Monday 15 June 2015

ಸೋನೆ ಮಳೆ:


ಸುರಿವ ಸೋನೆ ಮಳೆಯು ಬಂತು
ನಿನ್ನ ನೆನಪಿನಂತೆ
ಬಾನಿಗೆ ಭುವಿಯ ನೆನಪು ತಂತು
ವಸುಧೆ ಹರ್ಷವಂತೆ

ಎಷ್ಟು ಪುಣ್ಯ ಭೂಮಿಯದ್ದು
ಅಸಂಖ್ಯ ಹನಿಗಳ್ ಮುತ್ತು
ಮತ್ತೆ ಮತ್ತೆ ಸುರಿದು ಹನಿಕಿ
ಇಳೆಯು ತೇವ ಅಂತೂ
ಅರಳಿ ಬಾಹು ಸ್ಪರ್ಷ ಚೆಂದ
ಧರಣಿ ತಣಿಸೊ ವರ್ಷ
ಮೇಘ ಗುನುಗಿ ಹಾಡಿ ಹೊಗಳಿ
ಬಯಕೆ ಬಿತ್ತ ದೃಶ್ಯ
ಬಯಲು ನಕ್ಕು ತೊರೆಗಳ್ ಸೊಕ್ಕು
ಹಸಿರು ಹೊನ್ನು ಸಗ್ಗ
ಸೃಷ್ಠಿ ಕಾರ್ಯ ಪೂರ್ಣ ಶಕ್ಯ
ದೃಷ್ಟಿ ಸಿದ್ಧಿ ಯೋಗ
ಕುಣಿವ ಮನಕೆ ಮಳೆಯೆ ರಮ್ಯ
ದಿಗ್ದಿಗಂತ ತಂಪು
ಆತ್ಮಸಖಿಯ ಪ್ರೇಮ ಕಾವ್ಯ
ಸ್ಫುರಿಸಿ ಹೃದಯ ಸೊಂಪು
-ವಿಶ್ವಾಸ್ ಭಾರದ್ವಾಜ್..

No comments:

Post a Comment