Friday 10 April 2015

ಪುಟ್ಕವಿತೆ

ಅವಳ ಕಣ್ಣೀರಿಗೆ ಕರಗಿದ ಮೂರ್ಖ ಬಣ್ಣ
ಮುಖದ ಕಾಂತಿಯನ್ನೇ ಕುಂದಿಸಿತು
ಕಂಬನಿ ಧಾರೆಯ ಕರೆ ಕೆನ್ನೆಗೆ ಮೆತ್ತಿ
ಸ್ನೋ-ಪೌಡರ್ಗಳ ಛಾಯೆ ಅಳಿಸಿತು

ಸುಬ್ಬಣ್ಣ ಮಲೆನಾಡಿನ ಸಂಸ್ಕ್ರತಿ:

ಕೆ.ವಿ ಸುಬ್ಬಣ್ಣ ಒಬ್ಬ ವ್ಯೆಕ್ತಿಯಲ್ಲ..ಅವ್ರು ಮಲೆನಾಡಿನ ಸಂಸ್ಕ್ರತಿ..ಹೇಗೆ ಮಂಗಳೂರಿನ ಕೆನರಾ ಭಾಗಗಳಲ್ಲಿ ಶಿವರಾಮ ಕಾರಂತರು ಕೃಷಿಯಲ್ಲಿದ್ದರೋ ಅದೇ ಕಾಲ ಘಟ್ಟದಲ್ಲಿ ಕೆ.ವಿ ಸುಬ್ಬಣ್ಣ ಅನ್ನುವ ದೈತ್ಯ ಶಕ್ತಿ ಮಲೆನಾಡಿನಲ್ಲಿ ಮರೆಯಾಗಿ ನಿಂತು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು..
ನಿಗರ್ವಿ, ಸರಳ ಮನುಷ್ಯ ಸುಬ್ಬಣ್ಣರನ್ನು ನೋಡಿದ್ರೆ ಒಬ್ಬ ಮಲೆನಾಡಿನ ವೃದ್ಧ ರೈತನ್ನು ನೋಡಿದಂತಾಗುತಿತ್ತು..ಅಷ್ಟರ ಮಟ್ಟಿಗೆ ಕೆ.ವಿ.ಎಸ್ ಗರ್ವಹೀನ...
ಪ್ರಾಯಶಃ ನಾನು ಡಿಗ್ರೀ ಓದುತ್ತಿದ್ದಾಗಲೆ ಸಕ್ರಿಯ ಪತ್ರಿಕೋದ್ಯಮಕ್ಕೆ ಅಡಿಯಿಡಲು ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರೇರಣಾ ಶಕ್ತಿಯೇ ಕೆ.ವಿ ಸುಬ್ಬಣ್ಣ...
ಸುಬ್ಬಣ್ಣ ಅವರ ಮೊಮ್ಮಗ ಶಿಶಿರ ನನಗಿಂತ ವಯಸ್ಸಿನಲ್ಲಿ ದೊಡ್ಡವನು..ನಾನು ಪಿಯೂಸಿ ಓದುತ್ತಿರುವಾಗ ಆತ ಪದವಿ ಕಲಿಯುತ್ತಿದ್ದ..
ಮೊದಲ ಬಾರಿಗೆ ಸುಬ್ಬಣ್ಣರನ್ನು ನೋಡಿದ್ದ ಅನುಭವ ಇನ್ನೂ ಸ್ಮೃತಿ ಪಟಲದಲ್ಲಿ ಮಾಸದೆ ಉಳಿದುಕೊಂಡಿದೆ..ನೀನಾಸಂ (ನೀಲಕಂಟೇಶ್ವರ ನಾಟ್ಯ ಸಂಘ) ಹುಟ್ಟು ಹಾಕುವ ಹಿನ್ನೆಲೆ ಕೆ.ವಿ.ಎಸ್ರ ಅನವರತ ಪರಿಶ್ರಮ ಅಗಾಧ ಉತ್ಸಾಹ ಬಹುಶಃ ಈ ತಲೆಮಾರಿನವರಿಗೆ ಅಸಾಧ್ಯ..
ಅದೇ ಉದ್ದೇಶದಿಂದ ನನ್ನ ಅಜ್ಜ ದುಗ್ಗಾಣಿ ಶ್ರೀನಿವಾಸ್ ರಾಯರಿಗೆ ಕೆ.ವಿ ಸುಬ್ಬಣ್ಣ ಪರಿಚಿತರಿರಬೇಕು..ಅಪ್ಪ ಯಾವಾಗ್ಲೂ ಆ ವಿಷಯ ಹೇಳ್ತಿದ್ದರು..ಮೊದಲ ಬಾರಿ ಕೆ.ವಿ ಸುಬ್ಬಣ್ಣ ಅವರನ್ನು ನೋಡಿದ್ದು ನಾನು ಮೊದಲ ವರ್ಷದ ಪಿ.ಯೂ.ಸಿ ಓದುತ್ತಿದ್ದಾಗ..ಶ್ರೀನಿವಾಸ್ ರಾಯರ ಮೊಮ್ಮಗ ಅಂತಲೇ ಪರಿಚಯಿಸಿಕೊಂಡಿದ್ದೆ..ಆಗ ನಾಟಕ, ಸಾಹಿತ್ಯ ಇದ್ಯಾವುದರೆ ಪರಿಚಯವೇ ಇಲ್ಲದ ನನಗೆ ಸುಬ್ಬಣ್ಣ ಆಪ್ತ ಅಂತ ಅನ್ನಿಸುವ ಕಾರಣ ಅವರ ಪರ್ವತದೆತ್ತರದ ವ್ಯೆಕ್ತಿತ್ವ ಮಾತ್ರ..
ಸುಬ್ಬಣ್ಣನವರ ಪುಸ್ತಕದ ವೈಚಾರಿಕತೆ ಅರ್ಥವಾಗುವ ವಯಸ್ಸೂ ನನಗಿರಲಿಲ್ಲ..ಆಗ ಓದುತ್ತಿದ್ದಿದ್ದು ರವಿ ಬೆಳಗೆರೆಯ ಖಾಸ್ ಬಾತ್ ಅಥವಾ ಕಾದಂಬರಿಗಳು, ಅಪರೂಪಕ್ಕೊಮ್ಮೆ ಪ್ರತಾಪ್ ಸಿಂಹರ ಅಂಕಣಗಳು ಅಷ್ಟೇ..
ಎರಡನೇ ವರ್ಷದ ಪಿಯೂಸಿ ಓದುವಾಗ ಸುಬ್ಬಣ್ಣ ತೀರಿಕೊಂಡ್ರು ಅಂದಾಗ ಕಾಡಿದ್ದ ಅದೊಂದು ಶೂನ್ಯ ಭಾವಕ್ಕೆ ಈವರೆಗೆ ಅರ್ಥ ಸಿಕ್ಕಿರಲಿಲ್ಲ,,ಈಗ ಅನ್ನಿಸುತ್ತಿದೆ..ಅದರ ಅರ್ಥ, ಪ್ರಾಯಶಃ ಸುಬ್ಬಣ್ಣ ಇನ್ನಿಲ್ಲ ಅಂದಾಗ ಒಂದಿಡೀ ಸಂಸ್ಕ್ರತಿ ದಿಕ್ಕಟ್ಟು ನಿಂತಿತು ಅನ್ನುವ ಬೇಸರವಿರಬೇಕು..
ಕೆ.ವಿ ಸುಬ್ಬಣ್ಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿದ ವಿಚಾರವಂತರು ಅನ್ನುವ ತಿಳುವಳಿಕೆ ಬಂದಾಗ ಅವರು ನಮ್ಮೊಂದಿಗೆ ಇರಲಿಲ್ಲ..
ಇವತ್ತಿಗೂ ಸುಬ್ಬಣ್ಣರ ಶ್ರಮ ಹುಸಿ ಹೋಗಿಲ್ಲ ಅನ್ನೋದಕ್ಕೆ ಅವರ ಪುಸ್ತಕಗಳಿವೆ, ಅವರ ಚಿಂತನೆಗಳು ಹೆಗ್ಗೋಡಿನ ಬೀದಿಗಳಲ್ಲಿ ಕಾಣುತ್ತವೆ..ಎಲ್ಲದಕ್ಕಿಂತ ಮಿಗಿಲಾಗಿ ಹೆಗ್ಗೋಡಿನ ನೀನಾಸಂ ನಾಟಕ ಶಾಲೆಯಿದೆ, ನೀನಾಸಂ ಸಂಸ್ಕ್ರತಿ ಶಿಬಿರ, ನೀನಾಸಂ ತಿರುಗಾಟ ನಾಟಕಗಳು ಸುಬ್ಬಣ್ಣರ ನೆನಪುಗಳಿಗೆ ನೀರೆರೆಯುತ್ತಿವೆ..
ಸುಬ್ಬಣ್ಣನವರ ಮಗ ಅಕ್ಷರ ಇದ್ದಾರೆ, ಮೊಮ್ಮಗ ಶಿಶಿರ ಸಹ ಎನ್ಎಸ್ಡಿಯಲ್ಲಿ ಕಲಿತು ಬಂದಿದ್ದರೆ..ಆದ್ರೂ ಈಗ ಸುಬ್ಬಣ್ಣ ಇರಬೇಕಿತ್ತು ಅಂತ ಅದೆಷ್ಟು ಬಾರಿ ಅನ್ನಿಸಿದೆಯೋ...!
ಯಾಕೋ ವಿನಾಕಾರಣ ಕೆ.ವಿ ಸುಬ್ಬಣ್ಣ ನೆನಪಾಗಿಬಿಟ್ಟರು...

ಸಾಧ್ಯವಾದ್ರೆ ಒಮ್ಮೆ ಆ ಪುಸ್ತಕವನ್ನು ಓದಿ...

ಬಹಳ ವರ್ಷಗಳಿಂದ ಕಾಡುತ್ತಿದ್ದ ಸಾಕಷ್ಟು ಪ್ರಶ್ನೆಗಳಿದ್ದವು..
1. ಆರ್ಯರು ಪಾಶ್ಚಿಮಾತ್ಯ ದೇಶಗಳಿಂದ ಐರೋಪ್ಯ ದೇಶಗಳಿಂದ ಅಥವಾ ಏಷ್ಯಾದ ಬೇರೆ ಭಾಗದಿಂದ ವಲಸೆ ಬಂದ ಜನಾಂಗವೇ..?
2. ಆರ್ಯರು ಹಾಗೂ ದ್ರಾವಿಡರ ನಡುವೆ ಭಿನ್ನಾಭಿಪ್ರಾಯಗಳಿದ್ದವೇ..? ಆ ಎರಡೂ ಪಂಗಡಗಳ ನಡುವೆ ಮಾರಣಾಂತಿಕ ದಾಳಿಗಳಾಗಿದ್ದವೇ..?
3. ಹರಪ್ಪಾ ಮತ್ತು ಮೆಹಂಜದಾರೋಗಳ ನಾಗರೀಕತೆಯ ಮೇಲೆ ಆರ್ಯರು ದಾಳಿ ಮಾಡಿದ್ದು ಸತ್ಯವೇ..?
4. ಆರ್ಯ ಹಾಗೂ ಅನಾರ್ಯರ ನಡುವೆ ವ್ಯೆತ್ಯಾಸಗಳೇನು..?
5. ಜರ್ಮನಿಯ ಆರ್ಯತ್ವಕ್ಕೂ ಮಹಾಭಾರತದ ಆರ್ಯತ್ವಕ್ಕೂ ಮಧ್ಯದ ಸಂಬಂಧ ಎಂಥದ್ದು..?
6. ಆರ್ಯರ ಸಂಸ್ಕ್ರತಿಯಲ್ಲಿ ಈಗಿನಂತೆಯೇ ಜಾತಿ ಪದ್ದತಿ, ಅಸ್ಪೃಶ್ಯತೆಗಳಿದ್ದವೇ..?
7. ಬೌದ್ಧಿಕ ಪ್ರಗತಿಯಲ್ಲಿ ಆರ್ಯರು ಜಗತ್ತಿನ ಎಲ್ಲಾ ಜನಾಂಗಗಳಿಗಿಂತ ಸರ್ವಶ್ರೇಷ್ಟರು ಅನ್ನುವ ಮಾತು ಸತ್ಯವೇ..?
8. ಕೊನೆಯದಾಗಿ ಆರ್ಯರು ಪಶ್ಚಿಮದಿಂದ ಪೂರ್ವಕ್ಕೆ ವಲಸೆ ಬಂದ ಜನಾಂಗವೇ..ಅಥವಾ ಪೂರ್ವದಿಂದ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋದವರೇ..?
ನನ್ನ ಭಾಗಶಃ ಪ್ರಶ್ನೆಗಳಿಗೆ ಒಂದೇ ಪುಸ್ತಕ ಉತ್ತರ ಹೇಳಿತು..ಆ ಪುಸ್ತಕದಲ್ಲಿದ್ದ ಅಂಶಗಳಿಗೆ ಸೂಕ್ತ ಸಂಶೋಧನೆ, ಅಧ್ಯಯನ ಹಾಗೂ ಆಧಾರಗಳೂ ಇವೆ..
ಮ್ಯಾಕ್ಸ್ ಮುಲ್ಲರ್, ಹರ್ಬರ್ಟ್ ರಿಸ್ಲೇಯ ಥಿಯರಿಗಳೇ ಸತ್ಯವೆಂದು ನಂಬಿಕೊಂಡ ವಿಚಾರವಾದಿಗಳು ಆ ಪುಸ್ತಕವನ್ನು ಅಗತ್ಯವಾಗಿ ಹಾಗೂ ಅವಶ್ಯಕವಾಗಿ ಓದಲೇಬೇಕು...
ಪುಸ್ತಕ ಓದಿದ ಮೇಲೆ ಭಾರತೀಯತೆ, ಭರತ ವರ್ಷ ಹಾಗೂ ಪೂರ್ವದ ಪ್ರಾಚೀನ ಸಂಸ್ಕ್ರತಿ ಹಾಗೂ ನಾಗರೀಕತೆಯ ಮೇಲಿನ ಗೌರವ ನೂರು ಪಟ್ಟು ಹೆಚ್ಚಾಯಿತು..
ಅಂದ ಹಾಗೆ ಪುಸ್ತಕದ ಹೆಸರು ಶಿಲಾಕುಲ ವಲಸೆ...ಕರ್ತೃ ಕೆ.ಎನ್ ಗಣೇಶಯ್ಯ...
ಸಾಧ್ಯವಾದ್ರೆ ಒಮ್ಮೆ ಆ ಪುಸ್ತಕವನ್ನು ಓದಿ...
-ವಿಶ್ವಾಸ್ ಭಾರದ್ವಾಜ್

ITS A DISCIPLINE

"JOURNALISM IS NOT JUST A DISCIPLINE, BUT ITS A MIND SET...."
...IF THE SOCIETY WANTS CHANGES IN JOURNALISM THEN WE NEED TO CREATE A MORAL AND ETHICAL JOURNALISTS NOT A CAPITALIST JOURNALIST
-VISHWAS BHARADWAJ

THE SIMPLE WAY OF HYPING THE ISSUE IN ELECTRONIC MEDIA:


