Friday 8 May 2015

ಈ ಬುದ್ದಿ ಜೀವಿಗಳಿಗೆ ಒಂದ್ ಸಲ ಜೈ ಕಾರ ಹಾಕ್ರಪ್ಪ..

ಟೌನ್ ಹಾಲ್ ಹತ್ರ ಭಗವದ್ಗೀತೆ ಅಭಿಯಾನದ ವಿರುದ್ಧ ಪ್ರತಿಭಟನೆ ನಡಿತಾ ಇತ್ತು..
ಹೌದ್ರೀ, ಭಗವದ್ಗೀತೆ ಸುಟ್ಟು ಹಾಕೋಣ,, ಅದ್ರಲ್ಲಿ ಏನಿದೆ ಮಣ್ಣು..? ಇಷ್ಟಕ್ಕೂ ಅದನ್ನು ಬರೆದ ಕೃಷ್ಣ - ಸವರ್ಣೀಯರ ದೇವರು.. ಮೇಲಾಗಿ ಮೋಸಗಾರ ಕಳ್ಳ.. ಪುರಾಣ ಯುಗಗಳು, ದಶಾವತಾರ, ಹಿಂದೂ ಧರ್ಮ, ದೇವರು ಎಲ್ಲವೂ ಸುಳ್ಳು..
***
ಭಗವದ್ಗೀತೆಯಲ್ಲಿ ಇವೆಲ್ಲವೂ ಉಲ್ಲೇಖಿಸಲ್ಪಟ್ಟಿವೆ; ಖಂಡಿತಾ ಅವೆಲ್ಲವೂ ಸುಳ್ಳು ಬಿಡಿ..
ಕರ್ಮಮಾರ್ಗ,
ಭಕ್ತಿಮಾರ್ಗ,
ಮುಕ್ತಿ ಮಾರ್ಗ ಇವೆಲ್ಲವೂ ಸುಳ್ಳು..

ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.. ಈ ಚತುರ್ವೇದಗಳೇ ದೊಡ್ಡ ಸುಳ್ಳಿನ ಕಂತೆ..
ಗೀತೆಯಲ್ಲಿ ಈ ಕೆಳಗಿನ ಸಂಸ್ಕಾರಗಳಿವೆ:
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
ಎಲ್ಲಾ ಬ್ರಾಹ್ಮಣರಿಗೆ ಮಾತ್ರ ಅರ್ಥ ಆಗೋ ಅಂತದ್ದು.. ನಮಗೆ ಬೇಡ..
ನಾಲ್ಕು ಯುಗಗಳಿವೆಯಂತೆ:
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
ಸವರ್ಣೀಯ ದೇವ್ರದ್ದು, ನಮಗೆ ಅದ್ರ ಬಗ್ಗೆ ಗೊತ್ತಿಲ್ಲ.. ಹಂಗಾಗಿ ಇದೂ ಸುಳ್ಳು; ನಾವ್ ನಂಬಲ್ಲ
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
ಅನ್ನೋ ನಾಲ್ಕು ಪುರುಷಾರ್ಥಗಳಿದೆಯಂತೆ; ಎಲ್ಲಾ ಕಟ್ಟು ಕಥೆ,, ಸುಳ್ಳು
ಸತ್ವ ,
ರಜ ,
ತಮ.
ಅನ್ನೋ ಮೂರು ಪ್ರಾಕೃತಿಕ ಗುಣಗಳ ಬಗ್ಗೆ ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ.. ಅದೂ ಸುಳ್ಳೇ..
ಇನ್ನು ಗೀತೆಯ ವಿಶ್ವರೂಪ ದರ್ಶನದಲ್ಲಿ ಕಪಟಿ ಕೃಷ್ಣನ ದಶಾವತಾರಗಳಿವೆ
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ
ನಮಗೆ ಪೂಜೆ ಮಾಡಕ್ಕೆ ಬಿಟ್ಟಿಲ್ಲ ಹಂಗಾಗಿ ಅವನು ದೇವರೇ ಅಲ್ಲ..
ಇದು ದಲಿತರ ರಾಜ್ಯ.. ದಲಿತರಿಗೆ ಸವಣೀರ್ಯರಿಂದ ಅನ್ಯಾಯ ಆಗಿದೆ.. ಹಾಗಾಗಿ ದಲಿತರೇ ತಮ್ಮ ದೇವರನ್ನು ಸೃಷ್ಟಿಸಿಕೊಳ್ತಾರೆ.. ಆ ದೇವರ ಪೂಜಿಸೋದೆ ಧರ್ಮ ಆಗಬೇಕು.. ಅದಕ್ಕೊಂದು ಧರ್ಮಗ್ರಂಥ ಕೂಡಾ ರಚನೆ ಆಗಬೇಕು.. ಸತ್ಯ, ಅಹಿಂಸೆ, ನ್ಯಾಯ, ನಿಜವಾದ ಧರ್ಮ ಇದೆಲ್ಲದರ ಬಗ್ಗೆ ದಲಿತರ ಪರವಾಗಿ ನಮ್ಮ ಬೃಹಸ್ಪತಿ ಬುದ್ದಿಜೀವಿಗಳು ಹೊಸ ವ್ಯಾಖ್ಯಾನ ಮಾಡ್ತಾರೆ..
ಇನ್ಮುಂದೆ ಭಗವದ್ಗೀತೆ ಬದಲಿಗೆ ಪರ್ಯಾಯವಾಗಿ ಇನ್ನೊಂದ್ಯಾವುದೋ ಧರ್ಮಗ್ರಂಥನಾ ಈ ಸೋ ಕಾಲ್ಡ್ ಬುದ್ದಿಜೀವಿಗಳು ದಲಿತರ ಕಲ್ಯಾಣಕ್ಕಾಗಿ ಮಾಡ್ತಾರಂತೆ.. ನಾವು ಅದನ್ನೇ ಪಾರಾಯಣ ಮಾಡಬೇಕಂತೆ..
***
ಇದೇ ನಿಜವಾದ ಅರ್ಥದಲ್ಲಿ ದಲಿತ ಚಳುವಳಿ.. ನಮ್ಮೂರಲ್ಲಿ ದಲಿತರಿಗೆ ಎರಡು ಹೊತ್ತು ಸರಿಯಾದ ಊಟ ಸಿಕ್ತಿಲ್ಲ.. ದಲಿತರ ಮನೆ ಮಕ್ಕಳಿಗೆ ಶಿಕ್ಷಣ ಕೊಡಕ್ಕಾಗ್ತಿಲ್ಲ.. ದಲಿತ ಕಲ್ಯಾಣ ನಿಧಿ ಅಹಿಂದ ರಾಜಕೀಯ ನಾಯಕರ ಹೊಟ್ಟೆಗೆ ಹೋಗ್ತಿದೆ.. ಅದ್ಯಾವುದು ಮುಖ್ಯ ಅಲ್ಲ ಕಣ್ರೀ..
ಭಗವದ್ಗೀತೆ ಸುಟ್ಟು ಹಾಕಬೇಕು ಆಗ ಮಾತ್ರ ದಲಿತರು ಉದ್ಧಾರ ಆಗ್ತಾರೆ..
ಈ ಬುದ್ದಿ ಜೀವಿಗಳಿಗೆ ಒಂದ್ ಸಲ ಜೈ ಕಾರ ಹಾಕ್ರಪ್ಪ..

No comments:

Post a Comment