲಗೆದ್ದು ರಾಡಿ ಮಾಡಿಕೊಳ್ಳುವ ಭೂಪ
ಅದೇ ಹೊಲಸನ್ನು ಉಳಿದವರಿಗೂ ಎರಚುತ್ತಾನೆ ಪಾಪಿ
ಈತ ಅಂತರಂಗದಲ್ಲೂ ಸೌಂದರ್ಯವಿಹೀನ ಪರಮ ಕುರೂಪಿ
ವಿಕೃತಿಗಳನ್ನೇ ಪೋಷಿಸಿ ಆರಾಧಿಸುವುದೇ ಈ ವಿಘ್ನ ಸಂತೋಷಿಗೆ ಮೋದ
ಶಿರದ ಮೇಲೆ ಕರವಾಡಿಸುವ ಬುದ್ದಿಗಳ ಎಂಜಲೇ ಇವನಿಗೆ ಮಹಾಪ್ರಸಾದ
ಸಂಸ್ಕ್ರತಿ-ಸಂಸ್ಕಾರಗಳಿಗೂ ಇವನಿಗೂ ಬಹುದೂರ ಅಂತರ
ಹುಟ್ಟಿನಿಂದಲೇ ಅಸಂಬದ್ಧ ವರ್ತಿಸುವ ವಿತಂಡವಾದಿ ವೀರ!?
ಇವನ ಹಿಂಬಾಲಿಸುವ ಅನುಯಾ(ನಾ)ಯಿಗಳಿಗೂ ಗೊತ್ತು ಇವನ ಪ್ರವರ
ಈತನದ್ದು ಅಸಮರ್ಥ, ಅಜ್ಞಾನಿ ಕೂಪಮಂಡೂಕದ ಅಹಂಕಾರ
ಕೊಟ್ಟ ಕುದುರೆಯ ಮೇಲೂ ಕೂರದೆ ಹೇಶಾರವಗೈವ ಅತೃಪ್ತ ಆತ್ಮನೀತ
ವ್ಯಕ್ತಿತ್ವದಲ್ಲಿ ದುರ್ನಾತ ನಾರುವ ಗಲೀಜು ಸಂಜಾತ
ತೊಳೆದಷ್ಟೂ ಹಬ್ಬಿ ದುರ್ಗಂಧವೆಬ್ಬಿಸುತ್ತಿದೆ ಇವನ ಜನ್ಮಜಾತಕ
ಇನ್ನೊಂದು ಪದ, ವಾಕ್ಯ ಬರೆದರದು ಸರಸ್ವತಿ ತಾಯಿಗೆ ಅಪಮಾನ
-ವಿಶ್ವಾಸ್ ಭಾರದ್ವಾಜ್

ಮತ್ತೆ ದೊಡ್ಡಪ್ಪನ ಪಾದವೇ ಗತಿ

ಇಷ್ಟು ದಿನ ದೊಡ್ಡಪ್ಪನ ಪಂಚೆಯ ಗಂಟು ಹಿಡಿದು ನೇತಾಡುತ್ತಿದ್ದ ನಮ್ಮ ಸಾಗರ-ಸಿದ್ದಾಪುರ-ಸಿರಸಿ ಕಡೆಯ ಮಾಣಿಗಳಿಗೆ ಪಾಪ ಈಗ ಮೂಲವ್ಯಾಧಿ ಸಂಕಟ.. ಯಾಕಂದರೇ ದೊಡ್ಡಪ್ಪನಿಗೆ ಅತಿಸಾರ, ವಾಂತಿಬೇದಿ.. ಒಂದೇ ಸಮನೆ ರಚ್ಚೆ ಹಿಡಿದು ಗೊಳೋ ಅನ್ನುತ್ತಿವೆ ಮಾಣಿಗಳು.. ಮತ್ತೆ ದೊಡ್ಡಪ್ಪನ ಪಾದವೇ ಗತಿ.. ಈ ಮಾಣಿಗಳಿಗೆ ಒಂದು ಗತಿ ಕಾಣಿಸೋ ದೊಡ್ಡಪ್ಪ!!