===============================
(ಕಾಲ್ಪನಿಕ ಸಂದರ್ಭ: ಗುದ್ಲೀ ಗೋಪಾಲಿ, ಬಸ್ ಸ್ಟಾಂಡ್ ರಾಘು ಅನ್ನೋದು ಇಬ್ಬರು ರಾಜಕೀಯ ನೇತಾರರ ಹೆಸರು.. ಒಂದೇ ಪಕ್ಷವಾದ್ರೂ ಇಬ್ಬರ ಮಧ್ಯೆ ಬಹಿರಂಗ ಕಲಹವಾಗಿತ್ತು.. ಈ ಹಿಂದೆ ತಾರಕಕ್ಕೇರಿದ್ದ ಮುನಿಸು ಬದಲಾದ ರಾಜಕೀಯ ಪರಿಸ್ಥಿತಿಯ ಕಾರಣ ಸಂಧಾನವೇರ್ಪಟ್ಟಿದೆ..ಇಬ್ಬರಲ್ಲೊಬ್ಬರು ಉಪಚುನಾವಣೆಗೆ ನಿಂತು ಸ್ಫರ್ಧಿಸುತ್ತಿದ್ದಾರೆ, ಹಾಗಾಗಿ ಅನಿವಾರ್ಯವಾಗಿ ಈಗ ಆ ಇಬ್ಬರೂ ಗಳಸ್ಯ ಕಂಠಸ್ಯ ಗೆಳೆಯರು)
===============================
ಬೆಳ್ಳಂಬೆಳಿಗ್ಗೆ...
ಹಿಂದೆ ಹಲವು ಕಾಲದಿಂದ ಶರಂಪರ ಕಿತ್ತಾಡ್ಕೋತಿದ್ದ ಬಸ್ ಸ್ಟಾಂಡ್ ರಾಘು ಎಂಡ್ ಗುದ್ಲೀ ಗೋಪಾಲಿ ಕಾಂಪ್ರೋಮೈಸ್ ಆದ್ರಂತೆ...
ಹಾಕ್ರಪ್ಪ ಹಾಕ್ರಪ್ಪ ಬ್ರೇಕಿಂಗ್ ನ್ಯೂಸ್..
------------------------
ಫಸ್ಟ್ ನ್ಯೂಸ್ನ ಫಸ್ಟ್ ಹೆಡ್ಲೈನ್:
"ಶಿವಮೊಗ್ಗದಲ್ಲಿ ಮುಗಿದ ರಣಭೀಕರ ಗ್ಯಾಂಗ್ವಾರು - ಬಸ್ ಸ್ಟಾಂಡ್ ರಾಘು, ಗುದ್ಲೀ ಗೋಪಾಲಿ ದೋಸ್ತಿ ಜೋರು - ಒಂದೇ ಅಡ್ಡದಲ್ಲಿ ಕೂತು ಜಿಗ್ರಿಗಳು ದರ್ಬಾರು"
------------------------
ರಿಪೋರ್ಟರ್ ಕಳಿಸಿ ಬೈಟ್ ತಗೊಳಿ..ನೆಕ್ಸ್ಟ್ ಬುಲೇಟಿನ್ಗೆ ಫೋನೋ ಬರಕ್ಕೆ ಹೇಳಿ..
ಬಸ್ ಸ್ಟಾಂಡ್ ರಾಘು ಸಿಕ್ತಿಲ್ವಾ..? ಯಾಕ್ರೀ ಅಲ್ಲಿ ಆ ಚಾನಲ್ಗೆ ಫೋನೋ ಕೊಟ್ಟಿದ್ದಾರಲ್ರೀ..? ಅದೆಲ್ಲಾ ಗೊತ್ತಿಲ್ಲ ಓಬಿ ಕಳಿಸಿ ಲೈವ್ ಬರೋಕೆ ಹೇಳಿ..! ಗುದ್ಲೀ ಗೋಪಾಲಿ ಲೊಕೇಷನ್ ಎಲ್ರೀ..?
-----------------------
ಸ್ಪೆಷಲ್ ಸೆಗ್ಮೆಂಟ್ ರೆಡಿ ಮಾಡಿ ಪ್ರೋಮೋ ಕೊಡಿ..
"ಬಸ್ ಸ್ಟಾಂಡ್ -ಗುದ್ಲೀ ದೋಸ್ತೀ"
=====
ಶಿವಮೊಗ್ಗದಲ್ಲಿ ಕಂಡ ಕಂಡಲ್ಲಿ ಲಟಿಗೆ ಮುರೀತಿದ್ದ ಗುದ್ಲೀ ಗೋಪ ಹಾಗೂ ಬಸ್ ಸ್ಟಾಂಡ್ ರಾಘು ಕೊನೆಗೂ ಕಾಂಪ್ರೊಮೈಸ್ ಆಗಿದ್ದಾರೆ..ಈ ಮೂಲಕ ಎರಡೂ ಬಣಗಳ ನಡುವೆ ಹಲವು ಕಾಲದಿಂದ ನಡೆಯುತ್ತಿದ್ದ ಗ್ಯಾಂಗ್ ವಾರ್ ನಿಂತಂಗೆ ಆಗಿದೆ...ಇದು ಈ ಹೊತ್ತಿನ ವಿಶೇಷ " ಬಸ್ ಸ್ಟಾಂಡ್ -ಗುದ್ಲೀ ದೋಸ್ತೀ"
---------------------------
ಇತ್ತೀಚೆಗೆ ದೊಡ್ಡವ್ರ ಖಾಸಗಿ ಅಡ್ಡೆಯಲ್ಲಿ ನಡೆದ ಸಿಟ್ಟಿಂಗ್ನಲ್ಲಿ ಇಬ್ರಿಗೂ ರಾಜೀ ಮಾಡಿಸಲಾಗಿದೆಯಂತೆ.. ಹೀಗಂತ ಮೂಲಗಳು ತಿಳಿಸಿವೆ..
-----
ಇನ್ನು ಕಾಂಪ್ರೊಮೈಸ್ ಆದ ಖುಷಿಯಲ್ಲಿರುವ ಗುದ್ಲೀ ಗೋಪಾಲಿ, ಶಿಕಾರಿಪುರದ ಬಸ್ ಸ್ಟಾಂಡ್ ರಾಘ್ಯಾನ ಅಡ್ಡಾದಲ್ಲಿ ಕೂತು ಭರ್ಜರಿ ಪರಾಕು ಹೇಳ್ತಾ ಇದ್ದಾನಂತೆ...
-----
ಬಸ್ ಸ್ಟಾಂಡ್ ರಾಘು ಕೂಡಾ ತಾನೇನು ಕಮ್ಮಿ ಇಲ್ಲ ಅಂತ, ಗುದ್ಲೀ ಗೋಪಾಲಿ ಹಟ್ಟಿಯಲ್ಲಿ ಬಾಡೂಟ ಮಾಡಿ ಹೋದನಂತೆ..
-----
ಬಸ್ ಸ್ಟಾಂಡ್ -ಗುದ್ಲೀ ಜಿಗ್ರೀ ದೋಸ್ತಿಗೆ ಅಸಲು ಕಾರಣಗಳೇನು ಅಂತ ನೋಡೋಣ ಒಂದು ಸಣ್ಣ ಬ್ರೇಕ್ನ ನಂತ್ರ
-----------------------------
ಪ್ಯಾನಲ್ ಡಿಸ್ಕಷನ್ಗೆ ಪ್ಲಾನ್ ಮಾಡ್ರೀ..ಗೆಸ್ಟ್ ಲೈನ್ ಅಪ್ ಮಾಡ್ರಿ..ಹೈಪ್ ಮಾಡ್ಕೊಳಿ ಇಷ್ಯೂನ..ಇಲ್ಲಾಂದ್ರೆ ಆ ಚಾನೆಲ್ ನವ್ರು ಎತ್ಕೋತಾರೆ..
ಗುದ್ಲೀ ಗೋಪಾಲಿ ಕಡೆಯವರು, ಬಸ್ ಸ್ಟಾಂಡ್ ರಾಘು ಕಡೆಯವ್ರನ್ನ ಸ್ಟೂಡಿಯೋಗೆ ಕರೆಸ್ರೀ..
------------------------------
ಇವತ್ತಿಡೀ ಇಷ್ಯೂನ ಎಳೆದ್ರೂ ನಾಳೆಗೆ ಫಾಲೋ ಅಪ್ ಇರಲೀ..ಈ ವೀಕ್ ಕಂಪ್ಲೀಟ್ ಇಷ್ಯೂನ ಫಾಲೋ ಮಾಡಿ...
======================================
(ಈಗ ಗೊತ್ತಾಯ್ತಾ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹೈಪ್ ಮಾಡ್ಕೊಳ್ಳೋದ್ ಅಂದ್ರೆ ಹೇಗೆ ಅಂತ)
-ವಿಶ್ವಾಸ್ ಭಾರದ್ವಾಜ್

ಸರ್ಫರೋಶಿ ಕೀ ತಮನ್ನಾ:


ಸರ್ಫರೋಶಿ ಕೀ ತಮನ್ನಾ ಅಬ್ ಹಮಾರಾ ದಿಲ್ ಮೇ ಹೈ
ದೇಖನಾ ಹೈ ಜೋರ್ ಕಿತನಾ ಬಾಜುಯೇ ಕಾತಿಲ್ ಮೆ ಹೈ
----------------
ಏ ವತನ್ ಕರತಾ ನೆಹಿ ಕ್ಯೂ ದೂಸರೂ ಕುಚ್ ಬಾತ್ ಚಿತ್
ದೇಖತಾ ಹೂಂ ಮೈ ಜಿಸೆ ವೋ ಚುಪ್ ತೆರಿ ಮೆಹಫಿಲ್ ಮೆ ಹೈ
ಅಬ್ ತೆರಿ ಹಿಮ್ಮತ್ ಕಿ ಚರ್ಚಾ ಗೈರ್ ಕೀ ಮೆಹಫಿಲ್ ಮೆ ಹೈ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ
---------------
ವಕ್ತ್ ಆನೇ ದೇ ಬತಾದೇಂಗೆ ತುಜೇ ಏ ಆಸಮಾ
ಹಂ ಅಬೀ ಸೇ ಕ್ಯಾ ಬತಾಯೇ ಕ್ಯಾ ಹಮಾರೆ ದಿಲ್ ಮೆ ಹೈ
ಕೀಂಚ್ ಕರ್ ಲಾಯೀ ಹೈ ಸಬ್ಕೋ ಕತ್ಲ್ ಹೋನೇ ಕಿ ಉಮ್ಮೀದ್
ಆಶಿಕೋಂ ಕಾ ಆಜ್ ಜಮಖಟ್ ಕೂಚ್ ಎ ಕಾತಿಲ್ ಮೆ ಹೈ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ
----------------
ಹೈ ಲಿಯೇ ಹತಿಯಾರ್ ದುಷ್ಮನ್ ತಾಕ್ ಮೈ ಬೈಠಾ ಉದರ್
ಔರ್ ಹಂ ತಯ್ಯಾರ್ ಹೈ ಸೀನಾ ಲಿಯೇ ಅಪ್ನಾ ಇದರ್
ಖೂನ್ ಸೆ ಖೇಲೇಂಗೆ ಹೋಲಿ ಘರ್ ವತನ್ ಮುಷ್ಕಿಲ್ ಮೆ ಹೈ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ
-----------------

ಹಾತ್ ಜಿನ್ ಮೇ ಹೋ ಜುನೂನ್ ಕಠ್ ತೆ ನೆಹೀ ತಲ್ವಾರ್ ಸೇ
ಸರ್ ಜೋ ಉಠ್ ಜಾತೇ ಹೈ ಜುಕತೇ ನೆಹೀ ಲಲಕಾರ್ ಸೇ
ಔರ್ ಬಡ್ಕೇಗಾ ಜೋ ಶೋಲಾ ಸಾ ಹುಮಾರೇ ದಿಲ್ ಮೆ ಹೈ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ
-----------------
ಹಮ್ ತೋ ಘರ್ ಸೆ ನಿಕಲೇ ಥೆ ಬಾಂದ್ಕರ್ ಸರ್ ಪೇ ಕಫನ್
ಜಾನ್ ಹಾತೇಲಿ ಪರ್ ಲಿಯೇ ತೋ ಭರ್ ಚಲೇ ಹೈ ಯೇ
ಝಿಂದಗೀ ತೋ ಅಪ್ನೇ ಮೆಹಮಾನ್ ಮೌತ್ ಕೀ ಮೆಹಫಿಲ್ ಮೆ ಹೈ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ
-----------------
ಯೂ ಖಡಾ ಮಕ್ತಾಲ್ ಮೇ ಖಾತಿಲ್ ಕಹ್ ರಹಾ ಹೈ ಬಾರ್ ಬಾರ್
ಕ್ಯಾ ತಮನ್ನಾ ಏ ಶಹಾದತ್ ಬೀ ಕಿಸೀ ಕೆ ದಿಲ್ ಮೆ ಹೈ
ದಿಲ್ ಮೆ ತೂಫಾನ್ ಕಿ ಟೋಲಿ ಔರ್ ನಾಸೋ ಮೆ ಇನ್ಕಿಲಾಬ್
ಹೋಶ್ ದುಷ್ಮನ್ ಕೋ ಉಟಾ ದೇಂಗೆ ಹಮೇ ರೋಂಕೋ ನ ಆಜ್
ದುರ್ ರಹಾ ಪಾಯೇ ಜೊ ಹಮ್ಸೆ ಧಮ್ ಕಹಾ ಮಂಜಿಲ್ ಮೆ ಹೈ
--------------------
ಜಿಸ್ಮ್ ಬಿ ಕ್ಯಾ ಜಿಸ್ಮ್ ಹೈ ಜಿನಮೇ ನ ಹೋ ಖೂನ್ ಏ ಜುನೂನ್
ಕ್ಯಾ ಲಡೆ ತೂಫಾನ್ ಸೆ ಜೋ ಕಶ್ತಿ ಹೈ ಸಾಹಿಲ್ ಮೆ ಹೈ
ಸರ್ಫರೋಶಿ ಕೀ ತಮನ್ನಾ ಅಬ್ ಹಮಾರಾ ದಿಲ್ ಮೇ ಹೈ
ದೇಖನಾ ಹೈ ಜೋರ್ ಕಿತನಾ ಬಾಜುಯೇ ಕಾತಿಲ್ ಮೆ ಹೈ
--------------------
ಹೇ ಷಹೀದೆ ಮುಲ್ಕ್ ಓ ಮಿಲ್ಲತ್ ಮೈ ತೆರಿ ಊಫರ್ ಮಿಸಾಲ್ ಖದಮ್
ಅಬ್ ತೆರಿ ಹಿಮ್ಮತ್ ಕಿ ಚರ್ಚಾ ಗೈರ್ ಕೀ ಮೆಹಫಿಲ್ ಮೆ ಹೈ
ಸರ್ಫರೋಶಿ ಕೀ ತಮನ್ನಾ ಅಬ್ ಹಮಾರಾ ದಿಲ್ ಮೇ ಹೈ
ದೇಖನಾ ಹೈ ಜೋರ್ ಕಿತನಾ ಬಾಜುಯೇ ಕಾತಿಲ್ ಮೆ ಹೈ
-ರಾಂ ಪ್ರಸಾದ್ ಬಿಸ್ಮಿಲ್ಲಾ
(ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಗೈದ ಅಪೂರ್ವ ಕ್ರಾಂತಿಕಾರಿ ರಾಂ ಪ್ರಸಾದ್ ಬಿಸ್ಮಿಲ್ಲಾಗೆ ಸುರ್ ಸಲಾಂ...)

ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು

ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲಲಾರರು
ಇಲ್ಲಿ ಸಲ್ಲುತ್ತಾ ಅಲ್ಲಿಯೂ ಸಲ್ಲುತ್ತಾ ಎಲ್ಲೆಲ್ಲಿಯೂ ಸಲ್ಲುವವರು ನಮ್ಮ ಭಾರತೀಯರು
(ಇಟಾಲಿಯನ್, ಟಸ್ಮೀನಿಯನ್ ಹಾಗೂ ಓರ್ವ ಜರ್ಮನ್ ಸ್ನೇಹಿತರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದ ಒಂದು ಮಾತು ನೆನಪಾಯ್ತು.. “ಇಂಡಿಯನ್ಸ್ ಆರ್ ರಿಯಲಿ ಎ ಗ್ರೇಟ್ ಹ್ಯೂಮನ್ ಬೀಯಿಂಗ್ಸ್. ವಿ ವುಡ್ ಎಂಜಾಯ್ ದೇರ್ ಕಂಪೆನಿ ಆಲ್ವೇಯ್ಸ್.. ದೆ ಆರ್ ಸಚ್ ಎ ಅಂಡರ್ಸ್ಟಾಂಡಿಂಗ್ ಪೀಪಲ್ಸ್ ದಟ್ ವಿ ಹ್ಯಾವ್ ಎಕ್ಸೆಪ್ಟ್ ಯಾಸ್ ಸಿಟಿಜನ್ಸ್ ಆಫ್ ಅವರ್ ಕಂಟ್ರಿ“)

ನನ್ನ ಕಾವ್ಯ:


ಇಂದು ಒಳಗಿಂದ ತಿವಿಯುತಿದೆ ಭಾವಮಿಡಿತ
ಬರೆಯಲೇಬೇಕೆಂಬ ಅಂತರಂಗದ ತುಡಿತ
ನರನರಗಳಲ್ಲಿ ಉಕ್ಕುಕ್ಕುವ ರುಧಿರದಲೆ ಅಲೆ
ಗುಪ್ತಗಾಮಿನಿಯಂತೆ ಪ್ರವಹಿಸುವ ಉಷ್ಣ ಲಾವಾಜ್ವಾಲೆ
ಬರೆಯಲೇಬೇಕೆಂದು ಪಿಡಿದು ಲೇಖನಿ ಸಿದ್ಧ
ಅಚ್ಚ ಬಿಳುಪಿನ ಕಾಗದಗಳ ಪದರು ಹಾಳೆ
ಶಾಹಿ ಮುಗಿದರೂ ಗೀರಿ ಹೀರುವ ದಾಹ ಮನಸಿಗೆ
ಹಲಬಾರಿ ಒರೆಸಳಿಸಿ ಬರೆದರೂ ತೃಪ್ತಿ ವಿಕ್ಷಿಪ್ತ
ಬಗೆದಷ್ಟೂ ಅರಳುತದೆ ಕಲ್ಪನಾ ನವಲಾಸ್ಯ
ಹೊಸತನದಿ ಹೊಸ ಮುಖದ ಹೊಸಸೃಷ್ಟಿ ಕಾವ್ಯ
ವ್ಯಾಖ್ಯಾನ ಹೊಸತಲ್ಲ ಹಳೆಯದ್ದೇ ಚುಂಗು
ಹೊಸೆದು ನೇಯ್ದು ಎಳೆದೆಳೆದು ಗರಿ ಮಡಿಕೆ ವಸ್ತ್ರ
ಸಾಹಿತಿಗೆ ಯಾಕಯ್ಯ ತಿರುಳಿರದ ಸಿದ್ಧಾಂತ
ಬಣಪಂಥಪಕ್ಷಗಳಿಗೆ ಕದ ಮುಚ್ಚಿ ಸ್ವಾಗತ
ಕರೆದರೂ ಜರೆದರೂ ಓ ಎನ್ನಲಾರೆ
ಖಂಡಿಸುವ ಧನಿಗಂಜದು ಈ ಭಂಡ ಜೀವ
ಬರೆಯುವೆನೋ..? ಗೀಚುವೆನೋ..? ಎನಗಷ್ಟೆ ಮೆಚ್ಚು
ನನಗಿಲ್ಲ ಯಾರದೋ ವಿಮರ್ಶೆಗಳ ನಿರುಕಿಸುವ ಹುಚ್ಚು
ಬೇಕಿಲ್ಲ ಯಾವುದೇ ಪ್ರಶಸ್ತಿ ಫಲಕಗಳ ಮಾನ-ಸಮ್ಮಾನ
ಸೋಂಕಿಲ್ಲ ಡಾಕ್ಟರ್ಗಿರಿಯ ಹಮ್ಮಿನಭಿಮಾನ
ಇಂದು ಬರೆಯಲೇಬೇಂಕೆಂಬ ಒತ್ತಡವ ತಾಳೆನು
ಉರುಳಾಡಿ ಹೊರಳಾಡಿ ನಿದ್ದೆಬಿಟ್ಟು ಬರೆವೆನು
ಪ್ರತಿ ಸಾಲು ಅಣಿಗೊಳಿಸಿ ಮಸೆ ಮಸೆದು ಬಾಣ
ಭತ್ತಳಿಕೆ ತುಂಬುವೆ ಈ ಪೊರ್ತು ಅನುಕ್ಷಣ ಅನುರಣ
-(ವಿಪ್ರವಿಶ್ವತ್) ವಿಶ್ವಾಸ್ ಭಾರದ್ವಾಜ್

ಅತಿಯಾದ ಸಲಿಗೆಯೂ ಅಪಾಯಕಾರಿ!

"ಆತ್ಮೀಯರೆನಿಸಿಕೊಂಡವರ ಬಳಿ ಅತಿಯಾದ ಸಲಿಗೆಯೂ ಅಪಾಯಕಾರಿ!
ಅದೆಷ್ಟೇ ಆತ್ಮೀಯತೆಯಿದ್ದರೂ ಅರಿಯದೇ ಅರಿಕೆ ಮಾಡಿಕೊಳ್ಳುವ ಅನುನಯ,,,
ಅತಿರೇಕಕ್ಕೆ ಹೋಗುವ ಆಸ್ಥೆ, ಅಪ್ಯಾಯಮಾನತೆಯನ್ನಳಿಸಿ ಅಧೀರರನ್ನಾಗಿಸುತ್ತೆ...
ಆತ್ಮೀಯನಾಗುವ ಅವನ/ಅವಳ ಖಾಸಗಿ ಸಂಗತಿಗಳ ಆವರಣದ ಒಳಹೊಕ್ಕುವ ಮುನ್ನ ಅನೇಕ ಬಾರಿ ಆಲೋಚಿಸಿ..!
ಆದ ಅಜ್ಞಾನದ ಅಚಾತುರ್ಯ ಅವಲೋಕಿಸುತ್ತಾ...ಇನ್ಯಾವ ಅನಾಹುತಗಳಾಗದೆಂಬ ಆಶ್ವಾಸನೆಗಳ ನೀಡುತ್ತಾ.."
EXTREMELY SORRY@

ವಿನಾಕಾರಣ ಅಸೀಮನೆ ಶಾಂತಮ್ಮ ನೆನಪಾದರು...

ಯಾಕೋ ವಿನಾಕಾರಣ ಅಸೀಮನೆ ಶಾಂತಮ್ಮ ನೆನಪಾದರು...
92ನೇ ವಯಸ್ಸಿನಲ್ಲಿ ಕೆ ಎಸ್ ಆರ್ ಟಿ ಸಿ ಕಿಲ್ಲರ್ ಕೆಂಪು ಬಸ್ಸಿನ ಅಡಿ ನೊಸೆದು ಚೂರಾಗದಿದ್ದರೆ ಇನ್ನೂ 10 ವರ್ಷ ಬದುಕಿ, ನರ್ವಸ್ ನೈಂಟಿಯ ಸಚಿನ್ ತೆಂಡೂಲ್ಕರ್ ನ ಅಣಕಿಸಿಬಿಡ್ತಿದ್ದರು ಶಾಂತಮ್ಮ..
ಮುದುಕಿ ಅಂತ ಅಸಡ್ಡೆ ಮಾಡ್ತಿದ್ದ ತೀರ್ಥಹಳ್ಳಿ ಆಗುಂಬೆ ಮಧ್ಯ ಓಡಾಡುತ್ತಿದ್ದ ಪುಷ್ಪದಂತ ಬಸ್ ಕಂಡಕ್ಟರ್ ಗೆ "ತೆಳು ಸೊಂಟದ ಹುಡುಗೀರ್ ಗೆ ಕೈ ಹಿಡಿದು ಹತ್ತಿಸ್ಕೋತೀಯಾ, ಈ ಬೆನ್ನು ಬಾಗಿದ ಮುದುಕಿಗೆ ಕೈ ಹಿಡಿಯಕ್ಕೆ ಆಗಲ್ವೇನೋ ಮುಂಡೇದೆ" ಅಂತ ಘರ್ಜಿಸಿದ್ದ ಘಟವಾಣಿ ಘಾಟಿ ಮುದುಕಿ ಶಾಂತಮ್ಮ..
ಶಾಂತಮ್ಮಜ್ಜಿಗೆ ಇಬ್ಬರು ಮಕ್ಕಳು.. ಎರಡೂ ಹೆಣ್ಣು ಸಂತಾನವೇ.. ದೊಡ್ಡವರು ಶ್ರೀದೇವಮ್ಮ,
ಚಿಕ್ಕವರು ಕಮಲಾಕ್ಷಮ್ಮ, ಶೃಂಗೇರಿ ಕಡೆಯ ಶೃಂಗೇಶ್ವರಯ್ಯರನ್ನು ಶ್ರೀದೇವಮ್ಮನಿಗೆ ಮದುವೆ ಮಾಡಿ ಮನೆ ಅಳಿತನಕ್ಕೆ ಕರೆದುಕೊಂಡು ಬಂದರು.. ಆದ್ರೆ ಆಗಾಗಾ ತಿಕ್ಕಲು ತಿರುಗುತ್ತಿದ್ದ ಮುದುಕಿ ಕೆಲವೇ ವರ್ಷಗಳಲ್ಲಿ ಅಳಿಯ-ಮಗಳನ್ನು ಹೊರ ದಬ್ಬಿತು...
ಬಳಿಕ ಕಮಲಾಕ್ಷಮ್ಮರನ್ನು ಮದುವೆ ಮಾಡಿ ಆ ಕಿರಿ ಅಳಿಯನನ್ನು ಮನೆಯಲ್ಲಿ ಇಟ್ಕೊಳ್ತು.. ಆದರೆ ಮುದುಕಿಯದ್ದು ಮಾಮೂಲಿ ವರಾತ ಹುಚ್ಚು ವರಸೆ, ಸಣ್ಣ ಮಗಳು-ಅಳಿಯರ ವ್ಯಾಲಿಡೆಟಿಯೂ ಹೆಚ್ಚು ಕಾಲ ಉಳಿಯಲಿಲ್ಲ.. ಅವರನ್ನೂ ಮನೆಯಿಂದ ಓಡಿಸ್ತು...
ಸ್ವಲ್ಪ ವರ್ಷ ಒಂಟಿಯಾಗಿದ್ದಾಗ ಮುದುಕಿ, ಆಮೇಲೆ ಅದ್ಯಾವನೋ ಭಾರತೀಪುರದ ಪ್ರಸನ್ನ ಕುಮಾರ ಅನ್ನೋ ಅಪರಿಚಿತನ ಹಿಂದೆ ಮುಂದೆ ವಿಚಾರಿಸದೆ ತಂದು ಮನೆಯಲ್ಲಿ ಇಟ್ಕೊಂಡು ಅಡಿಕೆ ತೋಟದ ಉಸ್ತುವಾರಿ ವಹಿಸಿಕೊಡ್ತು.. ಅವನೋ ಪಾಕಂಡಿ, ಮುದುಕಿಗೆ ಉಂಡೇನಾಮ ತಿಕ್ಕೋಕೆ ನೋಡಿದಾಗ, ಶಾಂತಮ್ಮ ಏನು ಕಮ್ಮಿನಾ? ಒದ್ದು ಆಚೆಗಟ್ತು..
ಕೊನೆಯ ಕಾಲದಲ್ಲಿ ಮುದುಕಿ ಒಂಟಿಯಾಗಿತ್ತು..
ಆದ್ರೆ ಶಾಂತಮ್ಮನ ಕತ್ತಲ ಭೂತದ ಮನೆ, ಎರಡೆಕರೆ ತೋಟದ ಕಡೆ ಅಸೀಮನೆ ಹೊಂಡದವರಾರು ಹೋಗ್ತಾ ಇರಲಿಲ್ಲ.. ಶ್ರೀದೇವಮ್ಮನ ಹಿರಿಸೊಸೆ ಚಂದ್ರಕಾಂತಿಗಂತೂ ಆ ದಿಕ್ಕು ಅಂದ್ರೆ ನವರಂಧ್ರಗಳಲ್ಲೂ ನೀರು ಹನಿಕಿಸುವಷ್ಟು ಭೀತಿ..
ಇಂತಿಪ್ಪ ಶಾಂತಮ್ಮ ಅನ್ನೋ ಮುದುಕಿ ಒಬ್ಬಳೇ ತೋಟದ ಬೇಸಾಯ, ಔಷದಿ ಹೊಡಿಸೋದು, ಅಡಿಕೆ ಕೊಯ್ಲು,ಮಂಡಿ ವ್ಯವಹಾರ, ಕೊನೆಗೆ ಹೆಬ್ಬೆಟ್ಟು ಒತ್ತಿ ಬ್ಯಾಂಕ್ ವಹಿವಾಟು ಕೂಡಾ ನೋಡಿಕೊಳ್ತಿತ್ತು..
ಮುದುಕಿಯ ಇಚ್ಛಾಶಕ್ತಿ, ಸಂಕಲ್ಪ ಹಾಗೂ ಬದ್ಧತೆ ಭಯಂಕರ ಗಟ್ಟಿ...ರಿಜಿಡ್ ಮುದುಕಿ..
ತನ್ನ 92 ನೇ ವಯಸ್ಸಲ್ಲಿ ಬಿದರಗೋಡಿನಲ್ಲಿ ಎತ್ತರ ಬಸ್ ನ ಚಕ್ರಕ್ಕೆ ಸಿಕ್ಕಿ ಸತ್ತ ಮುದುಕಿ ಶಾಂತಮ್ಮನ ಮೃತದೇಹ ತಂದು ಬಾಗಿಲು ತೆಗೆದ ಮೊಮ್ಮಕ್ಕಳಿಗೆ ಪರಮಾಶ್ಚರ್ಯ ಕಾದಿತ್ತು... ಅಪರ ಕೃಯೆಗೆ ಬೇಕಾದ ಕರಿ ಎಳ್ಳು, ದರ್ಬೆ,ಮಡಿಕೆಯಾದಿಯಾಗಿ ಸಂಸ್ಕಾರದ ಪದಾರ್ಥಗಳು ಬಾಗಿಲ ಹೊಸ್ತಿಲ ಬುಡದಲ್ಲೇ ಸಿಕ್ಕಿದ್ದವು.. ಮುದುಕಿಗೆ ತನ್ನ ಸಾವಿನ ಮುನ್ಸೂಚನೆ ಸಿಕ್ಕಿತ್ತಾ...?
ಅದ್ಯಾವ ಟೆಕ್ನಾಲಜಿ ಬಳಸುತ್ತಿದ್ದ ಏನೋ, ಶಾಂತಮ್ಮ ಸತ್ತ ಮೇಲೆ, ಅದರ ಕತ್ತಲ ಮನೆಯ ಅಡಿಗೆ ಕೋಣೆಯಲ್ಲಿದ್ದ ನಾಲ್ಕು ಜಾಡಿ ಮಿಡಿಗಾಯಿ ಉಪ್ಪಿನಕಾಯಿ ಸುಮಾರು 5 ವರ್ಷ ಹಾಳಾಗದೇ ಉಳಿದಿತ್ತು.. ಹಲಸಿನ ಹಣ್ಣು ಹಪ್ಪಳ ಅದ್ಭುತ ರುಚಿ ಹೊಂದಿತ್ತು..
ಅಂದ ಹಾಗೆ ಈ ಶಾಂತಮ್ಮ ಬೇರಾರು ಅಲ್ಲ ನನ್ನ ಅಮ್ಮನ ಅಜ್ಜಿ, ನನಗೆ ಮುತ್ತಜ್ಜಿ ...
ನಾನು ಶಾಂತಮ್ಮನ ಮರಿಮಗ... ಅಜ್ಜಿ ನನ್ನ ಉಪನಯನಕ್ಕೆ ಬಂದಿತ್ತು.. ನನಗೇ ಅಂತ ಮಾಡಿಸಿದ್ದ
ಬೆಳ್ಳಿಯ ಪಂಚ ಪಾತ್ರೆ ಉದ್ಧರಣೆ ಉಡುಗೊರೆ ನೀಡಿತ್ತು.. ಶಾಂತಮ್ಮಜ್ಜಿ ಸತ್ತಾಗ ನನಗೆ 13 ನಡೆಯುತ್ತಿತ್ತು..
ಪ್ರಾಯಶಃ ಆಗುಂಬೆ, ಮೇಗರವಳ್ಳಿ ಸೀಮೆ ಕೊನೆಗೆ ಅಸೀಮನೆ ವಾಸಿಗಳು ಶಾಂತಮ್ಮನನ್ನು ಮರೆತಿದ್ದಾರೆ.. ಆದರೆ ಮುದುಕಿ ನನ್ನ ಸ್ಮೃತಿಯಲ್ಲಿ ಉಳಿದುಬಿಟ್ಟಿದೆ...
- ವಿಶ್ವಾಸದಿಂದ ಭಾರದ್ವಾಜ್

ಯಹೀ ಏಕತಾ ಕಾ ಸಂದೇಶ್ ಹೈ.

ಭಾಷಾ ಅನೇಕ್ ಭಾವ್ ಏಕ್
ರಾಜ್ಯ್ ಅನೇಕ್ ರಾಷ್ಟ್ರ್ ಏಕ್
ಪಂಥ್ ಅನೇಕ್ ಲಕ್ಷ್ಯ್ ಏಕ್
ಬೋಲೀ ಅನೇಕ್ ಸ್ವರ್ ಏಕ್
ರಂಗ್ ಅನೇಕ್ ತಿರಂಗಾ ಏಕ್
ಸಮಾಜ್ ಅನೇಕ್ ಭಾರತ್ ಏಕ್
ರಿವಾಜ್ ಅನೇಕ್ ಸಂಸ್ಕಾರ್ ಏಕ್
ಯೋಜನಾ ಅನೇಕ್ ಮಕ್ಸದ್ ಏಕ್
ಕಾರ್ಯ್ ಅನೇಕ್ ಸಂಕಲ್ಪ್ ಏಕ್
ರಾಹ್ ಅನೇಕ್ ಮಂಜಿಲ್ ಏಕ್
ಪೆಹನಾವಾ ಅನೇಕ್ ಸಾಯಾ ಏಕ್
ಚೆಹರಾ ಅನೇಕ್ ಮುಸ್ಕಾನ್ ಏಕ್
ಯಹೀ ಏಕತಾ ಕಾ ಸಂದೇಶ್ ಹೈ. ಯೇ ಭಾರತ್ ಹೈ.. ಯಹೀ ಭಾರತ್ ಕಿ ಪರ್ ಚಾಯಿ "ವಿವಿಧತಾ ಮೇ ಏಕತಾ".. ಜೈ ಹಿಂದ್
-ನರೇಂದ್ರ ಮೋದಿ

ಪುಟ್ಕತೆ:

ಅಡಿಕೆ ತೋಟದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿತ್ತು ಕೆಂಪು ಬಣ್ಣದ ಮನೋಜ್ಞ ರಥಪುಷ್ಪದ ಹೂಗಳು..
ಅದರ ಮಧ್ಯೆ ದಾರಿ ಮಾಡಿಕೊಂಡು ಗೌರಿ ಹಳ್ಳ ದಾಟಿ ಕೊಂಚ ಮೇಲಕ್ಕೆ ಹೋದರೆ ಸಿಗುತ್ತದೆ ಶಾಸ್ತ್ರಿಗಳ ಮನೆ..
ಗುಂಡಿಯ ಗಣೇಶ ದೇವಾಲಯಕ್ಕೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ಪಕ್ಕದಲ್ಲಿ ಹಾಯ್ದು ಹೋಗಲೇಬೇಕು.. ಇವತ್ತು ಬೇರೆ ವಿಧಿಯಿಲ್ಲ.. ಯಾಕಂದ್ರೆ ಭೂಷಣ್ ರಾಯ್ರು ಅವರ ತೋಟದ ಬೇಲಿ ಬಂದ್ ಮಾಡಿಬಿಟ್ಟಿದ್ದಾರೆ..
ನಿನ್ನೆ ಮೊನ್ನೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ದಾರಿ ತಪ್ಪಿಸಿದ್ದಾಯಿತು.. ಆದ್ರೆ ಇವತ್ತು ಬೇರೆ ದಾರಿ ಇಲ್ಲ ಅದೇ ದಾರಿಯಲ್ಲಿ ಹೋಗಬೇಕು.. ಹೋಗದಿದ್ದರೆ ಅಮ್ಮ ಬಯ್ತಾಳೆ.. ಮಾಣಿಗೆ ಸಂಧ್ಯಾವಂದನೆಯೇ ಮುಗಿಯೋದಿಲ್ಲ.. ಅಡಿಕೆಯ ಶೃಂಗಾರ ಕೊಡದಿದ್ದರೆ ಮುಂಜಾನೆ ಗಣಪತಿ ಪೂಜೆ ಆಗೋದೆ ಇಲ್ಲ..
ಇವತ್ತು ಅವನು ಕಾಣ್ತಾನಾ..? ಕಣ್ಣಲ್ಲೇ ಕೊಲ್ತಾನೆ.. ನಾನು ಶಾಸ್ತ್ರಿಗಳ ಮನೆ ಓಣಿ ದಾಟುವಾಗ ಎಲ್ಲಿರುತ್ತಾನೋ ಬಂದು ನಿಂತುಬಿಡುತ್ತಾನೆ.. ಕುಡಿ ಮೀಸೆಯಡಿಯಲ್ಲಿ ನಗುವ ಗಂಧರ್ವ ಚೆಲುವ ಚೆನ್ನಿಗರಾಯ..
ನಾನು ಅವನ ಸೆಳೆತಕ್ಕೆ ಬೀಳ್ತಿದ್ದೀನಾ..? ಇನ್ನೇನು ರಜೆ ಮುಗಿದೇ ಹೋಗುತ್ತೆ ಅವನದ್ದು.. ಮತ್ತೆ ಬೆಂಗಳೂರಿನ ಬಸ್ ಹತ್ತುತ್ತಾನೆ.. ಆಮೇಲೆ ನನ್ನ ನೆನಪಿರುತ್ತಾ..? ನಾನೇಕೆ ಅವನ ನೆನಪಿನಲ್ಲಿ ಕೊರಗಬೇಕು.. ಇಷ್ಟಕ್ಕೂ ನಾನೇನು ಅವನನ್ನು ಪ್ರೀತಿಸುತ್ತಿಲ್ಲವಲ್ಲ.. ಹಾಗಿದ್ರೆ ನಿನ್ನೆ ಮೊನ್ನೆ ಯಾಕೆ ಆ ದಾರಿ ತಪ್ಪಿಸಿದೆ.. ನನ್ನ ಮನಸಿಗೆ ವಿನಾಕಾರಣ ಅಂಜಿಕೆಯೇಕೆ..?
ಉಹುಂ! ಇವತ್ತು ಅದೇ ದಾರಿಯಲ್ಲಿ ಸಾಧ್ಯವಾದಷ್ಟು ನಿಧಾನಕ್ಕೆ ಹೋಗ್ತೀನಿ.. ಅವಕಾಶ ಸಿಕ್ಕರೆ ಅಪ್ಪಣ್ಣ ಶಾಸ್ತ್ರಿಗಳ ಹೆಂಡತಿ ಜಾನಕಮ್ಮನವರನ್ನು ಮಾತಾಡಿಸ್ತೀನಿ, ಅಜ್ಜಿ ವೆಂಕಟಲಕ್ಷ್ಮಿ ಕೋಲು ಕಿತ್ತು ಆಟ ಆಡಿಸ್ತೀನಿ, ಕೊಟ್ಟಿಗೆಯಲ್ಲಿ ಕರುನ ಮುದ್ದು ಮಾಡ್ತೀನಿ..
ಹಾಗಂದುಕೊಂಡು ರಥಪುಷ್ಪದ ಗಿಡಗಳನ್ನು ಸರಿಸುತ್ತಾ ತೋಟದಲ್ಲಿ ಹೆಜ್ಜೆ ಹಾಕಿದಳು ಮನೋಹರಿ.. ಯೋಚನಾಭರದಲ್ಲಿ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ ಅವಳಿಗೆ.. ಗೌರಿ ಹಳ್ಳ ದಾಟಿ ಅಪ್ಪಣ್ಣ ಶಾಸ್ತ್ರಿಗಳ ಉಣುಗೋಲು ದಾಟಿದಳು..
ಅವಳಂದುಕೊಂಡಿದ್ದು ಯಾವುದೂ ಆಗಲೇ ಇಲ್ಲ..
ಅದೆಲ್ಲಿದ್ದನೋ ಆ ಸುರಸುಂದರ; ಅವಳ ಗೆಜ್ಜೆ ಸದ್ದಿಗೆ ಕಿವಿಯಾಗಿ, ಚಂಗನೇ ಹಾರಿ ಜಗುಲಿಯ ಕಂಬಕ್ಕೆ ಒರಗಿ ಅವಳನ್ನೇ ನೋಡತೊಡಗಿದ.. ಅಲ್ಲಿಯವರೆಗೆ ಅವಳಲ್ಲಿದ್ದ ಸಂಕಲ್ಪ ಶಕ್ತಿ ಜರ್ರನೇ ಧರೆಗೆ ಕುಸಿದಂತಾಯ್ತು..
ನಾಚಿ ನೀರಾದ ಮನೋಹರಿ ಅತ್ತಿತ್ತ ನೋಡದೆ, ತಗ್ಗಿಸಿದ ತಲೆ ಎತ್ತದೆ ಬಿರುಬೀಸಾಗಿ ಆಲ್ ಮೋಸ್ಟ್ ಓಡುವವಳಂತೆ ಓಣಿ ದಾರಿಯಲ್ಲಿ ನಡೆಯತೊಡಗಿದಳು..
"ಗುಂಡಿ ಗಣೇಶ ಇನ್ನೂ ಎಷ್ಟು ದೂರ ಇದಿಯಪ್ಪಾ ನೀನು..?" ಅವಳ ಒಳಮನಸ್ಸು ಅವನ ಪ್ರಭಾವಲಯದಿಂದ ಹೊರಹಾರುವ ಹವಣಿಕೆಯಲ್ಲಿತ್ತು..
-ವಿಶ್ವಾಸ್ ಭಾರದ್ವಾಜ್