ಈ ಒಂಟಿ ಬ್ರಾಹ್ಮಣನ ಅನಿಷ್ಟ ಮುಖ ನೋಡಿದೆ

ಬೆಳ್ಳಂಬೆಳಿಗ್ಗೆ ಎದ್ದು ಪ್ರಾತಃರ್ವಿಧಿಗಳನ್ನು ಮುಗಿಸಿ, ಶುಭ್ರವಾಗಿ ಸ್ನಾನ ಮಾಡಿ, ರೇಷ್ಮೇ ಮಡಿಯುಟ್ಟು ದೇವಸ್ಥಾನಕ್ಕೆ ಹೋಗಿ; ನಮಸ್ಕಾರ ಮಾಡಿ ಅಲ್ಲಿಂದ ಅಪ್ಪಣ್ಣ ಭಟ್ಟರ ಮನೆಗೆ ಹೋಗಬೇಕು ಅಂದುಕೊಂಡು ಜೋಡು ಮೆಟ್ಟಿದ ಬ್ರಹ್ಮಚಾರಿ ರಾಮಾಶಾಸ್ತ್ರಿ..
ಇವತ್ತು ಅಪ್ಪಣ್ಣ ಭಟ್ಟರ ಮಗಳು ಸೀತಾಲಕ್ಷ್ಮಿಯನ್ನು ತನಗೆ ಮದುವೆ ಮಾಡಿ ಕೊಡುತ್ತಾರಾ ಅನ್ನುವ ವಿಷಯ ಪ್ರಸ್ಥಾಪಿಸುವ ಯೋಜನೆ ರಾಮಾಶಾಸ್ತ್ರಿಯದ್ದಾಗಿತ್ತು..
ಅಷ್ಟರಲ್ಲಿ,
ಎದುರಿನಿಂದ ಪಕ್ಕದ ಮನೆಯ ಗಾಜು ಕಣ್ಣಿನ ಕಂದು ಮಾಳುಬೆಕ್ಕು ರಸ್ತೆ ದಾಟಿತು..
"ತತ್ತೇರಿಕೆ ಇದೊಂದು ಪ್ರಾರಬ್ಧ ಅಡ್ಡ ಬಂತು.. ಅದೂ ಮುಂಡೇದು ಎಡದಿಕ್ಕಿನಿಂದ ಬಲಕ್ಕೆ ಹೊಕ್ಕಿತು.. ಇನ್ನು ಹೋದ ಕೆಲಸ ಆದ ಹಾಗೆ.. ಬೆಳ್ ಬೆಳಿಗ್ಗೆ ಇದೊಂದು ಅಪಶಕುನ ಬೇಡಿತ್ತು.." ಗೊಣಗಾಡಿಕೊಂಡು ಮನೆ ಕಡೆಗೆ ನಡೆದ ರಾಮಾಶಾಸ್ತ್ರಿ..
ರಾಮಾಶಾಸ್ತ್ರಿಯನ್ನು ಒಂದು ಕ್ಷಣ ಗುರುಗುಟ್ಟಿಕೊಂಡು ನೋಡಿದ ಆ ಮಾಳುಬೆಕ್ಕು -"ತಥ್! ಯಾವುದೋ ಒಳ್ಳೇ ಕೆಲಸಕ್ಕೆ ಅಂತ ಹೊರಟಿದ್ದೆ, ಬೆಳ್ ಬೆಳಿಗ್ಗೆ ಈ ಒಂಟಿ ಬ್ರಾಹ್ಮಣನ ಮುಖ ನೋಡಿದೆ.. ಅಲ್ಲಿಗೆ ಇವತ್ತಿನ ನನ್ ಕೆಲಸ ಆದ ಹಾಗೇನೇ?" ಗೊಣಗುಟ್ಟಿಕೊಂಡು ಕಾಂಪೌಂಡ್ ಹತ್ತಿ ನೆಗೆದು ಹೋಯ್ತು ಮಾರ್ಜಾಲ..