Thursday 9 April 2015

ಪುಟ್ಕತೆ:

ಚಿಕ್ಕಂದಿನಲ್ಲಿ ಆ ಹುಡುಗನಿಗೆ ತರಹೇವಾರಿ ಆಸೆಗಳು..
ಮುಂದೆ ಬೆಳೆದು ದೊಡ್ಡವನಾದಮೇಲೆ ಏನಾಗ್ತೀಯಪ್ಪಾ ಅಂತ ಕೇಳಿದ್ರೆ ಕೂಡಲೆ ಉತ್ತರಿಸೋಕ್ಕಾಗದಷ್ಟು ಆಯ್ಕೆಗಳು ಆತನ ಮುಂದಿದ್ವು..
***
ಅಡುಗೆ ಭಟ್ಟನಾದ್ರೆ ರುಚಿ ರುಚಿಯಾದ ಅಡುಗೆಗಳನ್ನು ಖಾದ್ಯಗಳನ್ನು ಮಾಡಿ ತಿನ್ನಬಹುದು..
ತೋಟದ ಕಾವಲುಗಾರನಾದ್ರೆ ತೋಟದಲ್ಲಿರುವ ಸೀಬೆ, ಕಿತ್ತಳೆ, ಬಾಳೆ, ಮಾವು ಹಲಸು ಹಣ್ಣುಗಳನ್ನು ಬೇಕಾದಾಗೆಲ್ಲಾ ತಿನ್ನಬಹುದು..
ಐಸ್ ಕ್ಯಾಂಡಿ ಮಾರುವವನಾದ್ರೆ ದಿನವೂ ಐಸ್ಕ್ಯಾಂಡಿ ಚೀಪಬಹುದು..
ಬಸ್ ಕಂಡಕ್ಟರ್ ಆದ್ರೆ ದಿನವೂ ಬೇರೆ ಬೇರೆ ಊರುಗಳನ್ನು ಸುತ್ತಬಹುದು..
ಪಾನಿಪುರಿ ಅಂಗಡಿ ಇಟ್ಟರೆ..? ಬೊಂಬಾಯಿ ಮಿಠಾಯಿವಾಲಾ ಆದ್ರೆ..? ಬೆಲೂನು ಮಾರೋನಾದ್ರೆ..? ಜಾತ್ರೆಯಲ್ಲಿ ಆಟದ ಸಾಮಾನುಗಳ ಅಂಗಡಿ ಮಾಲೀಕನಾದ್ರೆ..?
***
ಕೊಂಚ ಬೆಳೆದು ದೊಡ್ಡವನಾದ ಮೇಲೆ ಆಯ್ಕೆಗಳು ಬೇರೆ ತರಹದ್ದಾಯ್ತು..
ಮಾಸ್ಟರ್ ಆದ್ರೆ ಹುಡುಗ್ರಿಗೆ ಬೆತ್ತ ತೋರಿಸಿ ದರ್ಪ ಮೆರೆಯಬಹುದು...
ಪೊಲೀಸ್ ಆದ್ರೆ ಫೈಟಿಂಗ್ ಮಾಡಬಹುದು, ಶೂಟ್ ಮಾಡಬಹುದು...
ಡಾಕ್ಟರ್ ಆದ್ರೆ ಆಪರೇಷನ್ ಮಾಡಬಹುದು...
ಎಂಜಿನಿಯರ್ ಆದ್ರೆ ಅಪ್ಪ ಕಟ್ಟಿದ ಮನೆಗಿಂತ ದೊಡ್ಡ ಮನೆ ಕಟ್ಟಬಹುದು...
***
ಹುಡುಗ ಕಾಲೇಜು ಸೇರಿದ.. ಸುಂದರಿ ಒಬ್ಬಳ ಪ್ರೇಮದ ಪಾಶದಲ್ಲಿ ಬಂಧಿಯಾದ..
ಅವನ ಚಿತ್ತವೆಲ್ಲಾ ಅವಳ ಸೆಳೆಯುವ ಸುತ್ತಲೇ ಓಡಾಡಿತು...
ಅವಳ ಗುಂಗಲ್ಲಿ ಅವನ ಹಳೆಯ ಕನಸುಗಳಲ್ಲೇ ಮರೆಯಾಯ್ತು...
ಕೆಲವು ಕಾಲದ ಬಳಿಕ ಅವಳಿಗೆ ಬೇರೆ ಗಂಡಿನೊಂದಿಗೆ ಮದುವೆಯಾಯ್ತು.. ಅವಳು ದೇಶ ಬಿಟ್ಟಳು; ಇವನು ಬಾರು ಸೇರಿದ...ಬಹಳಷ್ಟು ವರ್ಷ ಅವಳ ನೆನಪಲ್ಲಿ ಗಡ್ಡ ಬಿಟ್ಟು ಹೆಂಡದಂಗಡಿಯ ಖಾಯಂ ನೌಕರನಂತಾದ..
ಕೊನೆಗೆ ಮನೆಯವರೆಲ್ಲಾ ಮದ್ದು ಮಂತ್ರ ಮಾಡಿಸಿ ಕುಡಿತ ಬಿಡಿಸಿದ್ರು.. ಮಂತ್ರ ಹಾಕಿ ಮದ್ದು ಕೊಟ್ಟ ಆಶ್ರಮದಲ್ಲಿ ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ವಹಿಸಿದ..
***
ಈಗವನು ಖಾದಿ ತೊಟ್ಟಿದ್ದಾನೆ.. ಆ ಮಠದ ಕಿರಿಯ ಸ್ವಾಮಿಯಾಗಿ ಪಟ್ಟ ಕಟ್ಟಲಾಗಿದೆ..
ಪ್ರತಿ ನಿತ್ಯ ಪ್ರವಚನಗಳಲ್ಲಿ ಜೀವನ ನಶ್ವರ.. ಆಸೆಯೇ ದುಃಖಕ್ಕೆ ಮೂಲ ಅನ್ನುವ ದಿವ್ಯವಾಣಿ ಉಪದೇಶಿಸುತ್ತಾನೆ.. ನೆರೆತ ಮುಖದ ಮುದುರಗಳ ಹಿಂದೆ ಕಂಡೂ ಕಾಣಿಸದ ವೇದನೆ ಇದೆ..
***
ಏನೋ ಇತ್ತೀಚೆಗೆ ಸನ್ಯಾಸತ್ವ ಬಿಟ್ಟು ಲೌಕಿಕ ಬದುಕು ನಡೆಸುತ್ತೀನಿ ಅನ್ನುವ ಮಾತುಗಳು ಶ್ರೀ ಶ್ರೀ ಶ್ರೀ.. ಯವರ ಬಾಯಲ್ಲಿ ಕೇಳಿ ಬರ್ತಿದೆಯಂತೆ..
ಯಾಕಂದರೆ, ಅವರ ಪೂರ್ವಾಶ್ರಮ ಯೌವನ ಕಾಲದ ಸ್ವಪ್ನ ಸುಂದರಿ, ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಈಗ ಅವನ ಆಶ್ರಮ ಸೇರಿಕೊಂಡಿದ್ದಾಳಂತೆ..
ಮತ್ತೆ ಸಣ್ಣಗೆ ಪ್ರೇಮಾಲಾಪ ಶೃತಿಯಾಗುತ್ತಿದೆ..
-ವಿಶ್ವಾಸ್ ಭಾರದ್ವಾಜ್

ಯಾಕೋ ಅಸೀಮನೆಯ ಕೊಟ್ಟಿಗೆ ಸಂಸ್ಕ್ರತಿ ನೆನಪಾಯ್ತು

ಗುತ್ತಿ, ಕೆಂಪಿ, ಕಾಡಮ್ಮ, ಕರಿಯಮ್ಮ, ಕಾಲಿ, ಪುಟ್ಟಿ,
ಅಸೀಮನೆಯ ಕೊಟ್ಟಿಗೆಯಲ್ಲಿದ್ದ ಮಲೆನಾಡು ಗಿಡ್ಡ ತಳಿಯ ದನಗಳು..
ರೂಪ ಬಣ್ಣ ಹಾಗೂ ಆಕಾರಕ್ಕೆ ತಕ್ಕಂತೆ ಅಲ್ಲಿ ದನಗಳಿಗೆ ಹೆಸರು ಇಡಲಾಗ್ತಿತ್ತು..
ಗುತ್ತಿಯ ಅಮ್ಮನನ್ನು ಗೌರಿಹಳ್ಳದಲ್ಲಿ ಮೇಯುತ್ತಿದ್ದಾಗ ಕುರ್ಕ ಹೊತ್ತಿತಂತೆ..
ಕೆಂಪಿಗೆ ನೆಲ್ಲಿ ಉಬ್ಬಲ್ಲಿ ರಣ ಹೊಡೀತು ಅಂತ ಅಜ್ಜಯ್ಯ ಹೇಳ್ತಿದ್ರು..
ಕಾಡಮ್ಮ ಈಚಲು ಗುಡ್ಡದಲ್ಲಿ ತಪ್ಪಿಸಿಕೊಂಡಿತ್ತು; 2 ತಿಂಗಳಾದ ಮೇಲೆ ವಾಪಾಸು ಬಂತು..
ಕರಿಯಮ್ಮ ತೋಟದ ಕಪ್ಪಿಗೆ ಬಿದ್ದು ಕಾಲು ಮುರಿದುಕೊಂಡಿತ್ತು; ಸಾಯುವ ತನಕ ಕುಂಟುತ್ತಲೇ ಓಡಾಡುತ್ತಿತ್ತು ಪಾಪ..
ಸೊಪ್ಪಿನ ದರಗು ಸದ್ದು ಮಾಡುತ್ತಾ ಕೊಟ್ಟಿಗೆಯಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಮಕ್ಕಳು ಕಾಲಿ ಹಾಗೂ ಪುಟ್ಟಿ..
***
ಯಾಕೋ ಅಸೀಮನೆಯ ಕೊಟ್ಟಿಗೆ ಸಂಸ್ಕ್ರತಿ ನೆನಪಾಯ್ತು.. ಬಾಲ್ಯದ ಕೆಲವು ಘಟನೆಗಳು "ಮರೆತೇನೆಂದರೂ ಮರೆಯಲಿ ಹ್ಯಾಂಗ"
-ವಿಶ್ವಾಸ್ ಭಾರದ್ವಾಜ್

ಪುಟ್ಕವಿತೆ

ದೂರ ತೀರ ಯಾನದೆಡೆಗೆ ನೆಟ್ಟ ನೋಟ ಕಕ್ಷೆ
ಆಶ್ಚರ್ಯಗಳಾದರೂ ಘಟಿಸಲೆಂಬ ಉತ್ಕಟವೀ ನಿರೀಕ್ಷೆ
ತಪನೆಗಳಿಗೆ ಅಂತ್ಯವಿಲ್ಲ ಅನವರತ ಉಪೇಕ್ಷೆ
ಬಂದು ನಿಂತು ಕೊಂಡು ಹೋಗು ಈ ಬದುಕಿನ ದೀಕ್ಷೆ

ದಿ ಗ್ರೇಟ್ ಡಿಕ್ಟೇಟರ್

ಇದು 1940ರಲ್ಲಿ ತೆರೆಕಂಡ ಚಾರ್ಲಿ ಸ್ಪೆನ್ಸರ್ ಚಾಪ್ಲಿನ್ ಅಭಿನಯದ ದಿ ಗ್ರೇಟ್ ಡಿಕ್ಟೇಟರ್ ಚಿತ್ರದ ಕ್ಲೈಮ್ಯಾಕ್ಸ್ ಸಂಭಾಷಣೆ..
ಡಿಕ್ಟೇಟರ್ ಹೆಂಕಲ್ ಬದಲಿಗೆ ಅವನದೇ ತದ್ರೂಪ ಚಾಪ್ಲಿನ್ ವೇದಿಕೆ ಏರುತ್ತಾನೆ.. ಚಾಪ್ಲಿನ್ ಸರ್ವಾಧಿಕಾರ ಧೋರಣೆಯನ್ನು ವಿರೋಧಿಸಿ ಮಾತನಾಡುವ ಈ ಸಾಲುಗಳು ನಿಜಕ್ಕೂ ವಿಶ್ವಮಾನವ ತತ್ವದ ಪ್ರತೀಕ.. ಹಾಗಾಗೆ ಚಾರ್ಲಿ ವಿಶ್ವಮಾನವ ಎನಿಸಿಕೊಂಡಿದ್ದು..
“Am sorry..
That I don’t want to be an emperor. That’s not my business.
I don’t want to rule of conquer any one.. I should like to help everyone if possible.. Jew, gentile, black man white man.. we are all want to help one another.. human beings are like that.. we want to let each others happiness not each others misery. we don’t want to hate one another. we should help one another.. this earth is rich. and can provide for everyone.. the way of life is free and beautiful but we have lost the way..
We barricade the world with hate.. has inject the misery in the bloodshed. we have developed speed but we have shut ourselves in bundles of lies.. our knowledge has made the sinnicle, our cleverness is hard and unkind.. we think too much we live too little.. more the machinery we need humanity.. more the cleverness we need kindness and gentleness, without peace quality life will be violent..
The aero plane and radio has brought us closer together.. the nature of this invention is for goodness in man.. its for universal brotherhood and the unity of the soul.. even now millions of sparing men, women and children is there, victims of the system makes man torture. and imprison innocent people. the rules of conquer I say do not despair, the misery is now upon this is like passing of greet, the bitterness of men is the other way destroy the human progress.. I hate of man who has powers and dictators rule..and the power we took from the people will return to the people.. so Long it will take liberty will never perish.
Soldiers, don’t give yourselves to proves, men who disperse you, slaves you.. don’t give yourselves machine mans, machine minds, machine hearts, machines souls.. you are not machine, you are not cattle.. you have a love and humanity in your heart.. soldiers don’t fight for slavery, fight for liberty..
The king of god within man not one man not a group of man but in all man in you, you the people have power..
The power to create machines..
The power to create happiness..
You the people have the power to makes life beautiful, to makes the life's wonderful adventure..
In the name of democracy there is huge power you have. let us have the right..
Let us fight for a new world..
The descent world that would give a chance for work, that would give you a future and security..
They lied they do not fulfill the promise..
Dictators free them self but in slave the people. Now let us fight to fulfill the promise..
Let us fight to free the world.. to break the nation barrier..
Let us fight for the reason of world of progress which leads the happiness..
in the name of democracy let us all have rights..”

ಅದೇ ಛಳಕು ಅಳಿಯದಂತೆ ಉಳಿದಿದೆ

ಅಂಗಳದಲ್ಲಿ ಅದೇ ಛಳಕು ಅಳಿಯದಂತೆ ಉಳಿದಿದೆ
ಹೊಳಪು ಹೊಳೆದು ಮಿನುಗಿ ಮಿಂಚಿ ಅಂಧಕಾರ ಕಳೆದಿದೆ
ಅಲ್ಲಿ ಅವಳ ಘಮವಿದೆ ; ಬೆಳ್ಳಿ ಗೆಜ್ಜೆಯ ಘಲಿರಿದೆ
ಅವಳ ಸಿರಿಕಂಠದ ಭಜನ್ ಗಾನ ಸುಧೆಯಿದೆ
ಕೈ ನೇವರಿಸಿ ಸವರಿದಂತ ತುಂಬೆ ಎಲೆಗಳ ನಾಚಿಕೆಯಿದೆ
ಅವಳು ಮುತ್ತಿಟ್ಟ ಗುಲಾಬಿ ಕನ್ಯೆಯ ಕೆನ್ನೆ ರಂಗೇರಿದೆ
ಅಲ್ಲಿ ಗಾಜಿನ ಬಳೆಗಳ ಕಂಕಣೆಯಿದೆ
ತಂಪು ಗಾಳಿ ಹಾರಿಸಿದ ಮುಂಗುರುಳ ಮುದವಿದೆ
ನೆನೆಸಿ ನಕ್ಕ, ನಲಿದು ನಿಂತ ಮಂದ ಹಾಸ ಕಲರವವಿದೆ
ಚಿಟ್ಟೆ ಹಿಂದೆ ಓಡಿದಂತ ಸಣ್ಣ ಬೆರುಗು ಅಲ್ಲಿದೆ
ಬೊಗಸೆಯಲ್ಲಿ ಅಕ್ಕಿ ಎರೆದೆ, ಹಕ್ಕಿ ಕೊರಳು ತುಂಬಿದೆ
ಹಾರಿ ಕುಣಿದ ದಾಟಿ ನೋಡಿ ನವಿಲೆ ಮರೆಗೆ ಸರಿದಿದೆ
ಹಸಿ ಜೌಗಿನಲಿ ಪುಟ್ಟ ಮೆದು ಪಾದದ ಗುರುತಿದೆ
ಅವಳು ಬಂದು ಹೋದ ಕುರುಹು ಅಳಿಯದಂತೆ ಉಳಿದಿದೆ
-ವಿಶ್ವಾಸ್ ಭಾರದ್ವಾಜ್

ಸಮರಸ ದಾಂಪತ್ಯಕೆ ಕುಡಿ ಕವಿತೆಗಳ ಹಾರೈಕೆ:


"ಅವರದ್ದು ಜಗತ್ತಿನ ಅತಿ ರಮ್ಯ ಸಮರಸಪೂರ್ಣ ದಾಂಪತ್ಯ ಜೀವನ.. ಅಲ್ಲಿ ಗಂಡ ಅನ್ನುವವ ಆಶ್ರಯಧಾತ ಮಾತ್ರವಲ್ಲ ಅಭಯದಾತ, ಗಟ್ಟಿ ದೇಹದ ಆಳವಾದ ಬೇರು ಹೊಂದಿದ ಆಲದ ಮರವಿದ್ದಂತೆ.. ಹೆಂಡತಿ ಅನ್ನುವಾಕೆ ಆ ಆಲದ ಮರಕ್ಕೆ ಅಪ್ಪಿ ನಿಂತ ಕೋಮಲ ಕುಸುಮ ಬಳ್ಳಿಯಂತೆ.. ಪರಿಪೂರ್ಣ ಜೀವನದ ಹಂತವನ್ನು ಸವಿದು, ಅನುಭವಿಸಿ, ಅನುಭೋಗಿಸಿ, ಈಗ ಅದೇ ಸ್ಮರಣೆಗಳನ್ನು ಮೆಲುಕು ಹಾಕುತ್ತಿರುವ ಆ ಪತಿ-ಪತ್ನಿಯರ ಬದುಕು ಇಲ್ಲಿದೆ..
ಪತಿ ತನ್ನ ಪತ್ನಿಗೆ:
1. ಬಾಳ ಕುಸುಮ ಕೈಪಿಡಿದು
ನಡೆದ ಬಹು ವಸಂತ
ಮತ್ತೆ ಮತ್ತೆ ಚೈತ್ರ ಕಾಲ
ಮತ್ತೆ ಕಳೆದ ಗ್ರೀಷ್ಮ ಋತು
ಇಹಕೆ ಜೊತೆಯಾಗಿಹುದು
ಪರದ ಅನೂಹ್ಯ ಭಾವತೇರು
ಏರಿದ ಅದಮ್ಯ ಸಂತಸ
===
2. ಕಾಮನಬಿಲ್ಲಿಗೆ ತಾಳಿಯ ಕಟ್ಟಿದೆ
ಸಿಕ್ಕಿಸಿ ಸೆರಗಿಗೆ ಪಂಚೆಯ ಚುಂಗು
ಹೆಜ್ಜೆಯ ಹಾಕಿದ ಸಪ್ತ ಪಾದಗಳು
ಸಪ್ತವರ್ಣದ ಅಶ್ವಗಳ ತೇರು
ಸಪ್ತ ಸ್ವರದೊಡನೆ ದಾಂಪತ್ಯ
ಸಪ್ತ ಜನುಮಗಳಿಗೂ ಸಾಂಗತ್ಯ
===
3. ನಡೆವ ದಾರಿಗಂಜಿ ಬಂತು
ನಾಚಿ ನುಲಿದ ಮಯೂರ
ಚಿಗುರೆ ಕಣ್ಣ ಚಾಂಚಲ್ಯವೇ
ಮೋಹಗೊಳಿಸಿತಪಾರ

ಉಲಿವ ಶುಕದ ಹಕ್ಕಿಧ್ವನಿ
ಇಂಪು ಕಂಪು ಸೊಂಪು
ಮಾಯಾಂಗನೆ ಯಾಮಿನಿ
ಜೀವ ಭಾವ ಮುಡಿಪು
ಅಂತರಂಗ ಬೆಸುಗೆ ಬೆಸೆದ
ಹಸನ್ಮುಖಿ ಸುಖಿ
ಒಲವ ಜೇನ ಮೊಗೆದು ಎರೆದ
ಎನ್ನ ಪ್ರಿಯ ಸಖಿ
===
4. ನಿನ್ನಿಂದಲೆ ಈ ಬಾಳಿಗೆ
ಹೊಸತು ಹಾದಿ
ಹೊಸತು ವರ್ಣ
ಹೊಸತೇ ಹೊನ್ನ ದೀವಿಗೆ
ನಿನ್ನ ಚರಣ ಸ್ಪರ್ಷದಿಂದ
ಹೊಸತು ಹುರುಪು
ಹೊಸತು ನವಿರು
ಹೊಳೆದ ಹೊಸ ದಿಗಂತ
===
5. ಮನ್ವಂತರ ಮಥನವಾಯ್ತು
ಮನದನ್ನೆ ಮುತ್ತಿಟ್ಟ ಆ ದಿನ
ಅನಂತ ಕ್ಷಿತಿಜ ದಾಟಿ ಹಾರಿ
ದಿಗ್ದಿಗಂತ ಮಂಥನ
ನೀಲಾಗಸ ಆಲಿಂಗನ
ನಿಹಾರಿಕೆಯ ಚುಂಬನ
*************************************
"ಪತಿ ಅನ್ನುವ ಪುರುಷ ಜೀವಿತದಲ್ಲಿ ಅಪಾರ ಭರವಸೆಗಳನ್ನು ಸಾಕಾರಗೊಳಿಸಿದ ಪ್ರತ್ಯಕ್ಷ ಭಗವಂತ ಎಂದು ಭಾವಿಸಿದ ಮಾದರಿ ಸತಿಯಾಕೆ.. ತನ್ನ ಸುಕೃತವೇ ತನ್ನ ಕೈ ಹಿಡಿದು ಬಾಳ ಪೂರ್ತಿ ನಡೆಯಿತು ಅನ್ನುವ ನಂಬುಗೆಯಿಂದಲೇ ನಾಚುತ್ತಲೇ ಭಾವ ಸಾಗರದಲ್ಲಿ ಆ ಹೆಂಡತಿ ಈಜುವ ಪರಿ ಇದು.."
ಪತ್ನಿ ತನ್ನ ಪತಿಗೆ:
1. ಮಂಗಳವಾದ್ಯದ ಸುಸ್ವರದಲ್ಲಿ
ಮಂತ್ರತಾರಕದ ಮಹೂರ್ತದಲ್ಲಿ
ಧರ್ಮಾರ್ಥ ಕಾಮಮೋಕ್ಷಗಳ ಬಂಧನ
ಇನಿಯನ ಹಸ್ತದಿ ಬೆಸೆದ ಸಂವೇದನ
ಮುಂದಿನದೆಲ್ಲಾ ಗಂಧರ್ವಗಾನ
===
2. ಹುರಿ ಮೀಸೆ, ಕುಡಿ ಪಂಚೆ
ಉಟ್ಟಿದ್ದ ಗುಣವಂತ
ಜರಿ ಪೇಟ, ಮಣಿ ಬಾಸಿಂಗ
ತೊಟ್ಟಿದ್ದ ರೂಪವಂತ
ನನ್ನ ದೇವರೆ ಇವರು
ಧೀಮಂತ ಅನವರತ
===
3. ಮುಡಿಸಿದ ಮಲ್ಲಿಗೆ ಬಾಡದೆ ಉಳಿದು
ಇಂದಿಗೆ ಕಳೆಯಿತು ಬಹುವರ್ಷ
ಎಣಿಸಿದ ದಿನಗಳು ದಾಟಿದ ಮಾಸ
ಮಾಸದೆ ಉಳಿದಿದೆ ಅದೇ ಹರ್ಷ
ಅಂದಿಗೂ ಇಂದಿಗೂ ಚೆಂದವೇ ಬದುಕು
ಚೆಂದನವನದ ಚೆಲುವು
ಗಂಧದ ಪರಿಮಳ ಸೋಕಿದೆ ಹರಡಿದೆ
ಕುಂದದ ಅಂದದ ಒಲವು
ತುಂಬಿದ ಜೀವನ ಹೊನ್ನಿನ ಪಾತ್ರೆ
ಪಾಯಸ ಇದೆ ಅದರೊಳಗೆ
ಅದ್ದಿದ ಕೈಯನೇ ನೆಕ್ಕಿದೆ ಮಾತ್ರ
ತುಂಬಿಯೇ ಉಳಿದಿದೆ ಹಾಗೆ
===
4. ನಕ್ಕಿದ್ದು ಹಲಬಾರಿ ಅತ್ತಿದ್ದೆ ಕಡಿಮೆ
ನಗಿಸಿದ್ದ ಒಡೆಯರಿಗೆ ಸಾವಿರದ ಶರಣು
ಸುಖದಲ್ಲಿ ತೇಲಿಸಿದ ಅಸಮಧಾನಗಳ ಓಡಿಸಿದ
ಎನ್ನಾತ್ಮ ಬಂಧುವಿಗೆ ಕೈಮುಗಿದು ಶರಣು
===
5. ನನ್ನ ನಿನ್ನ ಮುಗಿಯದ ಪಯಣ
ಸಾಗಿದೆ ನಿಲ್ಲದೆ ನಲ್ಲ
ಉಬ್ಬರ ಇಳಿದಿದೆ, ಅಲೆತುಯ್ದಾಡಿದೆ
ನಾವೆಯ ನಡೆಸಿಹೆಯಲ್ಲ
ಅಂಬಿಗ ನಂಬಿಹೆನಲ್ಲ
**************
(ಇಂತದ್ದೊಂದು ಮಾದರಿ ದಾಂಪತ್ಯ ಹಾಗೂ ಅಪೂರ್ವ ದಂಪತಿಗಳು ಇದ್ದಾರೆ.. ಇಲ್ಲಿರುವ ಎಲ್ಲಾ ಭಾವಗಳ ಆಯಾಮಗಳು ಅಕ್ಷರಶಃ ಅವರ ಜೀವನದ ವಿವಿಧ ಮಜಲುಗಳು.. ನಾನು ನೋಡಿರದ, ಆದರೆ ಆ ಬಗ್ಗೆ ಕೇಳಿದ ಮೆಚ್ಚುಗೆಯ ನುಡಿಗಳೇ ಈ ಕುಡಿಕವಿತೆಗಳಿಗೆ ಪ್ರೇರಣೆ)
-ವಿಶ್ವಾಸ್ ಭಾರದ್ವಾಜ್

ಭಾವ ಎಂದಿಗೂ ಮರೆಯುವುದೂ ಇಲ್ಲ; ಸಾಯುವುದೂ ಇಲ್ಲ

ಮೌನ ಅನ್ನುವುದು ಮಾತು ಮರೆತ ಮೂಖ ನಿರುಪದ್ರವಿ ಜೀವದಂತೆ
ಮೌನ ಹಾಗೂ ಭಾವಗಳು ಅಣ್ಣ ತಮ್ಮಂದಿರಂತೆ
ಭಾವ ಎಂದಿಗೂ ಮರೆಯುವುದೂ ಇಲ್ಲ; ಸಾಯುವುದೂ ಇಲ್ಲ

ಅನುಪಮ:

ಅನುಪಮ:
ಕಣಕಣದಿ ಮಿಳಿತು ಬೆರೆತ
ಭಾವಬಿಂದು ಜೀವವೇ
ಅಣುಅಣುಗಳ ಸಾರ ಸಹಿತ
ಸುಮನೋಹರ ಮೋಹವೇ
ಚಿದ್ವಿಲಾಸ ಹಾಸವೇ
ನಡೆವ ಒಲವ ದೈವವೇ

ಪ್ರತಿ ಸ್ಮೃತಿಯಲಿ ಅನುರಣಿಸುವ
ಪರ ಆತ್ಮವ ಸ್ಪರ್ಷಿಸುವ
ಮನದ ಮುದದ ಚೇತನ
ಅವಿನಾಶಿ ಅನುಬಂಧ ರಿಂಗಣಿಸುವ
ಅನುರಣದಲಿ ಮಾರ್ಧನಿಸುವ
ಅನುಪಮ ಸುಮದ ಘಮದ ಧ್ಯಾನ
ಅನವರತ ಆರಾಧಿಸಿ ಸಿದ್ದಿ ಸಾಧ್ಯ
ಒಲವ ಆಪ್ತ ಸತ್ಕಾರ
ಪ್ರೇಮಪ್ರಣತಿ ಮೌನದಾರತಿ
ಸತತ ನಿರತ ಸಡಗರ
ಬದುಕು ವರ್ಣದಂಕುರ
ಹಸಿರು ಚಿಗುರು ನಿರಂತರ
ಹೊನ್ನ ಬೆಳಕು ಚೆನ್ನ ಥಳುಕು
ತುಂಬು ಹುಣ್ಣಿಮೆ ಆಹ್ಲಾದ
ತಂಪು ಕಂಪು ಸೊಂಪು ಇಂಪು
ಒನುಪು ಮುಡಿಪು ಗಂಧ
ಇರುಳಿನಂದ ಚೆಂದ
ನಿಜದ ಶೀತಲ ಬಂಧ
-ವಿಶ್ವಾಸ್ ಭಾರದ್ವಾಜ್
(ಪ್ರೇಮಿಗಳ ದಿನದ ಶುಭಾಶಯಗಳು)

ಲೀಲಾ ವಿಲಾಸ

ಸಕಲ ಅಚಲ ಲೀಲಾ ವಿಲಾಸ
ನಟನ ಲಯದ ಮಂದಹಾಸ
ಪದ ಸಂಪದ ನೃತ್ಯ ಪಾದ
ಸಂಗೀತ ಸಾಹಿತ್ಯ ಶೃಂಗಾರ ನೂಪುರ
ನಟವಿಶಾರದ ನಟರಾಜ ನರ್ತನ
ಮನಮೋಹಕ ಭವ ಭಾವುಕ ಸಂಕೀರ್ತನ ಸ್ಪಂದನ
ಸ್ವರಸುಮಧುರ ಸಪ್ತಗಾನ
ಬಹುಭಾವದ ವರ್ಣನ
ಬಹುಕಾಲದ ಬಂಧನ
-vishwas bharadwaj

ಮಯೂರ:


ನಲಿದು ನಲಿದು ಕುಣಿದು ನೆಗೆದು
ಉಲಿದು ಚಿಮ್ಮಿ ಅರಳಿ ಹೊರಳಿ
ಮತ್ತೆ ಬಂತು ಮಯೂರ
ಹೆಜ್ಜೆ ಹೆಜ್ಜೆ ಬೆಸೆದು ಬಳುಕೊ
ತಳುಕಿ ನಡೆವ ಹೊಳೆವ ಸೆಳಕು
ಹರಿವ ಹಾದಿ ಹತ್ತಿರ
ಬಂತು ಹಾರಿ ಮಯೂರ

ಗರಿ ಬಿಚ್ಚಿದ ಮನ ಮೆಚ್ಚಿದ
ಸೊಕ್ಕಿ ಕುಣಿದ ನಲಿವು
ಒಲವು ಚೆಲುವು ಬೆಸೆದು ಬೆರೆತು
ಲಾವಣ್ಯದ ಅರಿವು
ಹಾರಿ ಬಂತು ಮಯೂರ
ಮತ್ತೆ ಬಂತು ಮಯೂರ
ಮೇಘಕಾವ್ಯ ಕಣ್ಣ ತುಂಬಿ
ತುಂಬು ಸಂತಸ ಸಂಭ್ರಮ
ಗಿರಿಯ ತುದಿಯ ಮುಟ್ಟಿ ಬಂತು
ಮಲಯ ಮಾರುತ ಡಿಂಡಿಮ
ಮತ್ತೆ ಬಂತು ಮಯೂರ
ತಂತು ಸಮುಷ್ಟಿ ಸಡಗರ
-ವಿಶ್ವಾಸ್ ಭಾರದ್ವಾಜ್

ಕುಡುಕ:


ಮತ್ತಿನ ಗಮ್ಮತ್ತಿನಲ್ಲಿ ಕಾಣದ ಕಳೆದುಕೊಂಡ ಹುಡುಕಾಟದ ಓಘ
ಕಳೆದುಹೋಗಿದ್ದೂ ಸಿಗದಿದ್ದರೂ ಕಾಣಬಹುದೀಗ
ತಿರುಗು ಧರತಿಯ ಒಗೆದೊಗೆದು
ಹೊರಳಿಸಿ ಸುತ್ತಿ ಎತ್ತೆತ್ತಿ ಬಿಸುಟು
ಮತ್ತೆ ಮೇಲೆ ಮತ್ತೆ ಕೆಳಗೆ
ಅಲ್ಲಲ್ಲಿ ಅಳತೆ ಮೀರದಷ್ಟು ಎಡ ಬಲಗಳ ಮಗ್ಗುಲು ಓಲಾಡಿ
ತೇಲುವ ಈಜುವ ಮಲಗಿ ಮುಲುಕಾಡುವ
ಅನುಭವದ ಆನುಭಾವಿಯಂತೆ
ಮಗದೊಮ್ಮೆ ದಿಗ್ಗನೆ ಎದ್ದು ಕೂರುವ
ಮಜದ ಮೋಜಿಗೆ ಕಿಕ್ಕೇರಿಸಿಕೊಂಡು
ಕುಳಿತ ತಳ ನಿಲ್ಲಲಾರದ ಅವಸ್ಥೆ ಅವ್ಯವಸ್ಥೆ ಬೇಕಿತ್ತಾ ಭೂಪ?
ಅಖಿಲಾಂಡ ಬ್ರಹ್ಮಾಂಡ ಅಂಡಾಂಡ ಪಿಂಡ
ದಂಡ ಕುಡುಕ ಮಹಾ ಮಹಿಮ
ಬಹುಪರಾಕ್ ಪರಾಕು

ಉರುಳುವ ಕಳೆವ
ಕಳೆದು ಕಣ್ಮರೆಯಾಗುವ ಕಾಲದ ಪರಿವೆ ಇಲ್ಲದೆ
ವಿಭಿನ್ನ ವಿಚಿತ್ರ ವಿಸ್ಮಯ ಪರಪಂಚದ ಪರಿಧಿಯೊಳಗೆ
ನುಸುಳಿ ಸರಪಳಿ ಬಿಗಿದ ಬಂಧದಂತೆ ನಿಂತಲ್ಲಿ ನಿಲ್ಲದೆ
ಕುಳಿತಲ್ಲಿ ಕೂರದೇ
ಮಲಗಿದರೂ ಮಲಗದೇ
ವಾಸ್ತವ ಆಸನಗಳ ಕಲಿಯದೇ ಸಾಧಿಸುವ ಸಿದ್ಧಿ
ಒಮ್ಮೆ ಮತ್ಸ್ಯಾಸನ ಮತ್ತೆ ವೃಷಭ
ಅಗೋ ಕೂರ್ಮ ವರಾಹ
ಅಲ್ಲ ಈಗ ಶೀರ್ಷಾಸನ. ಓಹೋ ಪ್ರಭುವಿಗೆ ಈಗ ಶವಾಸನ.. ಮಧ್ಯೆ ಮಧ್ಯೆ ಸೂರ್ಯ ನಮಸ್ಕಾರ!
ನಡುವೆ ಗೊಣಗುವ ಅಸ್ಪಷ್ಟ ಅಸ್ಕಲಿತ ಅಂದುಕೊಳ್ಳುವ ಮಾತಿನ ಸ್ಕಲನ
ಯಾರಲ್ಲಿ.. ! ಸಾಮ್ರಾಟರು ಕರೆ ಕಳಿಸಿದ್ದಾರೆ ಕೇಳಿಸಲಿಲ್ಲವೇ? ದುರಳ ಮೂರ್ಖರಾ!
ಆನೆ ಕುದುರೆ ಕಾಲಾಳು ಚದುರಂಗ ನಡುವೆ ಸಪ್ತಾಶ್ವ ರಥದ ಮೇಲಿರುವ ಚಕ್ರವರ್ತಿ
ಸಮರಾಂಗಣದಲ್ಲಿ ವೀರ ಶೂರ ಧೀರೋದ್ದಾತ ಯೋಧ
ಸಿಂಹಾಸನದಲ್ಲಿ ಛತ್ರಿ ಚಾಮರ ಧ್ವಜದ ಒಡೆಯ
ಮಹಾಜನಗಳ ಪಾಲಿನ ಅನ್ನದಾತ ಅಯ್ಯ
ಕಲ್ಪನಾ ವಿಕಾಸದಲ್ಲಿ ಸರ್ವವೂ ಆಗಬಲ್ಲ ರಾಯ
ಸಾಮ್ರಾಟರಿಗೆ ಚಿತ್ತದಲ್ಲೀಗ ಸೋಮರಸದ ಸಮೃದ್ಧ ಜ್ಞಾನ!
ಕರೆತನ್ನಿ ವಿದ್ವಾಂಸರು, ಸರಸ್ವತಿ ಪುತ್ರ ರತ್ನ ಮಣಿ- ಮುಕುಟಗಳ ಹಿಂಡು ದಂಡುಗಳನ್ನು
ಮತ್ತಿಳಿಯುವ ಮುನ್ನವೇ ಸ್ಫುರಿಸಿ ಹರಿದು ಹೊಳೆಯಾಗಿ ಕಡಲು ಸೇರಲಿ
ಪದ್ಯ ಕಾವ್ಯ ಅರ್ಥಾರ್ಥ-
ವೈಚಾರಿಕ ತೌಲನಿಕ ವಿಮರ್ಷಕ ಚಿಂತನೆಗಳ ಮಳೆ
ಧಾರೆ ಧಾರೆ ಇಳಿಯಬೇಕು ಮೈಥುನದ ಉತ್ತುಂಗ ಪರಮಾವಧಿಯ ಸೌಖ್ಯ ಹೊಂದಿದಂತೆ
ವೀರ್ಯ ಚಿಮ್ಮುವ ಮುನ್ನದ ಉತ್ಕಟತೆಯೇ ಕಾವ್ಯ
ಅಮಲಿಳಿಯುವ ಮುನ್ನವೂ ಸೃಷ್ಟಿಯಾಗಲಿ ದಿವ್ಯ
ಜಗತ್ತು ಸುಖದ ಭಂಡಾರ..
ಅಲ್ಲಲ್ಲ ಆಸೆ ದುಃಖ ತಂದೊಡ್ಡುವ ಗಟಾರ
ಈಗ ಮಹಾಸ್ವಾಮಿಗಳು ಭೋಗ ಜೀವನದ ತ್ಯಾಗಿಯೂ ಯೋಗ ಪಾರಂಗತರು ವಿರಾಗಿಯೂ ಬೈರಾಗಿಯೂ ಹೌದು!
ಅಮಲಿಳಿಯುವ ತನಕ ಪುಂಖಾನುಪುಂಖ ಆಶಿರ್ವಚನ ಗ್ಯಾರಂಟಿ..!
ಬದುಕು ಶೂನ್ಯ ನಶ್ವರ ವೈರಾಗ್ಯ ಲೊಳೊಲೊಟ್ಟೆ
ಇಂದು ಜೀವಿಸಿದ್ದಿ
ನಾಳೆ ನಾನಿಲ್ಲ ನೀನು ಇಲ್ಲ
ಅಗೋ ಅಲ್ಲಿದೆ ಚಿದ್ವಾಲಸ ಬೀರುವ ಅನಂತ ಆಕಾಶ
ಅಲ್ಲಿ ಹೋಗಬೇಕೆಂದರೆ ಹೀರು ಈ ಕಷಾಯವ
ಕುಡಿದಷ್ಟೇ ಹೊತ್ತು ನೀನಿರುತ್ತಿ ಮೋಡದ ಮೇಲೆ ಒಳಗೆ ಸಂದಿ ಗೊಂದಿಗಳ ಮೂಲೆ ಮೂಲೆಗಳಲ್ಲಿ
ಜಗ ಆಡಿಕೊಳ್ಳುತ್ತೆ;
ಆಡಲಿ ಬಿಡು
ನೀ ಸರ್ವಶ್ರೇಷ್ಠ ಘನ ತತ್ವಜ್ಞಾನಿ
ಹಿರಿತನ ಬರುವುದೇ ಹೀರುವ ಪೇಯದಲ್ಲಿ
ಮಹಾಸ್ವಾಮಿಗಳ ಮಾತು ತೊದಲು ತೊದಲು
ಅರೇ ನಿಲ್ಲತೊಡಗಿದೆ ಪುಗುಸಟ್ಟೆ ಹಿತೋಪದೇಶ
ಬಹುಶಃ ಮತ್ತಿಳಿಯುವ ಸೂಚನೆ
ವೇದಾಂತಿ ನಾಪತ್ತೆಯಾಗಲಿದ್ದಾನೆ ಅದೇ ವಿಪರ್ಯಾಸ
ಮುಂದಿನ ಪ್ರವಚನಕ್ಕಾಗಿ ಕಾಯಿರಿ
ಬಾಟಲಿ ಮುಚ್ಚಳ ತೆಗೆವವರೆಗೂ
ಶುಭಂ
-ವಿಶ್ವಾಸ್ ಭಾರದ್ವಾಜ್

ಯಾಕ್ ಇದನ್ ಹೇಳ್ದೇ ಅಂದ್ರೆ...

ಒಂದಷ್ಟು ಮಂದಿ ಅದ್ಭುತವಾಗಿ ಮಾತಾಡ್ತಾರೆ..!
ಇನ್ನೂ ಕೆಲವು ಮಂದಿ ಮಾತೇ ಆಡಲ್ಲ ಮಾಡಿ ತೋರಿಸ್ತಾರೆ..!
ಇಲ್ಲಿ ಲಾಜಿಕ್ ಏನಂದ್ರೆ- ಮಾತೋಡೋರು ಮಾಡಲ್ಲ; ಮಾಡೋರು ಮಾತಾಡಲ್ಲ..
ವಿಪರೀತ ಅದ್ಭುತವಾಗಿ ಮಾತಾಡೋ- ಅಷ್ಟೇ ಅದ್ಭುತವಾಗಿ ಕೆಲಸ ಮಾಡೋ-
ಕಿಡಿಗೇಡಿಗಳಿದ್ದಾರಲ್ಲ..!
ಅವ್ರಿಂದ ಮಾತ್ರ ದೇಶ ಉದ್ದಾರ ಆಗಬೈದು..
ಯಾಕ್ ಇದನ್ ಹೇಳ್ದೇ ಅಂದ್ರೆ...

Fine ಅಹಂಕಾರ ಇರಲೇ ಬೇಕು..

ನಮ್ಮೆಲ್ಲರಲ್ಲಿ ಒಂದು ವಿಕೃತ ಅಹಂಕಾರ ವಿನಾಕಾರಣ ಮನೆ ಮಾಡಿರುತ್ತದೆ..
Fine ಅಹಂಕಾರ ಇರಲೇ ಬೇಕು.. ಯಾಕಂದ್ರೆ ನಾವು ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ.. ಜಗತ್ತಿನ ಎಲ್ಲಾ ಆಳುವ ದೊರೆಗಳಿಗೆ ಮೊದಲ ಸಮರ್ಥ ಪ್ರತಿಪಕ್ಷ ನಾವೇ.. ನಮ್ಮಷ್ಟು ಖಂಡ ತುಂಡವಾಗಿ ಟೀಕಿಸುವ ನೈತಿಕತೆ ಅದ್ಯಾರಿಗಿದೆ..
ನಾವು ದೊಡ್ಡ ಮನುಷ್ಯರು, ಮಹಾಜ್ಞಾನಿಗಳು, ವಿದ್ವಾಂಸರು, ನಾವು ಜಗತ್ತಿಗೆ ಆಚಾರ ಹೇಳುವ ಬುದ್ದಿಜೀವಿಗಳು...
ನಮ್ಮ ಕಿರೀಟದ ಪ್ರಕಾಶದಡಿಯಲ್ಲೇ ಪ್ರಪಂಚ ಬೆಳಕು ಕಾಣುತ್ತದೆ..
ನಮ್ಮ ಕೋಳಿ ಮಾತ್ರವೇ ಕೂಗಿ ಪ್ರಪಂಚವನ್ನು ಎಬ್ಬಿಸುತ್ತದೆ..
ನಮ್ಮದು ಪ್ರಖಾಂಡ ಪಾಂಡಿತ್ಯವೇ ಬಿಡಿ..
64 ವಿದ್ಯೆ ಅನ್ನೋದಿದೆಯಲ್ಲ ಅದು ಅರೆದು ಕುಡಿದಷ್ಟೇ ಸಲೀಸು, 65ನೆಯದು ಯಾಕಿಲ್ಲ ಅಂತ ಒಮ್ಮೊಮ್ಮೆ ಯೋಚಿಸುವುದಿದೆ..
ನಮ್ಮ ಜ್ಞಾನದ ನರ, ವಿವೇಕದ ಹಲ್ಲು, ಸಾತ್ವಿಕ ಅಹಂ ಹುಟ್ಟಿನಂದಲೇ ಅಡರಿಕೊಂಡಿರುವ ಗುಣ.. ಸ್ವಾಭಿಮಾನ, ಆತ್ಮಗೌರವ, ಇವೆಲ್ಲಾ ನಾವೇ ಸೃಷ್ಟಿಸಿಕೊಂಡ ಖುಷಿಕೊಡುವ ವ್ಯಾಧಿ..
Yeah of course ಇವು ಕೇವಲ ನಮಗೆ ಮಾತ್ರವೇ ಇದೆ..
ನಾವು ಅತೀತರು.. ನಾವು ವಿಶ್ವಮಾನ್ಯರು.. ನಾವು ಸರ್ವಶ್ರೇಷ್ಟರು..
ನಮ್ಮ ಒಣ ಅಹಂಕಾರದ ಮೂಲವ್ಯಾಧಿಯಿಂದಾಗಿ ನಾವು ದುಡಿಯುವ ಸಂಸ್ಥೆಗಳಿಗೆ ಕುಷ್ಟ ರೋಗ ಬಡಿಯುತ್ತದೆ; ಬಡಿಯಲಿ..
ನಾವೇ ಕಟ್ಟಿದ್ದ ಉತ್ಸಾಹಶಾಲಿ ಸಂಘಟನೆಗಳು ಸೊರಗಿ ಕೊರಗಿ ನರಳುವ ಕ್ಷಯರೋಗಿಯಂತೆ, ಬತ್ತುವ ನೀರಿನ ಒರತೆಯಂತೆ, ಒಣಗುವ ಗರಿಕೆ ಹುಲ್ಲಿನಂತೆ, ಹೂಬಿಡದೆ ಸಾಯುವ ತುಂಬೇ ಗಿಡದಂತಾಗುತ್ತದೆ; ಆಗಲಿ..
ನಮ್ಮ ಎಣೆ ಮೀರಿದ ತಿಕ್ಕಲುತನಗಳಿಗೆ ಒಂದು ಆರೋಗ್ಯವಂತ ವಾತಾವರಣ ಕಲುಷಿತಗೊಂಡು ಗಟಾರದಲ್ಲಿ ಹರಿವ ವೃಷಭಾವತಿ ನದಿಯಾಗುತ್ತದೆ; ಹಾಳಾಗ್ ಹೋಗ್ಲಿ ಬಿಡ್ರೀ!
ನಮ್ಮ ಅಹಂಕಾರ ಮಾತ್ರ ಸರ್ವಕಾಲಕ್ಕೂ ಶಾಶ್ವತ ಅಜರಾಮರ
ವಾಹ್! ಜೈ ಹೋ...!
-ವಿಶ್ವಾಸ್ ಭಾರದ್ವಾಜ್
(ಅರ್ಥ ಆಗೋರಿಗೆ ಸಮರ್ಪಕವಾಗಿ ಅರ್ಥ ಆದ್ರೆ ಮುಂದ್ರೆ ಒಂದಿಡೀ ವ್ಯವಸ್ಥೆ ಪರಿಶುದ್ಧವಾಗಿಬಿಡುತ್ತೆ.. ಆದ್ರೆ ಅರ್ಥ ಆಗೋದಕ್ಕೂ ಅಹಂಕಾರ ಅಡ್ಡ ಬರದಿದ್ದರೇ ಸಾಕು)

ಪುಟ್ಕತೆ:

ಬದುಕಿನ ಸವಾಲುಗಳಿಗೆ ಹೆದರಿ ಓಡಿ ಬಂದ ದಾರಿಯ ಕಡೆಗೆ ಹಿಂತಿರುಗಿ ನೋಡಿದ್ದವನಿಗೆ ಕಂಡಿದ್ದು ದಣಿವು, ಆಯಾಸ, ಬಾಯಾರಿಕೆ ಹಾಗೂ ಒಂದು ಸಣ್ಣ ನಿರ್ಲಿಪ್ತಿ ಮಾತ್ರ..
ಬದುಕನ್ನು ನೋಡುವ ದಾಟಿ ಬದಲಾಯಿಸಿಕೊಳ್ಳಬೇಕು, ಇಲ್ಲವೇ ಹೀಗೆ ಬದುಕಿನ ಸವಾಲುಗಳಿಂದ ನಿರಂತರ ಪರಾರಿಯಾಗುತ್ತಲೇ ಇರಬೇಕು ಅನ್ನಿಸಿದ್ದು ಆ ಹಂತದಲ್ಲೇ..
ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು ಅನ್ನುವ ಬದಲು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ಅನ್ನಿಸಿದ್ದು ಮಾಮೂಲಿಯಂತೆ ಅವನಲ್ಲೂ ಆಗಿದ್ದ ವಾಸ್ತವ..
ಭವಿಷ್ಯದಲ್ಲಿ ಅವನಿಗಾಗಿ ಕಾಯುತ್ತಾ ಕುಳಿತಿದೆ ಹೊಟ್ಟೆ ಬಾಕ ಪೆಡಂಭೂತ;
ಆದರೆ ಜೀವನ ಪ್ರೀತಿ ಚಿಗುರಿದರೆ ಮಾತ್ರ ಕಾಣಿಸುತ್ತದೆ ಆ ಪೆಡಂಭೂತದ ಮಗ್ಗುಲಲ್ಲೇ ನಿರಮ್ಮಳವಾಗಿ ನಸುನಗೆಯ ಬೀರುತ್ತಾ ಕುಳಿತ ಸ್ನಿಗ್ದ ಸೌಂದರ್ಯವತಿ ಅಭಿಸಾರಿಕೆ..

ಸಾಯಬೇಡ ನೀ ಜಾಣ..

ದಯವಿಟ್ಟು ಮತ್ತೆ ಸಾಯಬೇಡ ನೀ ಜಾಣ..
ನಿನ್ನ ಸಾವಿಗೆ ನೀನು ಮಾತ್ರ ಕಾರಣವಾದರೂ ವಿನಃ
ಮತ್ತೆ ಮತ್ತೆ ನಿನ್ನ ಸಾಮೂಹಿಕವಾಗಿ ಕೊಲ್ಲುತ್ತಾರೆ ಈ ಜನ

ಸಾವು:


ತುಂಡು ಪುಳ್ಳೆಗಂಟಿಸಿದ ಬೆಂಕಿ ಸಣ್ಣಗೆ ಕೆಂಡವಾಗಿ ಹೊಗೆಯಾಡಿದೆ
ಮನೆ ಮುಂದೆ ಅಂಗಳದ ಮೂಲೆಯಲ್ಲಿ ವರಚ್ಚಾಗಿ ಬೂದಿಯಾಗುತ್ತಲೇ ಇದೆ
ಅಲ್ಲಲ್ಲಿ ಕೈ ಕಟ್ಟಿ ಮಾತಾಡುತ್ತಾ ನಿಂತಿದ್ದ ಗುಂಪಿನಲ್ಲಿ ಸತ್ತವನದ್ದೇ ಚರ್ಚೆ
ಅಲ್ಲಿ ಹಾಗೆ ಸತ್ತು ಮಂದಿಯ ಮಾತಿಗೆ ಸ್ವತ್ತಾದವಗೆ ಅದೂ ಗೊತ್ತಾಗುತಿದೆ
ಲಕ್ವಾ ಹೊಡೆದಿತ್ತಾ? ಕೋಮಾದಲ್ಲಿದ್ದನಂತೇ, ಹೃದಯಸ್ಥಂಭನವಾ?
ಕೈಕಾಲು ಬಿದ್ದು ಬಾಯಿ ಸೇದಿ ಹೋಗಿತ್ತಾ? ಅಯ್ಯೋ ಶಿವ ಶಿವಾ..!
ಅಲ್ಲಲ್ಲ ಕಿಡ್ನಿ ಡ್ಯಾಮೇಜ್, ಲಿವರ್ ಲೀಕೇಜ್ ಅಂತೆ; ಕುಡಿತ ವಿಪರೀತವಾ?
ಕ್ಯಾನ್ಸರ್ ಅಲ್ವೇನೋ? ಅಲ್ವಾ ಮಾರಾಯ್ರೇ; ಸತ್ತವನ ವಿಚಾರಿಸಿಕೊಂಬುವಾ
ತೊಂದರೆ ತಾಪತ್ರಯಗಳಿರಲಿಲ್ಲ ಬಿಡಿ; ಹಂಗಾಗಿ ಸಹಜ ಸಾವೇ ಸರಿ
ಸಾಲ ಗೀಲ ಏನಾದ್ರೂ ಇತ್ತಾ? ಓಹ್ಹೋ! ಅನೈತಿಕ ಸಂಬಂಧವೇನ್ರೀ?
ಥತ್ತೆರಿಕೆ ಯಾರಾದ್ರೂ ಈ ನಾಲಿಗೆಗಳಿಗೆ ಫಿನಾಯಿಲ್ ಹಾಕ್ರೀ!
ಗುಸುಪಿಸು ಧನಿಗಳ ಹಿಂದೆಯೇ ಸತ್ತವನ ಶೃಂಗಾರ; ಬಂಗಾರದಂತಹ ಮನುಷ್ಯ ಕಣ್ರೀ
ನೆಂಟರಿಷ್ಟರು, ಬಂದು ಬಳಗ ವಿಶ್ವಾಸಿಗರಿಗೆಲ್ಲರಿಗೂ ವರ್ತಮಾನ..?
-ಕೊಟ್ಟಾಗಿದೆ ಎಲ್ಲರೂ ಬರುವ ಮಾರ್ಗದಲ್ಲಿದ್ದಾರೆ; ಕೆಲವರು ಅನುಮಾನ
ಅಯ್ಯೋ ಕೆಲಸ ಕಾರ್ಯದ್ದೇ ದರ್ದು ತೊಂದ್ರೆ ತಾಪತ್ರಯ ಅದ್ವಾನ
ಮನೆ ಮಕ್ಕಳು ಸಧ್ಯ ಇಲ್ಲೇ ಇದ್ದಾರೆ ಮಾರ್ರೆ, ಅದೇ ಸಮಾಧಾನ
ನಡುಮನೆಯಿಂದ ಅಲೆ ಅಲೆಯಾಗಿ ಹರಿದು ಬರುತಿದೆ ರೋದನೆ
ಆತ್ಮಕ್ಕೆ ಹತ್ತಿರದವರಿಗೆ ಹೇಳಿಕೊಳ್ಳಲಾರದ ಮೂಕ ವೇದನೆ
ಕೆಲವು ಜೀವಗಳಂತೂ ಕಾಲನ ನಿರ್ಣಯಕೂ, ಎಸೆದಿವೆ ಘೋರ ಖಂಡನೆ
ಸನಿಹ ಬಲ್ಲದವರು ದೂರದಲ್ಲೇ ನಿಂತು ಸಲ್ಲಿಸುವರು ಮೌನ ಪ್ರಾರ್ಥನೆ
ನೆರೆಮನೆಯಾಕೆಯಿಂದ ನಡೆಯುತಿದೆ ನೆರದವರ ಉಪಚಾರ
ಪಾಪ! ಸೂತಕದ ಮನೆಗೆ ನೆರೆಹೊರೆಯ ಕೈಲಾದ ಉಪಕಾರ
ಕಾಫಿ ಸಮಾರಾಧನೆ, ಬಾಯಾರಿಕೆ ನೀರು ಬೆಲ್ಲದ ಸದಾಚಾರ
ಇಹ ತೊರೆದ ಕಾಯದ ಕುರಿತು ನಡೆಯುತ್ತಲೇ ಇದೆ ಪ್ರವರ
ಮಾತೆ ಮುತ್ತೈದೆಯರು; ನಿತ್ಯ ಸುಮಂಗಲಿಯರ ಗೋಳು ನಿಂತಿದೆ
ಅಪರ ಕ್ರಿಯಾಕರ್ಮಕ್ಕೆ ಬಂದ ಪುರೋಹಿತ ಬೆರಳಿಗೆ ದರ್ಬೆ ಸುತ್ತಿದೆ
ಪಾಣಿ ಪಂಚೆ ಕಚ್ಚೆ ಕಟ್ಟಿದ ಮಗನ ಹೆಗಲಲ್ಲಿ ಸತ್ತವನದೇ ರೇಷ್ಮೇ ಉತ್ತರೀಯ
ಕರಿ ಎಳ್ಳು, ಮಡಿಕೆ, ಗಾಡಿ ಸೌದೆ, ಹಿತ್ತಾಳೆ ಪಂಚಪತ್ರೆಯ ಜೊತೆ ದಕ್ಷಿಣೆಯೂ ಮುಖ್ಯ!
ಬಿದಿರು ಬೊಂಬುಗಳ ಕಟ್ಟಿದ ಚಳ್ಳೆ ಹುರಿ ಚಟ್ಟ; ದಬ್ಬೆ ಸಿಕ್ಕಿಸಿ ಕಟ್ಟ!
ಶಂಖ ಜಾಗಟೆ ತಮಟೆ ಬಂತು ಹೊರಬಾಗಿಲ ಪಕ್ಕ; ಕಣಗಿಲೆ ಮಾಲೆ ಹಾಕ
ಗೋವಿಂದ ಗೋವಿಂದ ರಾಮನಾಮ ಸತ್ಯ; ಪಾರ್ವತಿ ಪತಿ ಮಹದೇವ ಕೈಲಾಸ ನಾಥ
ಸುರಿವ ಕಂಬನಿಗಳ ಬೀಳ್ಕೊಟ್ಟು ಶವದ ಮೆರವಣಿಗೆ; ಅಂತಿಮ ಗಮ್ಯ ಮಸಣದರಮನೆಗೆ
-ವಿಶ್ವಾಸ್ ಭಾರದ್ವಾಜ್
***
(ಪಕ್ವ ಜೋಗಿಯ ‘ಸಾವು’ ಪದ್ಯವೇ ಈ ಅಪಕ್ವ ‘ಸಾವು’ ಪದ್ಯಕ್ಕೆ ಪ್ರೇರಣೆ; ಅಲ್ಲಿ ಜೋಗಿಯ ಬದುಕು ಹಾಗೂ ಅನುಭವ ಸಾವನ್ನೂ ಕೃತಿಯಾಗಿಸಿದೆ.. ಸತ್ಯ.. ಇಲ್ಲಿ ನನ್ನ ಅಪ್ರಬುದ್ಧ ಚಿತ್ತ ಕೃತಿಯನ್ನು ಸಾಯಿಸಿದೆಯೇ? ಹಾಗಲ್ಲದಿದ್ದರೆ ಸಾಕು)

ಈ ಬುದ್ದಿ ಜೀವಿಗಳಿಗೆ ಒಂದ್ ಸಲ ಜೈ ಕಾರ ಹಾಕ್ರಪ್ಪ..

ಟೌನ್ ಹಾಲ್ ಹತ್ರ ಭಗವದ್ಗೀತೆ ಅಭಿಯಾನದ ವಿರುದ್ಧ ಪ್ರತಿಭಟನೆ ನಡಿತಾ ಇತ್ತು..
ಹೌದ್ರೀ, ಭಗವದ್ಗೀತೆ ಸುಟ್ಟು ಹಾಕೋಣ,, ಅದ್ರಲ್ಲಿ ಏನಿದೆ ಮಣ್ಣು..? ಇಷ್ಟಕ್ಕೂ ಅದನ್ನು ಬರೆದ ಕೃಷ್ಣ - ಸವರ್ಣೀಯರ ದೇವರು.. ಮೇಲಾಗಿ ಮೋಸಗಾರ ಕಳ್ಳ.. ಪುರಾಣ ಯುಗಗಳು, ದಶಾವತಾರ, ಹಿಂದೂ ಧರ್ಮ, ದೇವರು ಎಲ್ಲವೂ ಸುಳ್ಳು..
***
ಭಗವದ್ಗೀತೆಯಲ್ಲಿ ಇವೆಲ್ಲವೂ ಉಲ್ಲೇಖಿಸಲ್ಪಟ್ಟಿವೆ; ಖಂಡಿತಾ ಅವೆಲ್ಲವೂ ಸುಳ್ಳು ಬಿಡಿ..
ಕರ್ಮಮಾರ್ಗ,
ಭಕ್ತಿಮಾರ್ಗ,
ಮುಕ್ತಿ ಮಾರ್ಗ ಇವೆಲ್ಲವೂ ಸುಳ್ಳು..

ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.. ಈ ಚತುರ್ವೇದಗಳೇ ದೊಡ್ಡ ಸುಳ್ಳಿನ ಕಂತೆ..
ಗೀತೆಯಲ್ಲಿ ಈ ಕೆಳಗಿನ ಸಂಸ್ಕಾರಗಳಿವೆ:
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
ಎಲ್ಲಾ ಬ್ರಾಹ್ಮಣರಿಗೆ ಮಾತ್ರ ಅರ್ಥ ಆಗೋ ಅಂತದ್ದು.. ನಮಗೆ ಬೇಡ..
ನಾಲ್ಕು ಯುಗಗಳಿವೆಯಂತೆ:
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
ಸವರ್ಣೀಯ ದೇವ್ರದ್ದು, ನಮಗೆ ಅದ್ರ ಬಗ್ಗೆ ಗೊತ್ತಿಲ್ಲ.. ಹಂಗಾಗಿ ಇದೂ ಸುಳ್ಳು; ನಾವ್ ನಂಬಲ್ಲ
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
ಅನ್ನೋ ನಾಲ್ಕು ಪುರುಷಾರ್ಥಗಳಿದೆಯಂತೆ; ಎಲ್ಲಾ ಕಟ್ಟು ಕಥೆ,, ಸುಳ್ಳು
ಸತ್ವ ,
ರಜ ,
ತಮ.
ಅನ್ನೋ ಮೂರು ಪ್ರಾಕೃತಿಕ ಗುಣಗಳ ಬಗ್ಗೆ ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ.. ಅದೂ ಸುಳ್ಳೇ..
ಇನ್ನು ಗೀತೆಯ ವಿಶ್ವರೂಪ ದರ್ಶನದಲ್ಲಿ ಕಪಟಿ ಕೃಷ್ಣನ ದಶಾವತಾರಗಳಿವೆ
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ
ನಮಗೆ ಪೂಜೆ ಮಾಡಕ್ಕೆ ಬಿಟ್ಟಿಲ್ಲ ಹಂಗಾಗಿ ಅವನು ದೇವರೇ ಅಲ್ಲ..
ಇದು ದಲಿತರ ರಾಜ್ಯ.. ದಲಿತರಿಗೆ ಸವಣೀರ್ಯರಿಂದ ಅನ್ಯಾಯ ಆಗಿದೆ.. ಹಾಗಾಗಿ ದಲಿತರೇ ತಮ್ಮ ದೇವರನ್ನು ಸೃಷ್ಟಿಸಿಕೊಳ್ತಾರೆ.. ಆ ದೇವರ ಪೂಜಿಸೋದೆ ಧರ್ಮ ಆಗಬೇಕು.. ಅದಕ್ಕೊಂದು ಧರ್ಮಗ್ರಂಥ ಕೂಡಾ ರಚನೆ ಆಗಬೇಕು.. ಸತ್ಯ, ಅಹಿಂಸೆ, ನ್ಯಾಯ, ನಿಜವಾದ ಧರ್ಮ ಇದೆಲ್ಲದರ ಬಗ್ಗೆ ದಲಿತರ ಪರವಾಗಿ ನಮ್ಮ ಬೃಹಸ್ಪತಿ ಬುದ್ದಿಜೀವಿಗಳು ಹೊಸ ವ್ಯಾಖ್ಯಾನ ಮಾಡ್ತಾರೆ..
ಇನ್ಮುಂದೆ ಭಗವದ್ಗೀತೆ ಬದಲಿಗೆ ಪರ್ಯಾಯವಾಗಿ ಇನ್ನೊಂದ್ಯಾವುದೋ ಧರ್ಮಗ್ರಂಥನಾ ಈ ಸೋ ಕಾಲ್ಡ್ ಬುದ್ದಿಜೀವಿಗಳು ದಲಿತರ ಕಲ್ಯಾಣಕ್ಕಾಗಿ ಮಾಡ್ತಾರಂತೆ.. ನಾವು ಅದನ್ನೇ ಪಾರಾಯಣ ಮಾಡಬೇಕಂತೆ..
***
ಇದೇ ನಿಜವಾದ ಅರ್ಥದಲ್ಲಿ ದಲಿತ ಚಳುವಳಿ.. ನಮ್ಮೂರಲ್ಲಿ ದಲಿತರಿಗೆ ಎರಡು ಹೊತ್ತು ಸರಿಯಾದ ಊಟ ಸಿಕ್ತಿಲ್ಲ.. ದಲಿತರ ಮನೆ ಮಕ್ಕಳಿಗೆ ಶಿಕ್ಷಣ ಕೊಡಕ್ಕಾಗ್ತಿಲ್ಲ.. ದಲಿತ ಕಲ್ಯಾಣ ನಿಧಿ ಅಹಿಂದ ರಾಜಕೀಯ ನಾಯಕರ ಹೊಟ್ಟೆಗೆ ಹೋಗ್ತಿದೆ.. ಅದ್ಯಾವುದು ಮುಖ್ಯ ಅಲ್ಲ ಕಣ್ರೀ..
ಭಗವದ್ಗೀತೆ ಸುಟ್ಟು ಹಾಕಬೇಕು ಆಗ ಮಾತ್ರ ದಲಿತರು ಉದ್ಧಾರ ಆಗ್ತಾರೆ..

ಶ್ರೀ ರಾಮಚಂದ್ರ ಭಗವಾನ್ ದೇವರಲ್ಲವಂತೆ

ಶ್ರೀ ರಾಮಚಂದ್ರ ಭಗವಾನ್ ದೇವರಲ್ಲವಂತೆ, ಏಕಪತ್ನೀವ್ರತಸ್ಥ ಅಲ್ಲವಂತೆ, ಹೆಂಡ ಕುಡಿಯುತ್ತಿದ್ದನಂತೆ..
ರಾಮನನ್ನು ದೇವರೆಂದು ಒಪ್ಪಿಕೊಳ್ಳೋದು ಬೇಡ..ಪೂಜಿಸೋದು ಬೇಡ..
ನಮ್ಮ ಭಗವಾನರು ಏಕಪತ್ನೀವ್ರತಸ್ಥರು, ನಿಷ್ಟ ಸಂಸಾರಿಗಳು, ಸಮಾಜ ಪರಿವರ್ತಕರು, ಹೊಸ ಸಮಾಜ ಸೃಷ್ಟಿ ಮಾಡುವ ಅರ್ಹತೆ ಉಳ್ಳವರು,,,,
ಮುಖ್ಯವಾಗಿ;
ನಮ್ಮ ಭಗವಾನರು ಹೆಂಡ ಕುಡಿಯೋದಿಲ್ಲ..
ಹಾಗಾಗಿ ಇನ್ಮುಂದೆ ಶ್ರೀರಾಮನ ಫೋಟೋ/ಮೂರ್ತಿ ಬದಲಿಗೆ ಭಗವಾನರ ಮೂರ್ತಿಗೆ ಪೂಜೆ ಮಾಡೋಣ..
ಏನಂತೀರಿ..?

ನೀನಂದಿದ್ದು ಸರಿ

Fine, ನೀನು ದಕ್ಷಿಣದ ಕಡೆಗೆ ಹೋಗು..ಅಲ್ಲಿ ಕನ್ಯಾಕುಮಾರಿ ತೀರವಿದೆ.. ನಾನು ಉತ್ತರಕ್ಕೆ ಕಾಶ್ಮೀರದ ಕಣಿವೆಯ ಕಡೆಗೆ ಹೋಗ್ತೀನಿ..
ಇಬ್ಬರಿಗೂ ಒಂದು ಡೆಡ್ ಎಂಡ್ ಅಂತ ಬಂದೇ ಬರುತ್ತೆ.. ಅಲ್ಲಿ ನಿಂತು, ಕೂತು ದಣಿವಾರಿಸಿಕೊಂಡು ಯೋಚಿಸೋಣ.
ಇಬ್ಬರೂ ಅಕ್ಕಪಕ್ಕದ ನ್ಯಾಷನಲ್ ಹೈವೇನಲ್ಲಿ ಹೋಗಬಹುದಿತ್ತು.. ಆದರೆ ಇಬ್ಬರ ಮಧ್ಯೆ ಅಡ್ಡ ಬಂದ ಅಥವಾ ಅಡ್ಡ ತಂದ ಅದ್ಯಾವುದೋ ಅಹಂಕಾರವೋ ತಿಕ್ಕಲುತನವೋ ಮತ್ತಿನೆಂತದೋ ಭಾವ, ಪರಸ್ಪರ ವಿರುದ್ಧ ದಿಕ್ಕಿಗೆ ಕೊಂಡೊಯ್ತು.
ಈಗ ನೀನು ಸಾವಿರ ಮೈಲು ಅಸಂಖ್ಯಾತ ಗಾವುದ ದೂರ ಇದ್ದೀಯಾ.. ಬೇಕೆಂದಾಗ ಸಿಗುತ್ತೀಯಾ? ನಮ್ಮ ಅಹಂಕಾರ ನಮ್ಮ ಬದುಕನ್ನೇ ಕೊಂದು ಬಿಡ್ತು.. ಅಲ್ಲವಾ

ನಾನು..?

ನಾನು..?
ಸ್ವರ್ಣಲೇಪಿತ ಸಿಂಹಾಸನ ಸುವರ್ಣ ರಜತ ಪ್ರಾಶನ
ರತ್ನಖಚಿತ ಮಣಿ ಮುಕುಟ ವಜ್ರ ಸಹಿತ ಕಿರೀಟ
ಭೂಮಂಡಲ ಅಧಿಪತಿ ಚಕ್ರವರ್ತಿ ಸಾರ್ವಭೌಮ
ನನ್ನ ಹೊರತು ಭಿನ್ನ ಎಲ್ಲ ನಾನು ನಾನು ನಾನೇ..!
ವಿಕಟಕವಿ ಶಕಟ ಪಾಠ ಪ್ರವಚಿಸುವ ಅಧ್ಯಾಪಕ
ಬುದ್ದಿ ಬಲಿತ ಮೇದಾವಿ ಪ್ರಖಂಡಖಂಡ ಪಂಡಿತ
ದಿಕ್ಕುಗಳಿಗೆ ದಾರಿ ತೋರೋ ಘನ ಮೇರು ವಿದ್ವಾಂಸ
ನಾನು ನಾನೆ ಸವ್ಯಸಾಚಿ ಸಾಟಿ ನಾನು ನಾನೇ..!
ವೀರ ಶೂರ ಮಹಾಧೀರ ಶೌರ್ಯ ರಣತ್ರಿವಿಕ್ರಮ
ಖತ್ತಿ ಈಟಿ ಗದೆ ಗುರಾಣಿ ಬಿಲ್ಲು ಬಾಣ ಕರತಾಮಲಕ
ಬಿಸಿ ನೆತ್ತರು ತಣಿಯಲಾರದು ಚಿರ ಯೌವನ ಶಾಶ್ವತ
ಪರಾಕ್ರಮಿ ಬಾಹುಬಲಿ ಪ್ರಚಂಡ ನಾನು ನಾನೇ..!
ಖಾವಿ ಹೊದ್ದು ಠೀವಿಯಿಂದ ಹಾವಗೆ ಮೆಟ್ಟು ನಡೆವ
ಪಾದಧೂಳಿ ಧನ್ಯರಾಗೋ ಅಸಂಖ್ಯ ಭಕ್ತ ಮಾನ್ಯ
ಮಾತಲ್ಲ ಅಮೃತವಾಣಿ ಭಗವಂತನ ಶ್ರೇಯೋಭಿಲಾಷಿ
ಆಶಿರ್ವಚನ ಸತ್ಸಂಗದ ದೇವಮಾನವ ನಾನು ನಾನೇ..!
ಪುರಪ್ರಮುಖ ಪೌರಗಣ್ಯ ರಾಜಕಾರಣ ನಾಯಕ
ಜನಗಣಗಳ ಜೈಕಾರ ನನಗೇ ಮಾತ್ರ ಸ್ವೀಕಾರ
ಚತುರ ಕುಶಲ ರಾಜನೀತಿ ಹಣೆವ ಚದುರಂಗ ಪ್ರವೀಣ
ಸತ್ತೆಯೊಳಗೂ ಸಹಿ ದಾಖಲಿಸುವ ಶಾಣ್ಯಾ ನಾನು ನಾನೇ..!
ನಾನಜೇಯ ನಾನಂತಿಮ ಸರ್ವಜ್ಞಜ್ಞಾನಧಾತು
ಸರ್ವೋತ್ತಮ ಶ್ರೇಷ್ಟ ಜೇಷ್ಠ ನಾನು ಗರಿಷ್ಠ ಧಾತ
-ವಿಶ್ವಾಸ್ ಭಾರದ್ವಾಜ್

ಹಲಗೆ ಹನುಮಂತಪ್ಪ:


"ಕಪ್ನಳ್ಳಿ ಹೋರಿ ಹರಿಗ್ಗೇಲಿ ಹೋತ್ರಲೇ" ಅನ್ನುತ್ತಾ ಕಾಲೆತ್ತಿ ಕುಣಿಯುತ್ತಾ ಡಂಕಣಕಣ ಣಕಣಕಣ ಬಡಿಯುತ್ತಿದ್ದ ಆತನ ಹೆಸರು ಹಲಗೆ ಹನುಮಂತಪ್ಪ. ಹಲಗೆ ಹನುಮಂತಪ್ಪನಿಗೆ ಮಹತ್ವ ಬರುತ್ತಿದ್ದುದ್ದು ಕೆಲವೇ ಸಂದರ್ಭಗಳಾದರೂ ಆತ ಬಡಿಯುತ್ತಿದ್ದ ತಮಟೆಯಂತಹ ಚರ್ಮವಾದ್ಯದ ಲಯಬದ್ದ ಸದ್ದು ಮಾತ್ರ ನಿತ್ಯವೂ ಕೇಳುತ್ತಿತ್ತು. ತ್ಯಾಗರ್ತಿಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಹೋರಿ ಓಡಿಸುವ ಹಬ್ಬ, ದೀಪಾವಳಿಯ ಗುಡುಗುಡಿ, ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಮಾರಮ್ಮನ ದುಗುಳ್ ಪರ್ಸೆ, 5 ವರ್ಷದ ಮಾರೀಜಾತ್ರೆಗಳಲ್ಲಿ ಹನುಮಂತಪ್ಪನ ಹಲಗೆ ಇಲ್ಲದಿದ್ರೆ ಅವಕ್ಕೆಕಳೆಯೇ ಇರುತ್ತಿರಲಿಲ್ಲ. ತ್ಯಾಗರ್ತಿಯ ನಾಗರೀಕತೆಯ ಸಂಸ್ಕ್ರತಿಯಲ್ಲಿ ಹಾಗೆ ಬೆರೆತು ಹೋಗಿತ್ತು ಹನುಮಂತಪ್ಪನ ಚರ್ಮವಾದ್ಯ ಹಲಗೆ ಹಾಗೂ ಹನುಮಂತಪ್ಪನ ವಿಪರೀತ ವಿಲಾಸಿ ಬದುಕು.
ಗ್ರಾಮದ ಹೋರಿ ಓಡಿಸುವ ಹಬ್ಬದ ದಿನದಂದು ಮುಕುಪ್ಪಿ ಸರ್ಕಲ್ ಅಂತಲೇ ಕರೆಸಿಕೊಳ್ತಿದ್ದ ಕೆಳಗಿನ ವೃತ್ತದ ಮಧ್ಯೆ ಒಣಹುಲ್ಲು, ಕಡ್ಡಿ ಪುಳ್ಳೆಗಳನ್ನೊಡ್ಡಿ ಬೆಂಕಿ ಹಾಕಿ ಅದರಲ್ಲಿ ತನ್ನ ಚರ್ಮದ ತಮಟೆಯನ್ನು ಲಘುವಾಗಿ ಕಾಯಿಸುತ್ತಿದ್ದ ಹನುಮಂತಪ್ಪ. ಅಲ್ಲಿಗೆ ಹನುಮಂತಪ್ಪನ ಹಲಗೆ ಭೀಷಣ ಸದ್ದು ಮಾಡುವುದರಲ್ಲಿ ಅನುಮಾನವೇ ಇಲ್ಲ ಅನ್ನುವ ಅಭಿಪ್ರಾಯ ಊರ ಮಂದಿಗೆ ಖಾತ್ರಿ ಆಗುತ್ತಿತ್ತು. ಆದರೆ ಅಲ್ಲಿ ಇನ್ನೊಂದು ಸಮಸ್ಯೆ ಇರುತ್ತಿತ್ತು. ಹಲಗೆ ಹನುಮಂತಪ್ಪನಿಗೆ ಅಂದು ಮಾತ್ರ ಬೆಳ್ಳಂಬೆಳಿಗ್ಗೆಯೇ ಸಾರಾಯಿ ನೈವೇದ್ಯವಾಗಬೇಕಿತ್ತು. ಹೊಟ್ಟೆಗೆ ಹುಳಿ ಹೆಂಡ ಬಿದ್ದ ಮೇಲೆ ಮಾತ್ರವೇ ಹನುಮಂತಪ್ಪನ ಮೆದುಳಿನ ಕೋಣೆಯ ಕರೆಂಟು ಆನ್ ಆಗುತ್ತಿತ್ತು. ಇದರ ಖರ್ಚು ತ್ಯಾಗರ್ತಿಯ ಯಾರಾದ್ರೂ ಕಲಾಪ್ರೇಮಿಗಳು ವಹಿಸಿಕೊಳ್ಳಲೇಬೇಕಿತ್ತು.
ಸಾಮಾನ್ಯವಾಗಿ ಮೂರು ಸಂಜೆಯ ನಂತರ ನಟ್ಟ ನಡು ರಾತ್ರಿಯವರೆಗೂ ಲೆಖ್ಖ ಮಾಡಿ 10 ಪಾಕೀಟು ಸರ್ಕಾರಿ ಸರಾಯಿ ಕುಡಿಯುತ್ತಿದ್ದ ಹನುಮಂತಪ್ಪ. ನೆಂಚಿಕೊಳ್ಳಲು ಮಾಮೂಲಿ ಬ್ರಾಮಣರ ಕೇರಿ ವೃದ್ಧೆ ರೇಣುಕಮ್ಮಜ್ಜಿ ಸಹಾನುಭೂತಿಯಿಂದ ಕೊಡ್ತಿದ್ದ ಮಿಡಿಗಾಯಿ ಉಪ್ಪಿನಕಾಯಿ. ಹಿಂದೆ ಮುಂದೆ ಗತಿ ಇಲ್ಲದ ರೇಣುಕಮ್ಮಜ್ಜಿ ಮಾಬಲಗಿರಿ ಮಾಸ್ಟರ್ ಮನೆಯ ಕೊಟ್ಟಿಗೆಯಲ್ಲಿ ರೂಮೊಂದರಲ್ಲಿ ಒಂಟಿಯಾಗಿ ಬದುಕುತ್ತಿತ್ತು. ಜೀವನೋಪಾಯಕ್ಕಾಗಿ ಹಪ್ಪಳ, ಸಂಡಿಗೆ, ಹೋಳಿಗೆ, ಕರದಂಟು, ಉಪ್ಪಿನಕಾಯಿ, ತೊಕ್ಕು ತಯಾರಿಸಿ ಮಾರಾಟ ಮಾಡುತ್ತಿತ್ತು. ಅದರ ಕೈನಲ್ಲಿ ತಯಾರಾದ ಯಾವುದೇ ಖಾದ್ಯವಾದರೂ ಅಮೃತ ಸದೃಶ್ಯ ರುಚಿ. ಅಂತಹ ರೇಣುಕಮ್ಮಜ್ಜಿ ರೂಮಿನ ಮುಂಭಾಗದ ಜಗುಲಿಯ ಮೇಲೆ ಹನುಮಂತಪ್ಪ ಕುಳಿತನೆಂದರೇ ಮುದುಕಿಗೆ ಕರುಣೆ ಸಹಾನುಭೂತಿ ಕರಣೆ ಕರಣೆಯಾಗಿ ಉಕ್ಕುತ್ತಿತ್ತು. ತಾನು ತಯಾರಿಸಿದ ಯಾವುದಾದರೂ ತಿಂಡಿಯೂ ಕುರುಕಲೋ ಕೊಟ್ಟು, ಧನ್ಯತೆ ಅನುಭವಿಸುತ್ತಿತ್ತು ವೃದ್ಧೆ. ಆದರೆ ಅಸಲಿಗೆ ಹಲಗೆ ಹನುಮಂತಪ್ಪ ರೇಣುಕಮ್ಮಜ್ಜಿ ಕೋಣೆ ಮುಂಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದಿದ್ದೇ ಸೂಜಿ ಮೆಣಸಿನ ಕಾಯಿ, ಇಂಗಿನ ಒಗ್ಗರಣೆ ಒಗ್ಗರಿಸಿ ಪಿಂಗಾಣಿ ಜಾಡಿಯಲ್ಲಿ ಹದಹಾಕುವ ಮಿಡಿಗಾಯಿ ಉಪ್ಪಿನಕಾಯಿ ಆಸೆಗೆ. "ಜಾಸ್ತಿ ಕುಡಿಬ್ಯಾಡ ಹನುಮಂತಪ್ಪ" ಅನ್ನುವ ಉಪದೇಶ ಮಾಡಿಯೇ ರೇಣುಕಮ್ಮಜ್ಜಿ ಬ್ಯಾಗಡಿ ಕವರಿನಲ್ಲಿ ಉಪ್ಪಿನಕಾಯಿ ಕಟ್ಟಿ ಕೊಡುತ್ತಿತ್ತು.
ವಿಶೇಷದ ದಿನಗಳನ್ನು ಹೊರತುಪಡಿಸಿದ್ರೆ ಹನುಮಂತಪ್ಪನ ಹಲಗೆಗೆ ಅಷ್ಟು ಮಹತ್ವ ಇರುತ್ತಿರಲಿಲ್ಲ. ಆದರೆ ಅಪ್ಪನಿಗೆ ಸಂಬಳವಾಗುವ ದಿನ ನಮಗೆಲ್ಲರಿಗಿಂತ ನಿಖರವಾಗಿ ಹನುಮಂತಪ್ಪನಿಗೆ ಗೊತ್ತಾಗುತ್ತಿತ್ತು. ಸಂಬಳವಾದ ದಿನ ಮನೆ ಮುಂದೆ ಹನುಮಂತಪ್ಪ ಹಾಜರ್ ಆಗುತ್ತಿದ್ದ. "ಅಯ್ಯಾರೆ, ಪಗಾರ ಆತಂತೆ!" ಅಂತ ರಾಗ ಎಳೆಯುತ್ತಿದ್ದಂತೆ ಅಪ್ಪ ಕಿಸೆಯಿಂದ 10 ರೂ ತೆಗೆದು ಕೊಡುತ್ತಿದ್ದರು. "ಯಾಕ್ರೀ ಅವನಿಗೆ ದುಡ್ಡು ಕೊಡ್ತೀರಾ? ಸುಮ್ಮನೆ ಕುಡಿದು ಹಾಳಾಗ್ತಾನೆ!" ಅಮ್ಮ ಗೊಣಗುತ್ತಿದ್ದಳು. "ಪಾಪ ಕುಡಿಲೀ ಬಿಡೆ. ಅವನಿಗೂ ಹೆಂಡ್ತೀ ಮಕ್ಳು ಸತ್ತ ನೋವಿದೆಯಲ್ಲ. ಕುಡಿದು ಕುಣಿದು ಮರಿತಾನೆ ಬಿಡು" ಅನ್ನುತ್ತಿದ್ದ ಅಪ್ಪ. ಇದು ರೂಟಿನ್ ಆಗಿತ್ತು. ಆದ್ರೆ ಕುಡಿಯುವ ವಿಚಾರದಲ್ಲೂ ಪಕ್ಕಾ ಲೆಕ್ಕಾಚಾರದ ಮನುಷ್ಯ ಹನುಮಂತಪ್ಪ ಅಪ್ಪ ಕೊಟ್ಟ 10 ರೂಪಾಯಿಯನ್ನು ಅಳತೆ ಮಾಡಿ 5 ದಿನ ಕೆಂಪು ಬೋರ್ಡಿನ ಸರ್ಕಾರಿ ಗಡಂಗು ಸರಾಯಿ ಅಂಗಡಿಯ ಹುಂಡಿಗೆ ಹಾಕುತ್ತಿದ್ದ. ಮತ್ತು ಆ ಐದೂ ದಿನ ಮೇಲಿನ ಸರ್ಕಲ್ನಲ್ಲಿ ರಾತ್ರಿ ಹಲಗೆ ಬಾರಿಸಿ ಕುಣಿಯುವಾಗ ಹೆಂಡಕ್ಕೆ ದುಡ್ಡು ಕೊಟ್ಟ ಅಪ್ಪನ ಹೆಸರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ತಿದ್ದ.
ಈಗೊಂದು ಐದಾರು ವರ್ಷದ ಹಿಂದೆ ಹನುಮಂತಪ್ಪ ಸತ್ತು ಹೋದನಂತೆ. ಹಾಗಂತ ಊರಲ್ಲಿ ಯಾರೋ ಹೇಳಿದ್ದು ಇತ್ತೀಚೆಗೆ. ತ್ಯಾಗರ್ತಿ ಬಿಟ್ಟ ಮೇಲೂ ತ್ಯಾಗರ್ತಿ ಕಾಡುವುದೇ ಇಂತಹ ಕೆಲವು ಮರೆಯಲಾಗದ ಪೆಕ್ಯೂಲಿಯರ್ ಪಾತ್ರಗಳಿಂದಾಗಿ.
-ವಿಶ್ವಾಸ್ ಭಾರದ್ವಾಜ್
***

ಇದೇ ತತ್ವ ಭಾವಗಳಿಗೂ ಸಂಬಂಧಪಡುತ್ತವೆ

ಸೃಷ್ಟಿಯಲ್ಲಿ ಜೀವಕಣಗಳು ಸಹಜವಾಗಿ ವರ್ತಿಸಿದರೆ ಪ್ರೊಲಿಫಿರೇಶನ್ ಅಂದರೆ ಸಾಮಾನ್ಯ ಪ್ರಕ್ರಿಯೆ
ಅದೇ ಸೃಷ್ಟಿಯಲ್ಲಿ ಜೀವಕಣಗಳು ಅಸಹಜವಾಗಿ ಮೊಳೆತರೆ ಮೆಲಿಗ್ನಸಿ ಹಾಗಂದರೆ ವಿನಾಶ
ಇದೇ ತತ್ವ ಭಾವಗಳಿಗೂ ಸಂಬಂಧಪಡುತ್ತವೆ ಅಲ್ಲವೇ?

ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ

ಆ ಮುದ್ದಾದ ಮಗುವಿಗೆ ದೇವರು ದ್ರೋಹ ಮಾಡಿಬಿಟ್ಟ. ಅದಕ್ಕೆ ಬ್ಲಡ್‌ ಕ್ಯಾನ್ಸರ್
ಅದು ಅವನ ಆಪ್ತ ಮಿತ್ರನ ಮಗು. ತುಂಬು ವೇದನೆ ತುಂಬಿಕೊಂಡು ಕ್ಯಾನ್ಸರ್ ಆಸ್ಪತ್ರೆಗೆ ಹೋಗಿದ್ದ ಅವನು.. ಆ ಮಗುವಿನ ದೇಹದಲ್ಲಿ ಸತ್ತ ಬಿಳಿಯ ರಕ್ತ ಕಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿತ್ತು.
ಡಾಕ್ಟರ್ ಈಗ ಕೌಂಟ್ 50 ಸಾವಿರ ದಾಟಿದೆ ಅಂದರು. ಅವನಲ್ಲಿ ಆ ಬೇಸರದ ವೇಳೆಯಲ್ಲಿ ಸಹ ಅದು ಹೇಗೆ ಅಷ್ಟು ನಿಖರವಾಗಿ ವೈಟ್ ಪ್ಲೇಟ್ ಲೆಟ್ಸ್ ಕೌಂಟ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳುವ ಬಯಕೆ ಆಯ್ತು. ಕೇಳಿಯೂ ಬಿಟ್ಟ.
ಮಗುವಿನ ದೇಹದ ಮೇಲೆ ಅಳವಡಿಸಿರುವ ಸ್ಕ್ಯಾನಿಂಗ್ ಮಿಷನ್ ರಕ್ತದಲ್ಲಿ ಬೆಳೆವಣಿಗೆಯಾಗುತ್ತಿರುವ ಬಿಳಿಯ ರಕ್ತಕಣಗಳ ಮೇಲೆ ಲೇಸರ್ ಹಾಯಿಸಿ ಲೆಕ್ಕ ತೆಗೆದುಕೊಳ್ಳುತ್ತದೆ ಅಂದರು ಡಾಕ್ಟರ್.
ಅಬ್ಬಾ! ಎಂತಹ ಟೆಕ್ನಾಲಜಿ.. ಜೈ ಹೋ ವಿಜ್ಞಾನ್ ಎಂಡ್ ತಂತ್ರಜ್ಞಾನ್ ಅಂದುಕೊಂಡನಾತ ಮನಸಿನಲ್ಲೇ.
ಕೆಲವು ಕ್ಷಣಗಳ ಬಳಿಕ ಅದೇ ಡಾಕ್ಟರ್ ಸ್ವಗತದಲ್ಲಿ ಗೊಣಗಿದರು. ಹೀಗೆ ಕೌಂಟ್ ಹೆಚ್ಚುತ್ತಾ ಇದ್ರೆ ಮಗು ಹೆಚ್ಚು ದಿನ ಬದುಕೋಲ್ಲ. ಪ್ಲೇಟ್ಸ್ ಲೆಟ್ಸ್ 1 ಲಕ್ಷ ದಾಟಿದ್ರೆ ಆನಂತರ ಭಗವಂತನೂ ಬದುಕಿಸೋಕಾಗಲ್ಲ..
ಗಾಬರಿಯಿಂದ ಹಿಂತಿರುಗಿ ಡಾಕ್ಟರ್ ನ್ನು ನೋಡಿದ ಅವನ ಬಾಯಿಂದ ಉದ್ಗಾರ ಹೊರಬಂದಿತ್ತು. ಬ್ಲಡಿ ಸೈನ್ಸ್ ಎಂಡ್ ಟೆಕ್ನಾಲಜಿ ಇದು ಸಾವಿನ ಸೂಚನೆ ನೀಡತ್ತೆ.

ಮೂರನೆಯ ಬಾರಿಗೂ ಆಗುತ್ತದೆ

ಯಾವುದು ಒಮ್ಮೆ ಆಗಿದೆಯೋ ಅದು ಪುನಃ ಮತ್ತೊಮ್ಮೆ ಆಗಲಾರದು. ಯಾವುದು ಎರಡನೆಯ ಬಾರಿಗೆ ಆಗುತ್ತದೋ ಅದು ಪುನಃ ಮೂರನೆಯ ಬಾರಿಗೂ ಆಗುತ್ತದೆ